ಕೇವಲ 5 ಸಾವಿರದಿಂದ ಹೂಡಿಕೆ ಆರಂಭಿಸಿ, ಕೋಟ್ಯಧಿಪತಿಯಾಗಿರಿ ಹೇಗೆ ಗೊತ್ತೇ?? ನೀವು ಕೋಟಿ ಗಳಿಸಬೇಕೇ?? ಇದೇ ಬೆಸ್ಟ್ ಸ್ಕೀಮ್.

26

ನಮಸ್ಕಾರ ಸ್ನೇಹಿತರೇ, ಹಣ ಯಾರಿಗೂ ಬೇಡವೆಂದಿಲ್ಲ, ಪ್ರತಿ ಕ್ಷಣ ಬದುಕುವುದಕ್ಕೂ ನೀರಿನಷ್ಟೇ ಮಹತ್ವದ್ದಾಗಿದೆ ಹಣ ಕೂಡ. ಹಾಗಾಗಿ ಇವತ್ತಿಗೆ ಮಾತ್ರವಲ್ಲದೇ ಭವಿಷ್ಯಕ್ಕಾಗಿಯೂ ಕೂಡ ಹಣ ಉಳಿತಾಯ ಮಾಡುವುದು ಬಹಳ ಮುಖ್ಯವಾಗಿದೆ. ಮನೆಯಲ್ಲಿ ಗಂಡಸರು ದೊಡ್ಡ ಮಟ್ಟದ ಹೂಡಿಕೆಗೆ ಪ್ಲ್ಯಾನ್ ಮಾಡಿದರೆ, ಹೆಂಗಸರೂ ಕೂಡ ಸ್ವಲ್ಪ ಸ್ವಲ್ಪವೇ ಹಣವನ್ನು ಕೂಡಿಡುತ್ತಾರೆ. ಕೆಲಸಕ್ಕೆ ಹೋಗುವ ಮಹಿಳೆಇರಬಹುದು ಅಥವಾ ಗೃಹಿಣಿಯರಾಗಿರಬಹುದು. ತಮ್ಮ ಬಳಿ ಸಾಧ್ಯವಾದಷ್ಟು ಹಣವನ್ನು ಭವಿಷ್ಯದ ದೃಷ್ಟಿಯಿಂದ ಕೂಡಿಡುತ್ತಾರೆ. ಆದರೆ ಹೀಗೆ ಬರಿಯ ನಿಮ್ಮ ಪರ್ಸ್ ನಲ್ಲಿಯೂ ಸಾಸಿವೆ ಡಬ್ಬದಲ್ಲಿಯೋ ಹಣ ಇಟ್ಟರೆ ಅದು ಹೆಚ್ಚಾಗುವುದಿಲ್ಲ. ಅದಕ್ಕೆ ಬೇರೆಯದೇ ಮಾರ್ಗವಿದೆ!

ಮಹಿಳೆಯರು ಹೇಗೆ ಹಣ ಉಳಿಸಿ, ಅದನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಕೋಟಿಯಾಗಿಸಬಹುದು ಎಂದು ಪರ್ಸನಲ್ ಫೈನಾನ್ಸ್‌ ಪ್ಲಾನರ್ ಮಮತಾ ಗೋಡಿಯಾಲ್ ಸಲಹೆ ನೀಡುತ್ತಾರೆ. ಅವರ ಪ್ರಕಾರ ನಿಮ್ಮ ಬಳಿ ಉಳಿತಾಯಕ್ಕಾಗಿ ಎತ್ತಿಟ್ಟ ಹಣವನ್ನು ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ), ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂದರೆ ಪಿಪಿಎಫ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹಾಕಬೇಕು. ಆಗ ಮಾತ್ರ ಹಣ ಡಬ್ಬಲ್ ಆಗಲು ಸಾಧ್ಯ. ಮಹಿಳೆಯರು ತಿಂಗಳಿಗೆ 5000 ರೂಪಾಯಿ ಹೂಡಿಕೆ ಮಾದಿದರೂ ಸಾಕು ಪಾಲಿಸಿ ಮೆಚ್ಯೂರಿಟಿ ಆಗುವ ಹೊತ್ತಿಗೆ ಬಹಳ ದೊಡ್ಡ ಮೊತ್ತದ ಹಣ ಅವರ ಕೈಸೇರುತ್ತದೆ.

