ಟಾಪ್ ನಟಿಯಾಗಿರುವಾಗ ಇದ್ದಕ್ಕಿದ್ದ ಹಾಗೆ ಸಿನಿಮಾ ಮಾಡುವುದನ್ನು ರಕ್ಷಿತಾ ರವರು ನಿಲ್ಲಿಸಿದ್ದು ಯಾಕೆ ಗೊತ್ತೇ??

265

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ರಕ್ಷಿತಾ ರವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ರಕ್ಷಿತಾ ಅವರು ಬಹುಬೇಡಿಕೆಯ ಹಾಗೂ ಸ್ಟಾರ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಸಡನ್ನಾಗಿ ಅವರು ಚಿತ್ರರಂಗದಿಂದ ದೂರವಾಗಿದ್ದು ನಿಜಕ್ಕೂ ಕೂಡ ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗದ ಸಿನಿಮಾ ರಸಿಕರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಬೇಡಿಕೆ ಉತ್ತುಂಗದ ಕಾಲದಲ್ಲಿ ಇದ್ದಾಗಲೇ ನಟಿ ರಕ್ಷಿತಾ ರವರು ಕನ್ನಡ ಚಿತ್ರರಂಗವನ್ನು ಒಮ್ಮೆಲೆ ಬಿಟ್ಟಿದ್ದು ಎಲ್ಲರಿಗೂ ಕೂಡ ನಿರಾಸೆ ಹಾಗೂ ಆಶ್ಚರ್ಯ ಎರಡನ್ನು ಕೂಡ ಉಂಟುಮಾಡುವ ಹಾಗೆ ಮಾಡಿತ್ತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಕ್ಷಿತಾ ರವರು ನಂತರ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಮುನ್ನೆಲೆಗೆ ಬರುತ್ತಾರೆ. 2007 ರಲ್ಲಿ ನಟಿ ರಕ್ಷಿತಾ ರವರು ಕೊನೆಯ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಾರೆ. ಈಗ ಮತ್ತೊಮ್ಮೆ ಇದೇ ಫೆಬ್ರವರಿ 24ರಂದು ಬಿಡುಗಡೆ ಆಗಲಿರುವ ರಕ್ಷಿತಾ ನಿರ್ಮಾಣದ ಏಕ್ ಲವ್ ಯಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಹೌದು ಇದೇ ಸಂದರ್ಭದಲ್ಲಿ ನಟಿ ರಕ್ಷಿತಾ ಅವರು ಒಮ್ಮೆಲೆ ಯಾಕೆ ಚಿತ್ರರಂಗವನ್ನು ತೊರೆದಿದ್ದರು ಎನ್ನುವ ಕುರಿತಂತೆ ಈಗ ತಿಳಿದುಬಂದಿದೆ.

ಹೌದು ಗೆಳೆಯರೇ ನಟಿ ರಕ್ಷಿತಾ ರವರು ನಿರ್ದೇಶಕ ಪ್ರೇಮ್ ರವರನ್ನು ಮದುವೆ ಆಗುವ ಸಲುವಾಗಿ ಚಿತ್ರರಂಗದಿಂದ ದೂರವಾಗಿದ್ದರು. ಪ್ರೇಮ್ ರವರನ್ನು ಮದುವೆ ಆಗಿದ್ದು ಕೂಡ ಅತ್ಯಂತ ಕಡಿಮೆ ಸಮಯದ ಪರಿಸ್ಥಿತಿಯಲ್ಲಿ. ಮದುವೆ ಆದ ನಂತರ ಸಂಸಾರ ಮಕ್ಕಳು ಹೀಗೆ ಇದೆ ಜವಾಬ್ದಾರಿಯಲ್ಲಿ ಮಗ್ನರಾಗಿದ್ದ ರಕ್ಷಿತ ರವರು ಮತ್ತೆ ಬಣ್ಣದ ಲೋಕಕ್ಕೆ ಹೋಗಲಿಲ್ಲ. ಈಗ ಏಕ್ ಲವ್ ಯಾ ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ನಿರೀಕ್ಷೆಗಳು ಕೂಡ ಎದ್ದು ಕಾಣುತ್ತಿವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.