ನಟ ಚರಣ್ ರಾಜ್ ಗೆ ಅಪ್ಪುವಿನಲ್ಲಿ ಸ್ವಾಮಿ ವಿವೇಕಾನಂದರು ಕಾಣಿಸುತ್ತಾರಂತೆ ಯಾಕೆ ಗೊತ್ತಾ?? ಕಾರಣ ಕೇಳಿದರೆ ಭೇಷ್ ಎನ್ನುತ್ತೀರಿ.

306

ನಮಸ್ಕಾರ ಸ್ನೇಹಿತರೇ ಅಪ್ಪು ಗೆ ಅಪ್ಪುನೇ ಸರಿಸಾಟಿ. ಅವರ ಗುಣ, ನಡತೆ, ಸರಳತೆ ಇದನ್ನು ಬೇರೆ ಯಾರೂ ಮೀರಿಸೋದಕ್ಕೇ ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ ಅಷ್ಟೇ. ಆದರೆ ಮಾನಸಿಕವಾಗಿ ಎಂದೆಂದೂ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತಾರೆ. ಇಂದು ಅಪ್ಪು ಅವರ ನೆನಪಿನಲ್ಲಿ ಚಂದನವನದ ಹಲವಾರು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ತಮ್ಮ ಸಿನಿಮಾಗಳತ್ತ ಗಮನಹರಿಸಿದ್ದಾರೆ. ಆದರೆ ಸಿನಿಮಾದ ಯಾವುದೇ ಕಾರ್ಯಕ್ರಮವಿರಲಿ, ಪ್ರಚಾರ ವಿರಲಿ ಅಪ್ಪು ಅವರ ಬಗ್ಗೆ ವೇದಿಕೆಯ ಮೇಲೆ ಮಾತನಾಡದೇ ಇರುವವರೇ ಇಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವರ್ಚಸ್ಸೇ ಹಾಗೆ. ಯಾರು ಎಷ್ಟು ಬೇಕಾದ್ರೂ ಅವರ ಬಗ್ಗೆ ಮಾತನಾಡಬಹುದು. ಅಂತಹ ಅಗಾಧ ವ್ಯಕ್ತಿತ್ವ ಅವರದ್ದು. ಇತ್ತೀಚಿಗೆ ಪ್ರೇಮ್ ಅವರ ಏಕ ಲವ್ ಯಾ ಸಿನಿಮಾದ ಪ್ರಿಯ ರಿಲೀಸ್ ಇವೆಂಟ್ ನಡೆದಿತ್ತು. ಇಲ್ಲಿಯೂ ಕೂಡ ಅಪ್ಪು ಅವರ ಗುಣಗಾನ ಕೇಳಿ ಅಭಿಮಾನಿಗಳು ಚಪ್ಪಾಳೆ ತಟ್ಟಿದರು, ಭಾವುಕರಾದರು. ಹೀಗೆ ಪುನೀತ್ ಅವರ ಬಗ್ಗೆ ಅತ್ಯುತ್ತಮವಾಗಿ ಮಾತನಾಡಿದವರು ಬೇರೆ ಯಾರು ಅಲ್ಲ ಬಹುಭಾಷಾ ನಟ ಎನಿಸಿರುವ ನಟ ಚರಣ್ ರಾಜ್ ಅವರು. ಹಾಗಾದ್ರೆ ಅವರು ಅಪ್ಪು ಬಗ್ಗೆ ಹೇಳಿದ್ದು ಏನು ಗೊತ್ತಾ?

ಪುನೀತ್ ಅವರ ಒಳ್ಳೆಯತನ, ಅವರ ಸರಳತೆ ಹಾಗೂ ಅವರಲ್ಲಿರುವ ಸಹಾಯ ಮಾಡುವ ಗುಣ ಎಲ್ಲರಿಗೂ ಗೊತ್ತು. ಹಾಗಾಗಿ ಅವರನ್ನು ಹತ್ತಿರದಿಂದ ನೋಡಿರುವ ಚರಣ್ ರಾಜ್ ಒಂದು ಮಾತನ್ನು ಹೇಳುತ್ತಾರೆ. ನಮ್ಮ ಅಪ್ಪು ಹಾಗೂ ಈ ದೇಶ ಕಂಡ ಮಹಾನ್ ವ್ಯಕ್ತಿ, ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದ ಇಬ್ಬರೂ ಒಂದೇ ರೀತಿ. ನಮ್ಮ ಪುನೀತ್ ಅವರ ಫೋಟೋದ ಪಕ್ಕ ವಿವೇಕಾನಂದ ಅವರ ಫೋಟೋವನ್ನು ಇಟ್ಟು ನೋಡಿ ಇಬ್ಬರೂ ಒಂದೇ ರೀತಿ ಕಾಣಿಸ್ತಾರೆ. ಸ್ವಾಮಿ ವಿವೇಕಾನಂದ ಅವರು ಈ ದೇಶಕ್ಕಾಗಿ ತಮ್ಮ 39 ವರ್ಷವನ್ನು ಮೀಸಲಿಟ್ಟರು ಅದೇ ರೀತಿ ಪುನೀತ್ ರಾಜಕುಮಾರ್ ಅವರು ಕೂಡ ಸಾಕಷ್ಟು ಜನರಿಗೆ ಸಹಾಯ ಮಾಡುವುದರ ಮೂಲಕ ಸ್ವಾಮಿ ವಿವೇಕಾನಂದರಂತೆ ಹೆಸರುಗಳಿಸಿದರು. ನಾನು ಇವತ್ತು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದಿಷ್ಟೆ, ಸ್ವಾಮಿ ವಿವೇಕಾನಂದ ಅವರ ಫೋಟೋದ ಜೊತೆ ಪುನೀತ್ ಅವರ ಫೋಟೋವನ್ನು ಇಟ್ಟು ಪೂಜೆ ಮಾಡಿ, ಅಂತಹ ವ್ಯಕ್ತಿತ್ವ ಅವರದ್ದು ಎಂದು ಚರಣ್ ರಾಜ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ತಮ್ಮ ಪ್ರೀತಿಯ ಮಾತುಗಳನ್ನು ಆಡಿದರು. ಪುನೀತ್ ಅಂದ್ರೆ ಎಂದೆಂದೂ ನಶಿಸದ ನೆನಪು!