ಬೈ ಟು ಲವ್ ನಟ ಧನ್ವೀರ್ ವಿರುದ್ಧ ಕೇಳಿಬಂದಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ತಿರುವು, ಅಷ್ಟಕ್ಕೂ ನಡೆದ್ದಾದರೂ ಏನು ಗೊತ್ತೇ??

119

ನಮಸ್ಕಾರ ಸ್ನೇಹಿತರೇ ಧನ್ವೀರ್ ರವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಜೀವ ಉದಯೋನ್ಮುಖ ನಟರಲ್ಲಿ ಅಗ್ರಗಣ್ಯನಾಗಿ ಕಾಣಸಿಗುತ್ತಾರೆ. ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿರುವ ಧನ್ವೀರ್ ಈಗಾಗಲೇ ಹಲವಾರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಕೇವಲ ಒಂದೇ ಸಿನಿಮಾಗೆ ಇಷ್ಟೊಂದು ಜನಪ್ರಿಯರಾಗಿದ್ದಾರೆ ಎಂದರೆ ಜನರು ಧನ್ವೀರ್ ಅವರನ್ನು ಎಷ್ಟರಮಟ್ಟಿಗೆ ಒಪ್ಪಿ ಅಪ್ಪಿದ್ದಾರೆ ಎಂಬುದು ಇದರ ಮೂಲಕ ತಿಳಿಯುತ್ತದೆ. ಈಗಾಗಲೇ ಎರಡರಿಂದ ಮೂರು ಸಿನಿಮಾಗಳು ಧನ್ವೀರ್ ಅವರ ಕೈಯಲ್ಲಿದೆ. ಚಿತ್ರದ ಘೋಷಣೆ ಕೂಡ ಈಗಾಗಲೇ ಅಧಿಕೃತವಾಗಿ ನಡೆದಿದೆ.

ಸದ್ಯಕ್ಕೆ ಧನ್ವೀರ್ ಹಾಗೂ ಶ್ರೀಲೀಲಾ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬೈಟು ಲವ್ ಚಿತ್ರ ಬಿಡುಗಡೆಯಾಗಿದ್ದು ಚಿತ್ರತಂಡ ಚಿತ್ರದ ಪ್ರಮೋಷನ್ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಸಕಾರಾತ್ಮಕ ಫಲಿತಾಂಶ ಸಿಗುವತ್ತ ಮುಖಮಾಡಿದೆ. ಇದು ಧನ್ವೀರ್ ಅವರ ಎರಡನೇ ಸಿನಿಮಾ ವಾಗಿದ್ದು ಇದರ ಫಲಿತಾಂಶ ಕೂಡ ಪ್ರಮುಖವಾಗಿರುತ್ತದೆ. ಈಗಾಗಲೇ ಧನ್ವೀರ್ ಅವರು ಕೂಡ ಬೈಟು ಲವ್ ಚಿತ್ರದ ಪ್ರಮೋಷನ್ ವಿಚಾರದಲ್ಲಿ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಚಿತ್ರದ ಗೆಲುವಿಗಾಗಿ ಸಾಕಷ್ಟು ಸರ್ಕಸ್ ಕೊಡ ಮಾಡುತ್ತಿದ್ದಾರೆ. ಆದರೆ ಇಷ್ಟೊಂದು ಕಷ್ಟ ಪಡುತ್ತಿರುವ ನಡುವಲ್ಲೇ ಹೊಸ ವಿ’ವಾದಕ್ಕೆ ಧನವೀರ್ ಅವರು ಈಗ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅದೇನೆಂದರೆ ನೆನ್ನೆ ರಾತ್ರಿ ಧನ್ವೀರ್ ರವರು ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅನುಪಮ ಥಿಯೇಟರ್ ಗೂ ಕೂಡ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಚಂದ್ರಶೇಖರ್ ಎನ್ನುವಾತ ಧನ್ವೀರ್ ರವರೊಂದಿಗೆ ಸೆಲ್ಫಿ ಪಡೆದುಕೊಳ್ಳಲು ಕೇಳಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಧನ್ವೀರ್ ನಿರಾಕರಿಸಿದ್ದಾರೆ. ಆಗ ಚಂದ್ರಶೇಖರ್ ತನ್ನ ಅಸಮಾಧಾನವನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಧನ್ವೀರ್ ಹಾಗೂ ಅವರ ಬೌನ್ಸರ್ ಚಂದ್ರಶೇಖರ್ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂಬುದಾಗಿ ಚಂದ್ರಶೇಖರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ, ಇಷ್ಟು ಹೊತ್ತು ಕೇವಲ ಹೇಳಿಕೆ ಸೀಮಿತವಾಗಿದ್ದ ಪ್ರಕರಣ ಠಾಣೆಯ ಮೆಟ್ಟಿಲೇರಿದೆ, ಯಾವುದೇ ಸಮಯದಲ್ಲಿಯೂ ಪೊಲೀಸರು ನಟನ ಮನೆ ಕದ ತಟ್ಟಬಹುದು. ಈಗಾಗಲೇ ತನಿಖೆ ಪ್ರಾರಂಭವಾಗಿದ್ದು ಈ ಕುರಿತಂತೆ ಧನ್ವೀರ್ ಎಲ್ಲು ಕೂಡ ಅಧಿಕೃತವಾಗಿ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.