ಗೆಹರಿಯಾನ್ ಪ್ರಮೋಷನ್ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಮಿನಿ ಬ್ಲೇಜರ್ ಬೆಲೆ ಕೇಳಿದ್ರೆ ಪಕ್ಕ ಶಾಕ್ ಆಗ್ತೀರಾ. ಎಷ್ಟು ಗೊತ್ತೇ?
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದೀಪಿಕಾ ಪಡುಕೋಣೆ ಸಿದ್ಧಾಂತ ಚತುರ್ವೇದಿ ಹಾಗೂ ಅನನ್ಯ ಪಾಂಡೆ ನಟಿಸಿರುವ ಗೆಹರಿಯಾನ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಜನರಿಂದ ಮೆಚ್ಚುಗೆಯನ್ನು ಪಡೆಯುತ್ತಿದೆ. ಚಿತ್ರ ಹಲವಾರು ವಿಭಿನ್ನ ಹಾಗೂ ವೈಶಿಷ್ಟ್ಯ ಕಂಟೆಂಟ್ ಗಳನ್ನು ಒಳಗೊಂಡಿದ್ದು ಒಂದು ಲೆಕ್ಕದಲ್ಲಿ ಹೇಳುವುದಾದರೆ ಅತ್ಯಂತ ರೇರ್ ಕಂಟೆಂಟ್ ಎಂದು ಹೇಳಬಹುದಾಗಿದೆ.
ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದರೂ ಕೂಡ ಅದರಲ್ಲಿ ಕೂಡ ವಿಭಿನ್ನ ಪ್ರಕಾರವನ್ನು ಚಿತ್ರತಂಡ ಕಂಟೆಂಟ್ ಆಗಿ ಆಯ್ಕೆ ಮಾಡಿಕೊಂಡಿರುವುದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಪ್ರಮೋಶನ್ ಗಾಗಿ ಕೂಡ ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲಾ ಪ್ರಮುಖ ನಟರು ಹಲವಾರು ರೀತಿಯಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಅವರು ಚಿತ್ರದ ಪ್ರಮೋಷನ್ ಗಾಗಿ ಸ್ಟೈಲಿಶ್ ಮಿನಿ ಬ್ರೇಸರ್ ಅನ್ನು ಧರಿಸಿ ಫೋಟೋಶೂಟ್ ಮಾಡಿರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಗೆ ಒಳಗಾಗಿದೆ. ಹೌದು ಇದು ವೈಟ್ ಹಾಗೂ ಬ್ಲಾಕ್ ಕಲರ್ ಕಾಂಬಿನೇಷನ್ ಅಲ್ಲಿ ಇದ್ದು ಇನ್ಸ್ಟಾಗ್ರಾಮ್ ನ ಫೋಟೋಗಳು ಎಲ್ಲಾ ಕಡೆ ಬರಲಾಗಿ ಅಭಿಮಾನಿಗಳಿಂದ ಮೆಚ್ಚುಗೆಗೂ ಪಾತ್ರವಾಗಿದೆ.

ಇದನ್ನು ದೀಪಿಕಾ ಪಡುಕೋಣೆ ಅವರಿಗೆ ಜಾರ್ಜಿಯನ್ ಫ್ಯಾಶನ್ ಡಿಸೈನರ್ ಆಗಿರುವ ಡೇವಿಡ್ ಕೋಮ ಡಿಸೈನ್ ಮಾಡಿದ್ದಾರೆ. ಇನ್ನು ಈ ಮಿನಿ ಬ್ಲೇಜರ್ ನ ಬೆಲೆ ಕೇಳಿದ್ರೆ ನೀವು ಕೂಡ ಸುಸ್ತಾಗ್ತೀರಾ. ಈ ವೈಟ್ ಅಂಡ್ ಬ್ಲಾಕ್ ಕಾಂಬಿನೇಶನ್ ಮಿನಿ ಬ್ಲೇಜರ್ ರೆಟ್ರೋ ಸ್ಟೈಲ್ ನಲ್ಲಿ ಇದ್ದು, ಜಾಮೆಟ್ರಿಕ್ ಜಾಕ್ವಾರ್ಡ್ ಜಾಕೆಟ್ ಎಂಬುದಾಗಿ ಇದನ್ನು ಕರೆಯಲಾಗುತ್ತದೆ. ಇದರ ಬೆಲೆ ಬರೋಬ್ಬರಿ 90700 ರೂಪಾಯಿ. ಭಾರತೀಯ ಚಿತ್ರರಂಗದ ಟಾಪ್ ನಟಿ ಅಂದಮೇಲೆ ಇಂತಹ ದುಬಾರಿ ವಸ್ತ್ರಗಳನ್ನು ಅವರು ಧರಿಸುವುದು ಕಾಮನ್ ವಿಚಾರ ಬಿಡಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.