ನಿಮ್ಮ ಖಾತೆಗೆ ಸಿಲೆಂಡರ್ ಸಬ್ಸಿಡಿ ಬರುತ್ತಿಲ್ಲವೇ?? ಹಾಗಿದ್ದರೆ ಜಸ್ಟ್ ಹೀಗೆ ಮಾಡಿ, ಅದೇ ಹುಡುಕಿಕೊಂಡು ನಿಮ್ಮ ಖಾತೆಗೆ ಬರುತ್ತದೆ.

65

ನಮಸ್ಕಾರ ಸ್ನೇಹಿತರೇ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿಯನ್ನು ನೀವು ಪಡೆಯುತ್ತಿದ್ದೀರೆ? ಆದರೆ ಇತ್ತೀಚಿಗೆ ಸಬ್ಸಿಡಿ ಹಣ ನಿಮ್ಮ ಖಾತೆಗೆ ಸೇರಿತ್ತಿಲ್ಲವೇ? ಹಾಗಾದರೆ ಇದು ಬ್ಯಾಂಕ್ ನವರದ್ದೋ ಇನ್ಯಾರದ್ದೋ ದೋಷವಲ್ಲ, ನೀವು ನಿಮ್ಮ ಖಾತೆಗೆ ಆಧಾರ್‍ ಲಿಂಕ್ ಮಾಡದಿರುವುದೇ ಕಾರಣ!

ಹೌದು, ನೀವು ಎಲ್ ಪಿ ಜಿ ಸಬ್ಸಿಡಿಗೆ ಅರ್ಹರಾಗಿದ್ದು, ಸಬ್ಸಿಡಿ ನಿಮಗೆ ಸಿಗುತ್ತಿದ್ದರೆ, ಪ್ರತಿ ಸಿಲೆಂಡ್ರ್ ಬುಕಿಂಗ್ ನಂತರ ಸಬ್ಸಿಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತಿದೆಯೇ ಇಲ್ಲವೇ ಎಂದು ಪರಿಶೀಲಿಸಿ. ನೀವು ಮನೆಯಲ್ಲಿಯೇ ಕುಳಿತು ಈ ಕೆಲಸ ಮಾಡಬಹುದು. ನೀವೇನಾದರೂ ನಿಮ್ಮ ಆಧಾರ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡದೇ ಇದ್ದರೆ ಸಬ್ಸಿಡಿ ಹಣ ಖಾತೆ ಸೇರುವುದಿಲ್ಲ. ಹತ್ತಿರದ ವಿತರಕರ ಬಳಿ ಹೇಳಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಅಥವಾ ಟೋಲ್ ಫ್ರೀ ಸಂಖ್ಯೆ 18002333555 ಗೆ ಕರೆ ಮಾಡುವ ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದು.

ಇನ್ನು ಸಬ್ಸಿಡಿಯು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತದೆ. ವಾರ್ಷಿಕ ಆದಾಯ ರೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅವರಿಗೆ ಸಬ್ಸಿಡಿ ಸಿಗುವುದಿಲ್ಲ. ಇನ್ನು ನೀವು ಸಬ್ಸಿಡಿಗೆ ಅರ್ಹರಾಗಿದ್ದು ಸಬ್ಸಿಡಿ ಬರುತ್ತಿಲ್ಲ ಎಂದಾದರೆ ಮನೆಯಲ್ಲಿಯೇ ಕುಳಿತು ಅದನ್ನು ಪರಿಶೀಲಿಸಬಹುದು. ಅದಕ್ಕಾಗಿ ಹೀಗೆ ಮಾಡಿ.

ಮೊದಲಿಗೆ ನೀವು www.mylpg.in ವೆಬ್‌ಸೈಟ್‌ಗೆ ಭೇಟಿ ನೀಡಿ. ಇಲ್ಲಿ ನೀವು ಬಲಭಾಗದಲ್ಲಿ ಮೂರು ಕಂಪನಿಗಳ ಗ್ಯಾಸ್ ಸಿಲಿಂಡರ್ ಗಳ ಫೋಟೋ ಇರುತ್ತದೆ. ನೀವು ನಿಮ್ಮ ಸೇವಾ ಪೂರೈಕೆದಾರ ಗ್ಯಾಸ್ ಸಿಲಿಂಡರ್‌ನ ಫೋಟೋ ಮೇಲೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಪೂರೈಕೆದಾರರ ಮಾಹಿತಿಯೊಂದಿಗೆ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಪೇಜ್ ನಲ್ಲಿ ಮೇಲಿನ ಬಲಭಾಗದಲ್ಲಿ, ಸೈನ್ ಇನ್ ಮತ್ತು ಹೊಸ ಬಳಕೆದಾರರ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ.

ಬಳಿಕ ನಿಮ್ಮ ಐಡಿ ಜೊತೆ ಇಲ್ಲಿ ಸೈನ್ ಇನ್ ಮಾಡಿ. ಒಂದು ವೇಳೆ ನೀವು ಹೊಸ ಬಳಕೆದಾರರಾಗಿದ್ದರೆ ಪಕ್ಕದಲ್ಲಿರುವ ಆಯ್ಕೆಯನ್ನು ಕ್ಲಿಕ್ ಮಾಡಿ. ಇಷ್ಟು ಮಾಡಿದರೆ ಮತ್ತೊಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ, ಅದರಲ್ಲಿ ವಿವ್ಯೂ ಸಿಲೆಂಡರ್ ಬುಕ್ಕಿಂಗ್ ಹಿಸ್ಟರಿ ಅಂತ ಇರತ್ತೆ. ಅದನ್ನು ಆಯ್ಕೆ ಮಾಡಿ. ಅಲ್ಲಿ ನೀವು ಸಬ್ಸಿಡಿ ಪಡೆಯುತ್ತಿದ್ದೀರಾ ಇಲ್ಲವ ಎನ್ನುವುದು ಗೊತ್ತಾಗುತ್ತದೆ. ಇಲ್ಲವಾದರೆ ಕೂಡಲೆ 18002333555 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಿ. ಹೀಗೆ ನಿಮ್ಮ ಸಬ್ಸಿಡಿ ಬಾರದೇ ಇದ್ದಲ್ಲಿ ಮತ್ತೆ ಸಿಗುವಂತೆ ಮಾಡಬಹುದು.