ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಮೊದಲ ದಿನದ ಬೆಳಿಗ್ಗೆ ಹೆಣ್ಣಿನ ಮನಸ್ಸಿನಲ್ಲಿ ಬರುವ 3 ಆಲೋಚನೆ ಯಾವ್ಯಾವು ಗೊತ್ತೇ?

2,643

ನಮಸ್ಕಾರ ಸ್ನೇಹಿತರೇ ಗಂಡಾಗಲಿ ಹೆಣ್ಣಾಗಲಿ ಪ್ರತಿಯೊಬ್ಬರ ಜೀವನದಲ್ಲಿ ಎನ್ನುವುದು ಮದುವೆಯೆನ್ನುವುದು ಆಗಲೇಬೇಕು ಅದೊಂದು ಪ್ರಮುಖ ಘಟ್ಟ ವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆಗೂ ಮುನ್ನ ಹಾಗೂ ಮದುವೆ ನಂತರ ಸಾಕಷ್ಟು ಬದಲಾವಣೆಗಳು ನಡೆಯುತ್ತದೆ. ಮದುವೆಗೂ ಮೊದಲು ಅವರಿಗೆ ಸ್ವಚ್ಛಂದವಾಗಿ ಯಾರ ಆಕ್ಷೇಪಣೆ ಇಲ್ಲದೆ ಹಾಯಾಗಿರುತ್ತಾರೆ.

ಮದುವೆ ನಿಶ್ಚಯವಾದ ನಂತರ ಅವರಿಗೆ ಯೋಚನೆ ಮಾಡಲು ಹೆಚ್ಚಿನ ಸಮಯಗಳು ದೊರಕುವುದಿಲ್ಲ. ಹೀಗಾಗಿ ಮದುವೆ ಆದ ನಂತರ ಮಾರನೇ ದಿನ ಬೆಳಿಗ್ಗೆ ಅವರಿಗೆ ಹಲವಾರು ವಿಚಾರಗಳು ಹಾಗೂ ಚಿಂತೆಗಳು ಪ್ರಾರಂಭವಾಗುತ್ತದೆ. ಅವುಗಳು ಯಾವುವು ಎನ್ನುವುದರ ಕುರಿತಂತೆ ಇಂದಿನ ಲೇಖನಿಯಲ್ಲಿ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಬೆಳಗ್ಗೆ ಬೇಗ ಏಳುವ ಚಿಂತೆ; ಹೌದು ಗೆಳೆಯರೆ ಮದುವೆಯಾದ ನಂತರ ಮೊದಲ ದಿನದ ಬೆಳಗ್ಗೆ ಬೇಗ ಎದ್ದು ತನ್ನ ಅತ್ತೆಯ ಕಾಲಿಗೆ ಸ್ಪರ್ಶ ಮಾಡಿ ಅವರಿಗೆ ಟೀ ತಯಾರಿಸಿ ಕೊಡುವ ಕುರಿತಂತೆ ಯೋಚಿಸುತ್ತಿರುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಗಂಡನ ಮನೆಯಲ್ಲಿ ಅತ್ಯಂತ ಪ್ರಮುಖವಾಗಿ ಅತ್ತೆಯ ಮನಸ್ಸನ್ನು ಗೆಲ್ಲುವುದು ಮುಖ್ಯವಾಗಿರುತ್ತದೆ. ಮೊದಲ ದಿನದ ಬೆಳಿಗ್ಗೆಯಿಂದಲೇ ನಾನು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಗಂಡನ ಮನೆಯವರೆಲ್ಲರ ನೆಚ್ಚಿನ ಸೊಸೆಯಾಗಿ ಇರುತ್ತೇನೆ ಎಂಬುದಾಗಿ ಅವರು ಲೆಕ್ಕ ಹಾಕಿಕೊಂಡಿರುತ್ತಾರೆ. ಹೀಗಾಗಿ ಮೊದಲ ದಿನದ ಬೆಳಗ್ಗೆ ಏಳುವ ಚಿಂತೆ ಅವರಲ್ಲಿರುತ್ತದೆ.

