ಮಹೇಶ್ ಮುಂದಿನ ಸಿನಿಮಾ ನಟಿ ಕೀರ್ತಿ ಸುರೇಶ್ ವಿರುದ್ಧ ಗರಂ ಆದ ಮಹೇಶ್ ಫ್ಯಾನ್ಸ್, ನೀವು ಮಾಡಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದ್ದು ಯಾಕೆ ಗೊತ್ತೇ??

1,511

ನಮಸ್ಕಾರ ಸ್ನೇಹಿತರೇ ನಟಿ ಕೀರ್ತಿ ಸುರೇಶ್ ರವರು ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಕೆಲವು ಸಿನಿಮಾಗಳು ಸಾಲುಸಾಲಾಗಿ ಸೋಲು ಕಂಡರೂ ಕೂಡ ತಮ್ಮ ಬೇಡಿಕೆಯನ್ನು ಇನ್ನು ಕೂಡ ಉಳಿಸಿಕೊಂಡಿದ್ದಾರೆ. ಇದಕ್ಕೆ ಪ್ರಮುಖವಾಗಿ ಅವರ ನಟನೆ ಕಾರಣ ಎಂದು ಹೇಳಬಹುದಾಗಿದೆ. ಮಹಾನಟಿ ಸಿನಿಮಾದಲ್ಲಿ ಎಲ್ಲರೂ ಮೆಚ್ಚುವಂತಹ ನಟನಾ ಪ್ರದರ್ಶನವನ್ನು ನೀಡಿದ್ದರು. ಇದಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡು ಭಾರತೀಯ ಚಿತ್ರರಂಗ ವೆಚ್ಚ ಬೇಕಾದಂತಹ ನಟಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಎಂತಹುದೇ ಪಾತ್ರವಿರಲಿ ನಟಿ ಕೀರ್ತಿ ಸುರೇಶ್ ರವರು ಅದನ್ನು ಪರಿಪೂರ್ಣ ಹಾಗೂ ಪರಿಪಕ್ವವಾಗಿ ಪೂರ್ಣಗೊಳಿಸುತ್ತಾರೆ.

ಇನ್ನು ಇತ್ತೀಚಿಗಿನ ದಿನಗಳಲ್ಲಿ ಎರಡು ವಿಚಾರಗಳಿಗಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಒಂದು ಕೀರ್ತಿ ಸುರೇಶ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸರ್ಕಾರು ವಾರಿ ಪಾಠ ಚಿತ್ರದ ಕುರಿತಂತೆ. ಇನ್ನೊಂದು ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಗಾಂಧಾರಿ ಹಾಡಿನ ಬಗ್ಗೆ. ಎರಡು ವಿಚಾರಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆ ಯಲ್ಲಿದ್ದಾರೆ. ಇನ್ನು ಇನ್ನೊಂದು ವಿಚಾರಕ್ಕೆ ಕೀರ್ತಿ ಸುರೇಶ ರವರು ಸದಾಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಮೆಚ್ಚುಗೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದೇನೆಂದರೆ ತಾನು ಗ್ಲಾಮರಸ್ ಅಂದರೆ ತುಂಡು ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಅವರ ನಿರ್ಧಾರ.

ಆದರೆ ಸದ್ಯಕ್ಕೆ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಠ ಚಿತ್ರತಂಡ ನಟಿ ಕೀರ್ತಿ ಸುರೇಶ್ ರವರ ವಿರುದ್ಧ ಗರಮ್ ಆಗಿದೆ ಎಂದು ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಸರ್ಕಾರು ವಾರಿ ಪಾಠ ಚಿತ್ರದ ನಿರ್ಮಾಪಕರ ಅಭಿಪ್ರಾಯದಂತೆ ಸಿನಿಮಾ ಬಿಡುಗಡೆಗೂ ಮುನ್ನ ಕೀರ್ತಿ ಸುರೇಶ್ ರವರು ಗಾಂಧಾರಿ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು ತಪ್ಪು ಎಂದು ಹೇಳಲಾಗುತ್ತಿದೆ. ಈಗಾಗಲೇ ಗಾಂಧಾರಿ ಹಾಡು ವ್ಯಾಪಕವಾಗಿ ವೀಕ್ಷಕರಿಂದ ಮೆಚ್ಚುಗೆಗೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬೋಲಾಶಂಕರ ಚಿತ್ರದಲ್ಲಿ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕೀರ್ತಿ ಸುರೇಶ್ ರವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