ಹರಾಜು ಮುಗಿದ ಮರು ಕ್ಷಣದದಿಂದಲೂ ಆರ್ಸಿಬಿ ಫ್ಯಾನ್ಸ್ ಅನ್ನು ಕಾಡುತ್ತಿರುವ ಪ್ರಶ್ನೆಗೆ ಸುಳಿವು ಕೊಟ್ಟ ಮೈಕ್ ಹೆಸನ್. ನಾಯಕ ಯಾರಾಗಬಹುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸದ್ಯ ಐಪಿಎಲ್ ನ ಹರಾಜು ಮುಗಿದಿದೆ. ಆದರೇ ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಹೊಸ ಫ್ರಾಂಚೈಸಿಗಳಾದ ಲಕ್ನೋ ಸೂಪರ್ ಜೈಂಟ್ಸ್, ತನ್ನ ತಂಡದ ನಾಯಕನ ಆಯ್ಕೆಯನ್ನು ಘೋಷಿಸಿದೆ. ಆದರೇ ಮತ್ತೊಂದು ಹೊಸ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್ ಇನ್ನು ನಾಯಕನನ್ನು ಘೋಷಿಸಿಲ್ಲ.

ಈ ನಡುವೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ರವರನ್ನು ನಾಯಕರನ್ನಾಗಿ ಘೋಷಿಸಿದೆ. ಇನ್ನು ಸದ್ಯ ವಿರಾಟ್ ಕೊಹ್ಲಿಯವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾರು ನಾಯಕರಾಗಿ ಬರುತ್ತಾರೆಂದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆ ಯಾಗಿದೆ. ಇನ್ನು ಆರ್ಸಿಬಿ ನಾಯಕತ್ವಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಪ್ ಡು ಪ್ಲೇಸಿಸ್ ಇಬ್ಬರಲ್ಲಿ ಯಾರು ನಾಯಕರಾಗಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ಕೆಲವು ದಿನಗಳು ಕಾಯಬೇಕಾಗುತ್ತದೆ. ಆದರೇ ಈ ಬಗ್ಗೆ ಮಾತನಾಡಿರುವ ಆರ್ಸಿಬಿ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಕೆಲವು ಮಹತ್ವದ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ.
ಹೌದು ನಾಯಕತ್ವ ಯಾರಿಗೆ ನೀಡಬೇಕು ಎಂಬ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಿರುವ ಮೈಕ್ ಹೆಸನ್ ನಮ್ಮ ಮೊದಲ ಆಯ್ಕೆ ಫಾಪ್ ಡು ಪ್ಲೇಸಿಸ್ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮುಂದುವರೆದು ಮಾತನಾಡಿರುವ ಅವರು, ಡುಪ್ಲೇಸಿಸ್ ವಿಶ್ವಾದ್ಯಂತ ಟಿ ೨೦ ಲೀಗ್ ಕ್ರಿಕೇಟ್ ಗಳನ್ನು ಆಡುತ್ತಾರೆ. ಅದಲ್ಲದೇ ಮಹತ್ವದ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಸಹ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಜೊತೆಗೆ ಐಪಿಎಲ್ ನಲ್ಲಿಯೂ ಸಹ ಆರೇಳು ವರ್ಷ ಅನುಭವ ಹೊಂದಿದ್ದಾರೆ. ಹಾಗಾಗಿ ಅವರು ನಾಯಕನು ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಬಹುತೇಕ ಫಾಪ್ ಡು ಪ್ಲೇಸಿಸ್ ರವರೇ ಆರ್ಸಿಬಿ ತಂಡದ ನಾಯಕರಾಗುವುದು ಬಹುತೇಖ ಖಚಿತವಾಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.