ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆಯ್ಕೆಯಾಗಿರುವ ಕಂಠಿ ರವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

1,902

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಹೊಸ ಹೊಸ ಪ್ರತಿಭೆಗಳ ಪರಿಚಯವಾಗುತ್ತಿದೆ. ಅವುಗಳಲ್ಲಿ ಇಂದು ನಾವು ಹೇಳಹೊರಟಿರುವ ಕಲಾವಿದ ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಜೀ ಕನ್ನಡ ವಾಹಿನಿ ಧಾರವಾಹಿಗಳ ಮಟ್ಟಿಗೆ ಟಾಪ್ ಚಾನೆಲ್ ಆಗಿ ಮೂಡಿ ಬರುತ್ತಿದೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಹಲವಾರು ವಿಚಾರಗಳಿಗಾಗಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಇತ್ತೀಚಿಗಷ್ಟೇ ಪ್ರಾರಂಭವಾಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಎಲ್ಲ ಫ್ಯಾಮಿಲಿ ಆಡಿಯನ್ಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇನ್ನು ಈ ಧಾರವಾಹಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರವಾಹಿಯಲ್ಲಿ ಮತ್ತೊಂದು ಎಲ್ಲರಿಗೂ ಇಷ್ಟವಾಗಿರುವ ಪಾತ್ರವೆಂದರೆ ಆದರೂ ಕಂಠಿ ಪಾತ್ರ. ಈ ಕಂಠಿ ಪಾತ್ರವನ್ನು ನಿರ್ವಹಿಸುತ್ತಿರುವವರು ಧನುಷ್ ಎಂಬುವ ಹುಡುಗ. ಧನುಷ್ ಯಾವುದೇ ದೊಡ್ಡಮಟ್ಟದ ಫ್ಯಾಮಿಲಿ ಹಿನ್ನೆಲೆಯಿಲ್ಲದೆ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮ ಶ್ರದ್ಧೆಯ ಮುಖಾಂತರ ಆಡಿಷನ್ ನಲ್ಲಿ ಪಾಸಾಗಿ ಈ ಪಾತ್ರವನ್ನು ಪಡೆದುಕೊಂಡಿದ್ದಾರೆ.

ಈಗಾಗಲೇ ಒಂದು ಸಿನಿಮಾದಲ್ಲಿ ನಾಯಕನಟನಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವನ್ನು ಹೊಂದುವ ಭರವಸೆಯನ್ನು ಕೂಡ ಮೂಡಿಸಿದ್ದಾರೆ. ಪ್ರೇಕ್ಷಕರಿಗೂ ಕೂಡ ಧನುಶ್ ರವರ ಕಂಠಿ ಪಾತ್ರ ಸಾಕಷ್ಟು ಮನಸ್ಸಿಗೆ ಹಿಡಿಸಿದೆ. ಇದೇ ಕಾರಣಕ್ಕಾಗಿ ಇತ್ತೀಚಿಗೆ ಕಂಠಿ ರವರನ್ನು ಹಲವಾರು ಹೆಣ್ಣುಮಕ್ಕಳ ಕ್ರಶ್ ಎಂದು ಕೂಡ ಕರೆಯಲಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಗಾಗಿ ಧನುಷ್ ರವರು ಒಂದು ದಿನಕ್ಕೆ 15000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅವಕಾಶಗಳು ಧನುಷ್ ರವರಿಗೆ ದೊರೆಯಲಿ ಎಂದು ಹಾರೈಸೋಣ.