ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ತೆಲುಗಿನ ಟಾಪ್ 2 ಸ್ಟಾರ್ ನಟರು ಅತಿಥಿಗಳು ಬರುತ್ತಿದ್ದಾರೆ, ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಇವೆ. ಇದಕ್ಕೆ ಕಾರಣ ಅಭಿಮಾನಿಗಳು ಅಪ್ಪು ಚಿತ್ರರಂಗಕ್ಕೆ ಸಲ್ಲಿಸಿರುವ ಇಷ್ಟು ವರ್ಷದ ಸೇವೆಗಾಗಿ ಅವರ ಕೊನೆಯ ಚಿತ್ರಕ್ಕೆ ಸಿಗಬೇಕಾದಂತಹ ಸಕಲ ಗೌರವಗಳನ್ನು ನೀಡಬೇಕು ಎನ್ನುವುದು.
ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಜೇಮ್ಸ್ ಚಿತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಮಾರ್ಚ್ 17ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕಾಗಿ ಅಭಿಮಾನಿಗಳು ವೀರೇಶ್ ಚಿತ್ರಮಂದಿರಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾಂಜಲಿ ಮಾಡುವುದು ಹಾಗೂ ದಾಖಲೆಯ ಕಟೌಟ್ ಗಳನ್ನು ಹಾಕಿಸುವುದು ಹೀಗೆ ಹಲವಾರು ತಯಾರಿಗಳನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಒಟ್ಟಾರೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಹಬ್ಬದಂತೆ ಆಚರಿಸಬೇಕು ಎಂಬುದಾಗಿ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ.

ಇನ್ನು ಚಿತ್ರತಂಡ ಕೂಡ ಸಿನಿಮಾವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಈಗಾಗಲೇ ತಯಾರಿಯನ್ನು ನಡೆಸಿಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೆಚ್ಚಿನ ಸ್ಥಳವಾಗಿರುವ ಹೊಸಪೇಟೆಯಲ್ಲಿ ಮಾರ್ಚ್ 6ರಂದು ಬಿಡುಗಡೆಗೂ ಮುನ್ನ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಮಾಡಲು ಸಜ್ಜಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತೆಲುಗು ಚಿತ್ರರಂಗದಿಂದ ಸ್ಟಾರ್ ನಟರಿಬ್ಬರು ಬರುತ್ತಾರೆ ಎನ್ನುವ ಮಾಹಿತಿಗಳು ಈಗಾಗಲೇ ಓಡಾಡುತ್ತಿವೆ. ಮೂಲಗಳ ಪ್ರಕಾರ ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಆಗಮಿಸಲಿದ್ದಾರೆ ಎನ್ನುವ ಸುದ್ದಿಗಳು ಬಲವಾಗಿ ಓಡಾಡುತ್ತಿವೆ. ಜೇಮ್ಸ್ ಚಿತ್ರದ ಮೂಲಕ ಅಪ್ಪು ಅವರಿಗೆ ಕನ್ನಡಿಗರು ಭಾವಪೂರ್ಣ ವಿದಾಯ ವನ್ನು ಕೋರಲು ಸಜ್ಜಾಗಿದ್ದಾರೆ.