ಪತಿಯ ಕುರಿತಂತೆ ಅಸಮಂಜಸ ಅಭಿಪ್ರಾಯಗಳು; ಮದುವೆ ಹಾಗು ತನ್ನ ಸಂಗಾತಿಯ ಕುರಿತಂತೆ ಹುಡುಗಿ ಮೊದಲಿನಿಂದಲೂ ಕೂಡ ಸಾಕಷ್ಟು ವಿಚಾರಗಳನ್ನು ಹೊಂದಿರುತ್ತಾಳೆ. ತನ್ನ ಸಂಗಾತಿ ನನಗೆ ಸಂಪೂರ್ಣ ಪ್ರೀತಿಯನ್ನು ನೀಡುತ್ತಾನೆಯೇ ನನಗೆ ಸಮಯವನ್ನು ನೀಡಬಲ್ಲನೇ ಎಂಬೆಲ್ಲಾ ಗೊಂದಲಗಳನ್ನು ಹೊಂದಿರುತ್ತಾರೆ. ತನ್ನ ಇಚ್ಛೆಗಳನ್ನು ಪೂರ್ತಿ ಮಾಡುತ್ತಾರೋ ಇಲ್ಲವೋ ಎನ್ನುವ ಗೊಂದಲದಲ್ಲಿ ಕೂಡ ಇರುತ್ತಾರೆ. ಹೀಗಾಗಿ ಆತನನ್ನು ಸಂಗಾತಿಯಾಗಿ ಆಯ್ಕೆ ಮಾಡಿರುವುದು ನನ್ನ ಜೀವನದ ಸರಿಯಾದ ನಿರ್ಧಾರವೋ ಇಲ್ಲವೋ ಎನ್ನುವ ಗೊಂದಲದಲ್ಲಿ ಮೊದಲ ದಿನದ ಬೆಳಿಗ್ಗೆಯನ್ನು ಆರಂಭಿಸುತ್ತಾಳೆ.

ನಂತರ ಅವಳೇ ಧೈರ್ಯವನ್ನು ಕೊಡ ತೆಗೆದುಕೊಳ್ಳುತ್ತಾಳೆ ಯಾಕೆಂದರೆ ತನ್ನ ತಂದೆ-ತಾಯಿ ನನಗಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದಾಗಿ. ಇದಕ್ಕಾಗಿ ಮೊದಲ ದಿನದಿಂದಲೇ ತನ್ನ ಸಂಗಾತಿಯ ಇಷ್ಟ-ಕಷ್ಟಗಳನ್ನು ಸರಿಯಾಗಿ ಗ್ರಹಿಸಿ ಅದರ ತಕ್ಕಂತೆ ದೈನಂದಿನ ಜೀವನವನ್ನು ನಡೆಸುವ ಕುರಿತಂತೆ ಪರೀಕ್ಷಿಸುತ್ತಾಳೆ.

ಗಂಡನ ಮನೆಯ ವಾತಾವರಣ ಹೇಗಿರಬಹುದು; ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಹುಡುಗಿಯ ಜೀವನ ಎನ್ನುವುದು ಸಂಪೂರ್ಣವಾಗಿ ಬದಲಾಗುತ್ತದೆ. ಯಾಕೆಂದರೆ ಆಕೆ ಹಲವಾರು ವರ್ಷಗಳಿಂದ ತನ್ನ ತವರು ಮನೆಯ ವಾತಾವರಣಕ್ಕೆ ಹೊಂದಿಕೊಂಡಿದ್ದರು. ಒಮ್ಮೆಲೆ ಗಂಡನ ಮನೆಗೆ ಅಂದರೆ ಹೊಸ ವಾತಾವರಣಕ್ಕೆ ಹೋದಾಗ ಅಲ್ಲಿ ಒಗ್ಗಿಕೊಳ್ಳುವುದು ಆಕೆಗೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ಆದರೂ ಕೂಡ ಗಂಡನ ಮನೆಯ ವಾತಾವರಣಕ್ಕೆ ಹೇಗೆ ಒಗ್ಗಿಕೊಳ್ಳಬಹುದು ಎನ್ನುವುದನ್ನು ಆಕೆ ಹೊಂದಾಣಿಸಿಕೊಳ್ಳುತ್ತಾಳೆ. ಹೀಗೆ ಗಂಡನ ಮನೆಯಲ್ಲಿ ಎಲ್ಲರಲ್ಲಿ ಒಬ್ಬಳಾಗಳು ಪ್ರಯತ್ನಿಸುತ್ತಾಳೆ.

ಇವುಗಳೇ ಒಬ್ಬ ಹೆಣ್ಣು ಮಗಳು ಮದುವೆಯಾಗಿ ಗಂಡ ಮನೆಗೆ ಹೋದ ನಂತರ ಅವಳ ಮನಸ್ಸಿನಲ್ಲಿ ಮೂಡುವಂತಹ ವಿಚಾರಗಳು ಅಥವಾ ಗೊಂದಲಗಳು ಎಂದು ಹೇಳಬಹುದಾಗಿದೆ. ಒಂದು ವೇಳೆ ನಿಮಗೂ ಕೂಡ ಈ ವಿಚಾರ ಸಂಬಂಧ ಹೊಂದಿದ್ದರೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.