ರಕ್ಷಿತ್​ ಶೆಟ್ಟಿ ಜೊತೆ ಇದೇ ಕಾರಣಕ್ಕೆ ಬ್ರೇಕಪ್​, 4 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ. ಏನಂತೆ ಗೊತ್ತೇ??

79,476

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾನ್ವಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸಂಚಲನವನ್ನು ಸೃಷ್ಟಿಸಿದವರು ರಶ್ಮಿಕ ಮಂದಣ್ಣ. ಈಗ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಸೆಲೆಬ್ರಿಟಿ ಯಾಗಿದ್ದಾರೆ. ಹೌದು ಒಂದು ಕಾಲದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರೊಂದಿಗೆ 2017 ರಲ್ಲಿ ಎಂಗೇಜ್ಮೆಂಟ್ ಆಗುವ ಮೂಲಕ ಸುದ್ದಿಯಾಗಿದ್ದರು. ಈಗ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕನಟಿ ಆಗುವುದರ ಮೂಲಕ ಸುದ್ದಿಯಾಗುತ್ತಿದ್ದಾರೆ.

ಇಡೀ ದೇಶವೇ ಇವರನ್ನು ಹೊಗಳುತ್ತಿದ್ದರು ಕೂಡ ಕನ್ನಡಿಗರಿಗೆ ಇವರೆಂದರೆ ಎಣ್ಣೆ ಸೀಗೆಕಾಯಿ ಸಂಬಂಧ ಎಂದು ಹೇಳಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಟ್ರೋಲ್ ಮಾಡಲು ಎರಡು ಕಾರಣಗಳಿವೆ. ಮೊದಲ ಕಾರಣವೆಂದರೆ ರಶ್ಮಿಕಾ ಮಂದಣ್ಣ ಅವರ ಕನ್ನಡ ಹಾಗೂ ಕರ್ನಾಟಕದ ಕುರಿತಂತೆ ಇರುವ ಕಡೆಗಣನೆ. ಇನ್ನು 2017 ದಲ್ಲಿ ರಶ್ಮಿಕ ಮಂದಣ್ಣ ನವರು ರಕ್ಷಿತ್ ಶೆಟ್ಟಿ ಅವರನ್ನು ನಿಶ್ಚಿತಾರ್ಥ ಆದ ಮೇಲೆ ಕೂಡ ಅವರಿಂದ ದೂರ ಆಗಿದ್ದು. ಇದುವರೆಗೂ ಇವರ ನಡುವೆ ಹಾಗಾಗಿದೆ ಹೀಗಾಗಿದೆ ಎನ್ನುವ ಹಲವಾರು ಗಾಳಿಸುದ್ದಿಗಳು ಓಡಾಡುತ್ತಿದ್ದವು. ಈಗ ನಾಲ್ಕು ವರ್ಷದ ನಂತರ ಈ ಕುರಿತಂತೆ ಪರೋಕ್ಷವಾಗಿ ರಶ್ಮಿಕ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಸಂದರ್ಶನವೊಂದರಲ್ಲಿ ಮದುವೆ ಕುರಿತಂತೆ ಮಾತನಾಡುತ್ತಾ ನಾನಿನ್ನೂ ಚಿಕ್ಕವಳು ಎಂಬುದಾಗಿ ಹೇಳಿದ್ದಾರೆ. ಲೆಕ್ಕದಲ್ಲಿ ಹೇಳುವುದಾದರೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ 14ವರ್ಷಗಳ ಅಂತರವಿತ್ತು. ಇಷ್ಟು ಮಾತ್ರವಲ್ಲದೆ ನಾಲ್ಕು ವರ್ಷಗಳ ಹಿಂದೆ ರಶ್ಮಿಕ ಮಂದಣ್ಣ ಅವರಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸಾಗಿತ್ತು. ಹೀಗಾಗಿ ಇವರ ಮದುವೆ ಮುರಿದು ಬೀಳುವುದಕ್ಕೆ ರಶ್ಮಿಕ ಮಂದಣ್ಣ ಅವರ ಚಿಕ್ಕ ವಯಸ್ಸು ಕಾರಣ ಎಂದು ಹೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ರವರ ಜೊತೆಗೆ ರಶ್ಮಿಕ ಮಂದಣ್ಣ ನವರು ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.