ಕೋಟಿ ಕೋಟಿ ಬಾಚಿರುವ ಭೀಮ್ಲಾ ನಾಯಕ್ ಸಿನಿಮಾದಲ್ಲಿ ರಾಣಾ ನಟಿಸಿರುವ ಪಾತ್ರದಲ್ಲಿ ಸುದೀಪ್ ನಟನೆ ಮಾಡದೇ ಇದ್ದದು ಒಳ್ಳೆದಾಯ್ತು ಎಂದ ಫ್ಯಾನ್ಸ್, ಯಾಕೆ ಗೊತ್ತೇ??

5,216

ನಮಸ್ಕಾರ ಸ್ನೇಹಿತರೇ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಈಗ ಟಾಲಿವುಡ್ ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಭೀಮ್ಲಾ ನಾಯಕ್ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಪವನ್ ಕಲ್ಯಾಣ್ ಅವರ ಜೊತೆಗೆ ರಾಣಾ ದಗ್ಗುಬಾಟಿ ಹಾಗೂ ನಿತ್ಯಾ ಮೆನನ್ ರವರು ಕೂಡ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರವನ್ನು ನೋಡಿರುವ ಕಿಚ್ಚ ಸುದೀಪ್ ರವರ ಅಭಿಮಾನಿಗಳು ಈ ಸಿನಿಮಾದಲ್ಲಿ ಸುದೀಪ್ ರವರು ನಟಿಸದೆ ಇದ್ದಿದ್ದು ಒಳ್ಳೆದಾಯ್ತು ಎಂಬುದಾಗಿ ಹೇಳುತ್ತಿದ್ದಾರೆ.

ಹೌದು ರಾಣಾ ದಗ್ಗುಬಾಟಿ ಅವರಿಗಿಂತ ಮುಂಚೆ ಈ ಸಿನಿಮಾದಲ್ಲಿ ಆ ಪಾತ್ರಕ್ಕಾಗಿ ಸುದೀಪ್ ರವರನ್ನು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಬಿಗ್ ಬಾಸ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣದ ಬ್ಯುಸಿ ಶೆಡ್ಯೂಲ್ ಕಾರಣದಿಂದಾಗಿ ಕಿಚ್ಚ ಸುದೀಪ್ ರವರು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಕಿಚ್ಚ ಸುದೀಪ್ ಅಭಿಮಾನಿಗಳು ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ನಟಿಸದೇ ಇರುವುದು ಒಳ್ಳೆದಾಯ್ತು ಎಂದು ಹೇಳಲು ಕಾರಣವಾದರೂ ಏನು ಗೊತ್ತೆ. ಬನ್ನಿ ಈ ಕುರಿತಂತೆ ನಿಮಗೆ ಅರ್ಥವಾಗುವಂತೆ ವಿವರವಾಗಿ ಹೇಳುತ್ತೇವೆ.

ಹೌದು ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಭೀಮ್ಲಾ ನಾಯಕ್ ಚಿತ್ರ ಮಲಯಾಳಂನ ಅಯ್ಯಪ್ಪನುಂ ಕೋಷಿಯುಂ ಚಿತ್ರದ ರಿಮೇಕ್ ಚಿತ್ರವಾಗಿದೆ. ಆ ಸಿನಿಮಾದಲ್ಲಿ ನಾಯಕ ಹಾಗೂ ಇನ್ನೊಬ್ಬ ಪಾತ್ರಧಾರಿ ಇಬ್ಬರಿಗೂ ಕೂಡ ಸಮಾನವಾದ ಅವಕಾಶ ಹಾಗೂ ಮಹತ್ವವನ್ನು ನೀಡಲಾಗಿತ್ತು. ಆದರೆ ತೆಲುಗಿನಲ್ಲಿ ರಿಮೇಕ್ ಆಗಿರುವ ಈ ಸಿನಿಮಾದಲ್ಲಿ ಕೇವಲ ಪವನ್ ಕಲ್ಯಾಣ್ ಅವರ ಪಾತ್ರಕ್ಕಷ್ಟೆ ಮಹತ್ವವನ್ನು ನೀಡಲಾಗಿದೆ ಎಂಬುದಾಗಿ ಚಿತ್ರವನ್ನು ನೋಡಿರುವವರು ಹೇಳುತ್ತಿದ್ದಾರೆ. ಹೀಗಾಗಿಯೇ ಅಭಿಮಾನಿಗಳು ಒಂದು ವೇಳೆ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ರವರ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಿಸಿದ್ದರೆ ಖಂಡಿತವಾಗಿ ಅವರ ಹೀರೋ ಇಮೇಜಿಗೆ ಧಕ್ಕೆ ಆಗುತ್ತಿತ್ತು ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.