ಉದಾಹರಣೆಗೆ ನೀವು 6 ಲಕ್ಷ ರೂಪಾಯಿಗಳನ್ನು 10 ವರ್ಷ ಎಫ್‌ಡಿಯಲ್ಲಿ ಇಟ್ಟರೆ ಅದರ ಮುಕ್ತಾಯದ ವೇಳೆ ಗೆ 8.3 ಲಕ್ಷ ಸಿಗುತ್ತದೆ. ಅದೇ 24 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ 40 ವರ್ಷಗಳಲ್ಲಿ 1.02 ಕೋಟಿ ರೂಪಾಯಿ ಸಿಗುತ್ತದೆ. ಅಥವಾ 6 ಲಕ್ಷ ರೂಪಾಯಿ 10 ವರ್ಷಗಳ ಕಾಲ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ್ರೆ, ಮೆಚ್ಯುರಿಟಿ ವೇಳೆ 8.75 ಲಕ್ಷ ಸಿಗುತ್ತದೆ. 24 ಲಕ್ಷ ಹೂಡಿಕೆ ಮಾಡಿದರೆ 40 ವರ್ಷಗಳಲ್ಲಿ 1.35 ಕೋಟಿ ಮೊತ್ತ ನಿಮ್ಮ ಕೈ ಸೇರುತ್ತದೆ. ಈ ಸಂಪೂರ್ಣ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿಯೂ ಸಿಗುತ್ತದೆ. ಹಾಗೆಯೇ 6 ಲಕ್ಷ ರೂಪಾಯಿಗಳನ್ನು 10 ವರ್ಷ ಮ್ಯೂಚುವಲ್ ಫಂಡ್‌ಗಳಲ್ಲಿ ಇಟ್ಟರೆ. ಮುಕ್ತಾಯದ ಮೇಲೆ 13.9 ಲಕ್ಷವಾಗುತ್ತದೆ. ಅದನ್ನೇ 40 ವರ್ಷಗಳಲ್ಲಿ 24 ಲಕ್ಷ ಹೂಡಿಕೆ ಮಾಡಿದರೆ 15.7 ಕೋಟಿ ಮೊತ್ತ ಸಿಗುತ್ತದೆ.

ನೀವು ಎಫ್‌ಡಿಯನ್ನು ತುರ್ತು ನಿಧಿಯಾಗಿ ಅಥವಾ ಅಲ್ಪಾವಧಿಗಾಗಿ ಇರಿಸಿಕೊಳ್ಳಬಹುದು. ಆದರೆ ಮ್ಯೂಚುಯಲ್ ಫಂಡ್ ಅನ್ನು ದೀರ್ಘಾವಧಿಗಾಗಿಯೇ ಆರಿಸಿಕೊಳ್ಳಬೇಕು. ಆಗ ಮಾತ್ರ ಅದರ ಸಂಪೂರ್ಣ ಲಾಭ ನಿಮಗೆ ದೊರೆಯುತ್ತದೆ.ಇನ್ನು ಪಿಪಿಎಫ್ ಉತ್ತಮ ಹೂಡಿಕೆಯಾಗಿದೆ ಏಕೆಂದರೆ ಇದು ಎಫ್ ಡಿಗಳಿಗಿಂತ ಸ್ವಲ್ಪ ಉತ್ತಮ ರಿಟರ್ನ್ ನೀಡುತ್ತದೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ ಠೇವಣಿಗಳಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಜೊತೆಗೆ ಹಿಂಪಡೆಯುವಾಗ ಅಸಲು ಮತ್ತು ಬಡ್ಡಿಗೆ ತೆರಿಗೆ ವಿಧಿಸುವುದಿಲ್ಲ.