ತಂದೆಯನ್ನು ಕಳೆದುಕೊಂಡು ಬೆನ್ನಲ್ಲೆ ಮಹತ್ವದ ನಿರ್ಧಾರ ತೆಗೆದುಕೊಂಡ ಅಶ್ವಿನಿ ಅವರು ಮಾಡಿರುವ ಕೆಲಸವೇನು ಗೊತ್ತಾ??

306

ನಮಸ್ಕಾರ ಸ್ನೇಹಿತರೇ ನಾಡು ಕಂಡಂತಹ ಶ್ರೇಷ್ಠ ನಟ ಹಾಗೂ ವ್ಯಕ್ತಿತ್ವಗಳಲ್ಲಿ ಒಂದಾಗಿರುವ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ನಾವೆಲ್ಲರೂ ಎಷ್ಟು ದುಃಖ ಪಟ್ಟಿದ್ದೇವೆ ಎಂಬುದು ನಿಮಗೆಲ್ಲಾ ಗೊತ್ತಿದೆ. ನಾವು ಇಷ್ಟೊಂದು ದುಃಖವನ್ನು ಪಟ್ಟಿದ್ದರೆ ಇನ್ನು ಇಪ್ಪತ್ತು ವರ್ಷಗಳ ಕಾಲ ಅವರ ಜೊತೆಗೆ ದಾಂಪತ್ಯ ಜೀವನವನ್ನು ನಡೆಸಿರುವ ಅಶ್ವಿನಿಯವರ ಪರಿಸ್ಥಿತಿ ಹೇಗಾಗಿರಬೇಡ. ಇದರ ಬೆನ್ನಲ್ಲೇ ನಿನ್ನೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ತಂದೆ ರೇವನಾಥ್ ರವರನ್ನು ಕಳೆದುಕೊಂಡಿದ್ದಾರೆ.

ನಿಜಕ್ಕೂ ಕೂಡ ಅಶ್ವಿನಿಯವರ ಜೀವನದಲ್ಲಿ ದುಃಖದ ಸರಮಾಲೆಗಳೇ ಹರಿದು ಬರುತ್ತಿವೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಅವರಿಗೆ ದೇವರು ಎಲ್ಲವನ್ನೂ ಸಹಿಸುವ ಶಕ್ತಿಯನ್ನು ನೀಡಬೇಕಾಗಿದೆ. ಅಶ್ವಿನಿ ಅವರ ತಂದೆ ರೇವನಾಥ್ ರವರು ಬೆಂಗಳೂರಿನ ಬಿಬಿಎಂಪಿಯಲ್ಲಿ ಇಂಜಿನಿಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯನ್ನು ಹೊಂದಿದಂತಹ ವ್ಯಕ್ತಿ.

