ಹಲವಾರು ನಟಿಯರ ಜೊತೆ ಬ್ರೇಕ್ ಅಪ್ ಮಾಡಿಕೊಂಡರೂ ಕೂಡ ರಣಬೀರ್ ರವರನ್ನೇ ಆಲಿಯಾ ಪ್ರೀತಿ ಮಾಡುತ್ತಿರುವುದು ಯಾಕೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ ಪ್ರೇಮ ಪಕ್ಷಿಗಳಾಗಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಲವ್ ಬರ್ಡ್ಸ್ ಗಳಾಗಿ ಬಾಲಿವುಡ್ ಅಂಗಳದಲ್ಲಿ ಹಾರಾಡುತ್ತಿದ್ದಾರೆ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಲವ್ ವಿಚಾರದಲ್ಲಿ ರಣಬೀರ್ ಕಪೂರ್ ಅವರ ಟ್ರಾಕ್ ರೆಕಾರ್ಡ್ ಹೇಗಿದೆ ಎನ್ನುವುದು. ಹಿಂದೆಯಷ್ಟೇ ಕರ್ನಾಟಕ ಮೂಲದ ಬಾಲಿವುಡ್ ಚಿತ್ರರಂಗದ ಟಾಪ್ ನಟಿಯಾಗಿರುವ ದೀಪಿಕಾ ಪಡುಕೋಣೆ ರವರೊಂದಿಗೆ ಸಾಕಷ್ಟು ವರ್ಷಗಳ ಕಾಲ ರಿಲೇಶನ್ ಶಿಪ್ ನಲ್ಲಿ ಇದ್ದರು.
ಆದರೆ ಇದು ಮದುವೆ ಆಗುವಷ್ಟರ ಮಟ್ಟಿಗೆ ಮುಂದುವರಿಯದೆ ಮಧ್ಯದಲ್ಲಿ ಅಂತ್ಯವಾಯಿತು. ನಂತರ ರಣಬೀರ್ ಕಪೂರ್ ಅವರ ಬುಟ್ಟಿಗೆ ಬಿದ್ದಿದ್ದು ಕತ್ರಿನಾ ಕೈಫ್. ಕತ್ರಿನಾ ಕೈಫ್ ರವರ ಜೊತೆಗೆ ಕೂಡ ಹಲವಾರು ಬಾರಿ ಹಲವಾರು ಕಡೆ ಸುತ್ತಾಡಿ ಉತ್ತಮ ಸಂಬಂಧವನ್ನು ಹೊಂದಿದ್ದರು ಕೂಡ ಕಡಿತಗೊಳಿಸಿದರು. ಸದ್ಯಕ್ಕೆ ಈಗ ಆಲಿಯಾ ಭಟ್ ರವರ ಜೊತೆಗೆ ಲವ್ ಸಂಬಂಧದಲ್ಲಿ ಇದ್ದಾರೆ. ಒಂದು ಕಾಲದಲ್ಲಿ ಆಲಿಯಾ ಭಟ್ ರವರನ್ನು ನೇಪೋಟಿಸಂ ಕಿಡ್ಸ್ ಎನ್ನುವುದಾಗಿ ಕರೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ನಟನಾ ಸಾಮರ್ಥ್ಯದ ಮೂಲಕ ತಾನು ಏನು ಎನ್ನುವುದನ್ನು ಪ್ರೇಕ್ಷಕರಿಗೆ ಸಾಬೀತುಪಡಿಸಿ ಬಾಲಿವುಡ್ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಆಲಿಯಾ ಭಟ್ ನಟನೆಯ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಗಂಗೂಬಾಯಿ ಕಾಥಿಯವಾಡಿ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈ ಚಿತ್ರದ ಮೂಲಕ ಇನ್ನಷ್ಟು ಸುದ್ದಿಯಲ್ಲಿದ್ದಾರೆ. ಈಗಾಗಲೇ ಹಲವಾರು ಬ್ರೇಕಪ್ ಗಳನ್ನು ಮಾಡಿಕೊಂಡಿರುವ ರಣಬೀರ್ ಕಪೂರ್ ಅವರನ್ನು ಯಾಕೆ ಪ್ರೀತಿ ಮಾಡಿದ್ದಾರೆ ಎನ್ನುವುದರ ಕುರಿತಂತೆ ರಹಸ್ಯ ಬಯಲಾಗಿದೆ. ಹೌದು ಆಲಿಯಾ ಭಟ್ ಅವರಿಗೆ ರಣಬೀರ್ ಕಪೂರ್ ಅವರ ಮೇಲಿನ ಪ್ರೀತಿ ಇಂದು-ನಿನ್ನೆಯದಲ್ಲ. ಚಿಕ್ಕ ಹುಡುಗಿ ಇದ್ದಾಗಿನಿಂದಲೂ ಕೂಡ ತೆರೆಯ ಮೇಲೆ ರಣಬೀರ್ ಕಪೂರ್ ಅವರನ್ನು ನೋಡಿದಾಗಿನಿಂದ ಮದುವೆಯಾದರೆ ನಾನು ಇವರನ್ನೇ ಮದುವೆಯಾಗಬೇಕು ಎನ್ನುವುದಾಗಿ ಅಂದುಕೊಂಡಿದ್ದರಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಅವರ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ ಅತಿಶೀಘ್ರದಲ್ಲಿ ಮದುವೆ ಆಗುವುದಿಲ್ಲ ಎನ್ನುವುದನ್ನು ಕೂಡ ಖುಲಾಸೆಗೊಳಿಸಿದ್ದರು