ಪಿಯುಸಿ, ಡಿಗ್ರಿ ಮುಗಿಸಿದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ ಒಂದು ಲಕ್ಷದವರೆಗೆ ಸಂಬಳ. ವಿವಿಧ ಹುದ್ದೆಗಳ ಅರ್ಹತೆಯೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನೀವು ಪಿಯುಸಿ, ಎಂ ಎಸ್ಸಿ ಮುಗಿಸಿದ್ದು, ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ, ಕರ್ನಾಟಕ ಸರ್ಕಾರದಲ್ಲಿ ಉದ್ಯೋಗಾವಕಾಶಗಳಿವೆ. ನೀವು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಈ ಉದ್ಯೋಗದ ಬಗ್ಗೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ. ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತನ್ನಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ, 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಇನ್ನು ರೇಷ್ಮೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳು, ಸೈಂಟಿಸ್ಟ್-ಸಿ- 2 ಹುದ್ದೆಗಳು, ಸೈಂಟಿಸ್ಟ್-ಬಿ- 1 ಹುದ್ದೆ, ಸೀನಿಯರ್ ರಿಸರ್ಚ್ ಅಸಿಸ್ಟೆಂಟ್-5ಹುದ್ದೆಗಳು, ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್-1 ಹುದ್ದೆ ಒಟ್ಟು 9 ಹುದ್ದೆಗಳು ಭರ್ತಿಯಾಗಬೇಕಿವೆ. ಇನ್ನು ಈ ಹುದ್ದೆಗಳಿಗೆ ಅರ್ಹ ವಿದ್ಯಾರ್ಹತೆಯನ್ನು ನೋಡುವುದಾದರೆ, ಸೈಂಟಿಸ್ಟ್-ಸಿ- ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ, ಕೀಟಶಾಸ್ತ್ರದಲ್ಲಿ ಎಂಎಸ್ಸಿ (ಅಗ್ರಿ), ರೇಷ್ಮೆ ಕೃಷಿ/ಕೀಟಶಾಸ್ತ್ರ/ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ, ಜವಳಿ ತಂತ್ರಜ್ಞಾನ/ ಜವಳಿ ವಿಜ್ಞಾನ/ಜವಳಿ ರಸಾಯನಶಾಸ್ತ್ರ/ಫೈಬರ್ ಸೈನ್ಸ್ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ನಲ್ಲಿ ಎಂಟೆಕ್ ಮುಗಿಸಿರಬೇಕು. ಸೈಂಟಿಸ್ಟ್-ಬಿ ಹುದ್ದೆಗೆ ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ ಎಂ ಎಸ್ಸಿ, ಕೀಟಶಾಸ್ತ್ರದಲ್ಲಿ ಎಂ ಎಸ್ಸಿ (ಅಗ್ರಿ), ರೇಷ್ಮೆ ಹುಳು ಶರೀರಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರದಲ್ಲಿ ಪಿಹೆಚ್ ಡಿ, ಜವಳಿ ತಂತ್ರಜ್ಞಾನ/ಜವಳಿ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಆಗಿರಬೇಕು. ಇನ್ನು ಸೀನಿಯರ್ ರಿಸರ್ಚ್ ಅಸಿಸ್ಟೆಂಟ್-ರೇಷ್ಮೆ ಕೃಷಿ/ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಕೀಟಶಾಸ್ತ್ರದಲ್ಲಿ ಎಂಎಸ್ಸಿ(ಅಗ್ರಿ) ಕೀಟಶಾಸ್ತ್ರ/ಸಿರಿಕಲ್ಚರ್, ಜವಳಿ, ರೇಷ್ಮೆ ತಂತ್ರಜ್ಞಾನದಲ್ಲಿ ಬಿ.