ತಮ್ಮ ಜೀವಕ್ಕೆ ಜೀವವಾಗಿರುವ ಮಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬುದನ್ನು ತಿಳಿದು ಮಗಳ ಆಸೆಯಂತೆ ಮದುವೆ ಮಾಡಿಕೊಟ್ಟಿದ್ದರು. ಪುನೀತ್ ರಾಜಕುಮಾರ್ ರವರನ್ನು ಅಳಿಯ ನಂತೆ ಅಲ್ಲ ಬದಲಾಗಿ ಮಗನಂತೆ ಕಾಣುತ್ತಿದ್ದರು. ಅವರ ಬಗೆಗೆ ತಮ್ಮ ಸ್ನೇಹಿತರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಮಗಳಿಗೆ ಒಂದು ಒಳ್ಳೆಯ ಜೀವನ ಸಿಕ್ಕಿತು ದೊಡ್ಡ ಮನೆಯ ಸೊಸೆ ಆದಳು ಎಂಬ ತೃಪ್ತಿ ಕೂಡ ಅವರಲ್ಲಿತ್ತು.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದರೆ ರೇವನಾಥ್ ರವರ ಅಳಿಯ ಅಪ್ಪು ಅಕಾಲಿಕವಾಗಿ ಮರಣವನ್ನು ಹೊಂದಿದ್ದು ಅವರಿಗೆ ನಿಜಕ್ಕೂ ಕೂಡ ಜೀವನದಲ್ಲಿ ಏನೋ ಕಳೆದುಕೊಂಡ ಭಾವ ಮೂಡುವಂತೆ ಮಾಡಿತ್ತು. ಕಪೂರ್ ಅವರನ್ನು ಕಳೆದುಕೊಂಡ ದಿನದಿಂದಲೂ ಕೂಡ ಒಂದಲ್ಲ ಒಂದು ಸಮಸ್ಯೆಯಿಂದ ರೇವನಾಥ್ ಅವರು ಬಳಲುತ್ತಿದ್ದರು. ಅಪ್ಪು ಅನ್ನು ಬಿಟ್ಟು ಇರಲಾರದೆ ಅಪ್ಪುವಿನ ಜೊತೆಯೇ ಸ್ವರ್ಗಸ್ಥರಾದರೆಂದು ಅಂದು ಕೊಳ್ಳಬಹುದಾಗಿದೆ. ನಿನ್ನೆಯಷ್ಟೇ ಹೃದಯದಲ್ಲಿ ನೋ’ವು ಕಂಡುಬಂದು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಇಲ್ಲೂ ಕೂಡ ಪುನೀತ್ ರಾಜಕುಮಾರ್ ಅವರಂತೆ ಅವರನ್ನು ಕರೆದುಕೊಂಡು ಬಂದಾಗಲೇ ಕಾಲ ಮೀರಿ ಹೋಗಿತ್ತು. ರೇವನಾಥ್ ರವರು ಅಪ್ಪುವಿನ ಜೊತೆಗೆ ಸ್ವರ್ಗಸ್ಥರಾದರು. ಕೆಲವು ತಿಂಗಳುಗಳ ಹಿಂದಷ್ಟೇ ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರಾಣಕ್ಕೆ ಪ್ರಾಣವಾಗಿದ್ದ ತಂದೆಯನ್ನು ಕಳೆದುಕೊಂಡ ದುಃಖ ಮತ್ತಷ್ಟು ಆಘಾತವನ್ನು ನೀಡಿದೆ. ಈ ಸಂದರ್ಭದಲ್ಲಿ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಂದು ನಿರ್ಧಾರವನ್ನು ತೆಗೆದುಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೇತ್ರದಾನ ದಿಂದಾಗಿ ನಾಲ್ಕು ಜನರ ಕಣ್ಣಿಗೆ ದೃಷ್ಟಿ ಬಂದಿತ್ತು. ಇದರ ಬೆನ್ನಲ್ಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ತಂದೆಯ ಕಣ್ಣನ್ನು ಕೂಡ ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದು ಈಗಾಗಲೇ ಕಣ್ಣನ್ನು ಜೋಡಿಸಲಾಗಿದ್ದು ಇಬ್ಬರಿಗೆ ದೃಷ್ಟಿಯನ್ನು ನೀಡಲಾಗಿದೆ.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಅದೇ ದುಃಖದಲ್ಲಿ ಮುಳುಗಿರುತ್ತಾರೆ. ಆದರೆ ಇಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜವಾಬ್ದಾರಿಯಿಂದ ಆಗಿ ತಮ್ಮ ತಂದೆಯ ಕಣ್ಣುಗಳನ್ನು ದಾನ ಮಾಡಿ ಇಬ್ಬರ ಜೀವನದಲ್ಲಿ ಬೆಳಗಿರುವುದು ನಿಜಕ್ಕೂ ಕೂಡ ಮೆಚ್ಚುವಂತದ್ದು. ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೀವನದಲ್ಲಿ ಸಾಲು ಸಾಲು ಜನರನ್ನು ಕಳೆದುಕೊಂಡಿದ್ದಾರೆ. ಇನ್ನು ಮುಂದೆಯಾದರೂ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.