ಕೇವಲ ಒಂದು ಹಾಡಿಗೆ ಕೋಟಿ ಕೋಟಿ ಪಡೆಯುವ ಸಮಂತಾ, ಅಂಗಡಿ ಉದ್ಘಾಟನಾ ಸಮಾರಂಭಕ್ಕೆ ಪಡೆಯುವ ಚಿಲ್ಲರೇ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಸಮಂತಾ ರವರ ಬೇಡಿಕೆ ಎನ್ನುವುದು ಅವರ ವಿವಾಹ ವಿಚ್ಛೇದನ ನಂತರ ಹೆಚ್ಚಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಕೇಳುವುದಕ್ಕೆ ವಿಚಿತ್ರವೆನಿಸಿದರೂ ಇದು ಇತ್ತೀಚಿನ ದಿನಗಳಲ್ಲಿ ನಿಮಗೆ ಕಣ್ಣೆದುರು ಕಾಣುತ್ತಿರುವ ಸತ್ಯ. ಕೇವಲ ಚಿತ್ರಗಳ ಅವಕಾಶಗಳ ಸಂಖ್ಯೆ ಮಾತ್ರವಲ್ಲದೆ ಅವರು ಪಡೆಯುತ್ತಿರುವ ಸಂಭಾವನೆ ಕೂಡ ಹೆಚ್ಚಾಗಿದೆ ಎಂದರೆ ನಂಬಲೇಬೇಕು. ಅದರಲ್ಲೂ ಹಿಂದಿಯಲ್ಲಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಗಳಲ್ಲಿ ರಾಜಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಅವರ ವರ್ಚಸ್ಸು ಎನ್ನುವುದು ಇನ್ನಷ್ಟು ಹೆಚ್ಚಾಗಿದೆ.
ಯಾವುದೇ ಪಾತ್ರಕ್ಕೂ ಸೈ ಎನ್ನುವುದನ್ನು ಪುಷ್ಪಾ ಚಿತ್ರದ ಐಟಂಸಾಂಗ್ನಲ್ಲಿ ಸ್ಟೆಪ್ ಹಾಕುವುದರಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳು ಕೂಡ ಅವರ ಕೈಯಲ್ಲಿದೆ. ಕೆಲವು ಮಹಿಳಾ ಪ್ರಾಧಾನ್ಯತೆ ಹೊಂದಿರುವ ಚಿತ್ರಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಶಾಕುಂತಲಂ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದ್ದು ಎಲ್ಲಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಇನ್ನು ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬ್ರಾಂಡ್ ಪ್ರಮೋಷನ್ ಹಾಗೂ ಕೊಲಾಬರೇಷನ್ ಮೂಲಕವೂ ಕೂಡ ಸಮಂತಾ ರವರು ಹಣವನ್ನು ಗಳಿಸಿಕೊಳ್ಳುತ್ತಾರೆ.

ಇನ್ನು ಇಂದಿನ ಲೇಖನಿಯಲ್ಲಿ ನಾವು ಒಂದು ಅಂಗಡಿ ಬಿಡುಗಡೆ ಸಮಾರಂಭಕ್ಕೆ ಹೋದರೆ ಸಮಂತಾ ರವರು ಎಷ್ಟು ಹಣವನ್ನು ಚಾರ್ಜ್ ಮಾಡುತ್ತಾರೆ ಹಾಗೂ ಯಾಕೆ ಹೋಗುತ್ತಾರೆ ಎನ್ನುವುದರ ಕುರಿತಂತೆ ಹೇಳುತ್ತೇವೆ ಬನ್ನಿ. ಸಮಂತಾ ರವರು ಒಂದು ಅಂಗಡಿ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಿ ಹೋದರೆ ಹದಿನೈದು ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಇದಕ್ಕಿಂತ ಹೆಚ್ಚಾಗಿ ಅವರು ಚಾರ್ಜ್ ಮಾಡುವುದಿಲ್ಲ. ಅಂಗಡಿ ಬಿಡುಗಡೆ ಸಮಾರಂಭಗಳಿಗೆ ಸಮಂತಾ ರವರು ಹೋಗಬೇಕೆಂದೇನಿಲ್ಲ ಏಕೆಂದರೆ ಅವರಿಗೆ ಗಳಿಕೆಯ ಮೂಲಗಳು ಸಾಕಷ್ಟಿವೆ. ಆದರೂ ಜನರನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ ಅವರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕಾಗಿ ಈ ಕಾರ್ಯಕ್ರಮಗಳಿಗೆ ಹೋಗುತ್ತಾರೆ.