ಇ ಅಥವಾ ಬಿಟೆಕ್, ಜವಳಿ ರಸಾಯನಶಾಸ್ತ್ರದಲ್ಲಿ ಬಿಎಸ್ಸಿ ಟೆಕ್ ಆಗಿರಬೇಕು. ಇನ್ನು ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್- ಪಿಯುಸಿ ಮುಗಿಸಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೈಂಟಿಸ್ಟ್-ಸಿ- 45 ವರ್ಷ, ಸೈಂಟಿಸ್ಟ್-ಬಿ- 40 ವರ್ಷ, ಸೀನಿಯರ್ ರಿಸರ್ಚ್ ಅಸಿಸ್ಟೆಂಟ್-35 ವರ್ಷ ವಯಸ್ಸಾಗಿರಬೇಕು. ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ ಹುದ್ದೆಗೆ ರೇಷ್ಮೆ ನೇಮಕಾತಿ ಅಧಿಸೂಚನೆ ಪ್ರಕಾರ ವಯೋಮಿತಿ ಇರುತ್ತದೆ. ಪ್ರವರ್ಗ 2ಎ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಎಸ್ ಸಿ ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಸಾವಿರ ರೂಪಾಯಿ ಅರ್ಜಿ ಶುಲ್ಕವಿರುತ್ತದೆ. ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 250 ರೂ, ಪ್ರವರ್ಗ 1 ಅಭ್ಯರ್ಥಿಗಳಿಗೆ -500 ರೂ ಅರ್ಜಿ ಶುಲ್ಕವಿರುತ್ತದೆ. ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಮೂಲಕ ಸಲ್ಲಿಸಬೇಕು.
ಇನ್ನು ಅಭ್ಯರ್ಥಿಗಳ ಅನುಭವದ ಬಗ್ಗೆ ಹೇಳುವುದಾದರೆ ಸೈಂಟಿಸ್ಟ್-ಸಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೀಟಶಾಸ್ತ್ರ / ಕೀಟ ರೋಗಶಾಸ್ತ್ರ / ಸೂಕ್ಷ್ಮ ಜೀವವಿಜ್ಞಾನ / ಕೀಟ ನಿರ್ವಹಣೆಯಲ್ಲಿ 5 ವರ್ಷಗಳ ಪೋಸ್ಟ್ ಡಾಕ್ಟರೇಟ್ ಸಂಶೋಧನಾ ಅನುಭವವನ್ನು ಹೊಂದಿರಬೇಕು. ಅಥವಾ ಜವಳಿ ಉದ್ಯಮ/ಸಂಶೋಧನೆಯಲ್ಲಿ 05 ವರ್ಷಗಳ ಅನುಭವವನ್ನು ಹೊಂದಿರಬೇಕು. ಸೈಂಟಿಸ್ಟ್-ಬಿ ಹುದ್ದೆಗೆ ಅಭ್ಯರ್ಥಿಗಳು ಕೀಟ ರೋಗಶಾಸ್ತ್ರ/ಬಯೋ-ಕೆಮಿಸ್ಟ್ರಿ/ ಅಥವಾ ಜವಳಿ ಉದ್ಯಮ/ಸಂಶೋಧನೆಯಲ್ಲಿ 02 ಕ್ವಾಡ್ವರ್ಷಗಳ ಅನುಭವವನ್ನು ಹೊಂದಿರಬೇಕು.
ಸೈಂಟಿಸ್ಟ್-ಸಿ ಹುದ್ದೆಗೆ ಆಯ್ಕೆಯಾದರೆ ತಿಂಗಳಿಗೆ 56,800-99,600 ರೂ., ಸೈಂಟಿಸ್ಟ್-ಬಿ ಹುದ್ದೆಗೆ 52,650-97,100 ರೂ., ಸೀನಿಯರ್ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ 27,650-52,650 ರೂ. ಹಾಗೂ ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ ಹುದ್ದೆಗೆ 21,400-42,000 ರೂಪಾಯಿ ತಿಂಗಳ ವೇತನ ನಿಗದಿಪಡಿಸಲಾಗಿದೆ. ಹಾಗೆಯೇ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿ. ವಿಳಾಸ: ನಿರ್ದೇಶಕರು, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ತಲಗಟ್ಟಪುರ, ಕನಕಪುರ ರಸ್ತೆ, ಬೆಂಗಳೂರು – 560109. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು kssrdi.karnataka.gov.in ಗೆ ಭೇಟಿ ನೀಡಿ.