ಪ್ರೇಮ ವಿವಾಹವಾಗಿ ಕೇವಲ ಎರಡು ವಾರಗಳ ನಂತರ ಗಂಡನ ಸತ್ಯಾಸತ್ಯತೆ ತಿಳಿದ ಪತ್ನಿಗೆ ಬಿಗ್ ಶಾಕ್, ಗಂಡ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮದುವೆ ಎಷ್ಟೊಂದು ಪ್ರಮುಖವಾದ ಅನುಭವ ಹಾಗೂ ಮಹತ್ವದ ಘಟ್ಟವಾಗಿರುತ್ತದೆ ಎಂಬುದು ಎಲ್ಲರಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ. ಅದರಲ್ಲೂ ಕೂಡ ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಿದರೆ ಆ ಹುಡುಗ ಇಷ್ಟ ಆಗುತ್ತಾನೆ. ಇದೇ ರೀತಿಯ ಘಟನೆಯೊಂದು ಫ್ರಾನ್ಸ್ನಲ್ಲಿ ನಡೆದಿದೆ. ಸೆಲ್ಸಿ ಜೋಸ್ ಎನ್ನುವ ಮಹಿಳೆಗೆ ವ್ಯಕ್ತಿಯೊಬ್ಬ ಪ್ಯಾರಿಸ್ ನ ಡಿಸ್ನಿಲ್ಯಾಂಡ್ ಬಳಿ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾನೆ.
ಇಷ್ಟು ಮಾತ್ರವಲ್ಲದೆ ನೀನು ನನ್ನ ಜೀವನದ ದೇವತೆ ನಿನ್ನನ್ನು ನಾನು ಪಡೆದಿರುವುದು ನನ್ನ ಅದೃಷ್ಟ. ನಿನ್ನಂತಹ ಸುಂದರಿ ಲೋಕದಲ್ಲಿ ಇನ್ಯಾರೂ ಇಲ್ಲ ಎಂಬುದಾಗೆಲ್ಲ ಅವಳನ್ನು ಬಣ್ಣಿಸಿದ್ದಾನೆ. ಇದಾದ ನಂತರ ಇಬ್ಬರೂ ಕೂಡ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ ಆದರೆ ಲಾಕ್ ಡೌನ್ ಕಾರಣದಿಂದಾಗಿ ಮದುವೆ ಮುಂದಕ್ಕೆ ಹೋಗುತ್ತದೆ ನಂತರ ಮದುವೆಯಾಗುತ್ತಾರೆ. ಮದುವೆಯಾದ ಕೆಲವೇ ಸಂದರ್ಭಗಳಲ್ಲಿ ಸೆಲ್ಸಿಯಾ ಗಂಡ ತೋರಿಸಿರುವ ವರ್ತನೆ ಈಗ ಆಕೆಯ ದುಃಖಕ್ಕೆ ಕಾರಣವಾಗಿದ್ದು ಈ ಕುರಿತಂತೆ ಆಕೆ ವಿಡಿಯೋವನ್ನು ಕೂಡ ಮಾಡಿದ್ದಾಳೆ.

ಈಗಾಗಲೇ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ಮದುವೆಯಾದ ನಂತರ ಆಕೆಯ ಗಂಡ ಆಕೆಯ ಜೊತೆಗೆ ಪ್ರೀತಿ ಇಲ್ಲ ಎಂಬುದಾಗಿ ಹೇಳಿ ಬಿಟ್ಟು ಹೋಗುತ್ತಾನೆ. ಇದರಿಂದಾಗಿ ಸಂಪೂರ್ಣವಾಗಿ ಭಾವನಾತ್ಮಕವಾಗಿ ಜರ್ಜರಿತಳಾಗಿರುವ ಸೆಲ್ಸಿ, ಇನ್ನು ನನ್ನ ಮುಂದಿನ ಜೀವನದಲ್ಲಿ ನಾನು ಯಾವ ವ್ಯಕ್ತಿಯನ್ನು ಕೂಡ ನಂಬುವುದು ಅಸಾಧ್ಯ. ಮತ್ತೊಬ್ಬರನ್ನು ಮದುವೆಯಾಗುವುದೆಂದು ದೂರದ ಮಾತು ಎಂಬುದಾಗಿ ಹೇಳಿದ್ದಾರೆ. ಇದೇ ರೀತಿಯ ಪರಿಸ್ಥಿತಿಗೆ ಒಳಗಾಗಿರುವವರು ಈ ವಿಡಿಯೋಗೆ ಕಾಮೆಂಟ್ ಮಾಡಿ ಧೈರ್ಯವಾಗಿರುವಂತೆ ಧೈರ್ಯವನ್ನು ತುಂಬಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಬರೆದುಕೊಳ್ಳಿ.