ಧಾರವಾಹಿ ಆರಂಭವಾದ ಎರಡನೇ ವಾರಕ್ಕೆ ರಾಮಾಚಾರಿ ಧಾರವಾಹಿ ಏನಾಗಿದೆ ಗೊತ್ತೇ?? ಇದು ಆರಂಭ ಮಾತ್ರನಾ??

2,099

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಧಾರವಾಹಿಗಳ ಜಮಾನ ಶುರುವಾಗಿದೆ. ಇತ್ತೀಚಿಗಷ್ಟೇ ಪ್ರಸಾರವನ್ನು ಪ್ರಾರಂಭಿಸಿರುವ ರಾಮಾಚಾರಿ ಧಾರವಾಹಿ ಒಂದೊಳ್ಳೆ ಪ್ರಚಾರವನ್ನು ಈಗಾಗಲೇ ಪಡೆದುಕೊಂಡಿದೆ. ಈ ಧಾರವಾಹಿ ಗಾಗಿ ಎಂಟು ತಿಂಗಳಿಂದ ತಯಾರಿಯನ್ನು ನಡೆಸಲಾಗಿತ್ತು. ಇದಕ್ಕಾಗಿ ನಾಯಕನಟ ರಿತ್ವಿಕ್ ಕೃಪಾಕರ್ 125 ಕೆಜಿ ಇದ್ದವರು ತಮ್ಮ ತೂಕವನ್ನು ಇಳಿಸಿ 85 ಕೆಜಿಗೆ ಬಂದಿದ್ದರು. ಇದು ಕೂಡ ಧಾರವಾಹಿ ಕುರಿತಂತೆ ಜನರಲ್ಲಿ ಉತ್ತಮ ಪ್ರಚಾರವನ್ನು ಪಡೆದಿತ್ತು. ಎಲ್ಲಾ ತಯಾರಿಗಳ ಪರಿಪೂರ್ಣತೆಯಿಂದ ಧಾರವಾಹಿ ಕಳೆದವಾರವಷ್ಟೇ ಪ್ರಸಾರವನ್ನು ಆರಂಭಿಸಿತು.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀ ಕನ್ನಡ ವಾಹಿನಿಯ ಧಾರವಾಹಿ ಗಳಾಗಿರುವ ಹಿಟ್ಲರ್ ಕಲ್ಯಾಣ ಪುಟ್ಟಕ್ಕನ ಮಗಳು ಗಟ್ಟಿಮೇಳ ಪಾರು ಹೀಗೆ ಹಲವಾರು ಧಾರವಾಹಿ ಗಳಿಂದಾಗಿ ರೇಟಿಂಗ್ ತಾಣದಲ್ಲಿ ಕಳೆದ ಆರು ವರ್ಷಗಳಿಂದಲೂ ಕೂಡ ಮೊದಲನೇ ಸ್ಥಾನದಲ್ಲಿ ಮಿಂಚುತ್ತಿದೆ. ಕಳೆದ ಆರು ವರ್ಷಗಳ ಹಿಂದೆ ಧಾರವಾಹಿಗಳ ಜನಪ್ರಿಯತೆಯ ರೇಟಿಂಗ್ ನಲ್ಲಿ ಕಲರ್ಸ್ ಕನ್ನಡ ವಾಹಿನಿ ಮೊದಲನೇ ಸ್ಥಾನದಲ್ಲಿತ್ತು. ಆದರೆ ನಂತರ ಕಲರ್ಸ್ ಕನ್ನಡ ವಾಹಿನಿ ಹಲವಾರು ರಿಯಾಲಿಟಿ ಶೋಗಳನ್ನು ತಂದು ಯಶಸ್ವಿಯಾಯಿತು. ಆದರೆ ಧಾರವಾಹಿಗಳ ಪೈಕಿಯಲ್ಲಿ ಕಲರ್ಸ್ ಕನ್ನಡ ವಾಹಿನಿ ಎಷ್ಟೇ ಧಾರವಾಹಿಗಳನ್ನು ತೆರೆಗೆ ತಂದರು ಕೂಡ ಯಶಸ್ವಿಯಾಗಿರಲಿಲ್ಲ. ಅದಕ್ಕಾಗಿ ತಯಾರಿ ನಡೆಸಿ ರಾಮಾಚಾರಿ ಧಾರವಾಹಿಯನ್ನು ತೆರೆಗೆ ತರಲಾಗಿತ್ತು.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಸಾಧಿಸಿರುವ ಸಿನಿಮಾದ ಹೆಸರಿನಲ್ಲಿ ಪ್ರಾರಂಭವಾಗಿರುವ ರಾಮಾಚಾರಿ ಧಾರಾವಾಹಿ ಪ್ರಾರಂಭದಲ್ಲಿ ಧಾರವಾಹಿ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಮೂಡಿಸಿತ್ತು. ರಾಮಾಚಾರಿ ಧಾರವಾಹಿಯಲ್ಲಿ ತನಗೆ ಸರಿ ಅನಿಸಿದ್ದನ್ನು ಮಾಡುವಂತಹ ರಾಮಾಚಾರಿ ಹಾಗೂ ಇನ್ನೊಂದು ಕಡೆ ತಾನು ಮಾಡಿದ್ದೇ ಸರಿ ಎಂದು ಹಟ ಬೀಳುವ ಚಾರು ಇಬ್ಬರ ನಡುವಿನ ಜಗಳ ಹಾಗೂ ಪ್ರೀತಿಯನ್ನು ತೋರಿಸುವಂತಹ ಧಾರವಾಹಿ ರಾಮಾಚಾರಿ ಆಗಿದೆ. ಈಗ ರಾಮಾಚಾರಿ ಪ್ರಸಾರವನ್ನು ಆರಂಭಿಸಿದ ಮೊದಲ ವಾರದಲ್ಲಿ ಎರಡು ವರ್ಷದಲ್ಲಿ ಮೊದಲ ಬಾರಿಗೆ ಆರರ ಅಂಕಿಯನ್ನು ರೇಟಿಂಗ್ ನಲ್ಲಿ ದಾಟಿದೆ.

ಹೀಗಾಗಿ ಮೊದಲ ವಾರದಲ್ಲೇ ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯ ಧಾರವಾಹಿಗಳ ಪೈಕಿ ಯಲ್ಲಿ ರಾಮಾಚಾರಿ ಏಳನೇ ಸ್ಥಾನವನ್ನು ಪಡೆದುಕೊಂಡಿತ್ತು. ಇದು ಸಹಜವಾಗಿಯೇ ವಾಹಿನಿ ಹಾಗೂ ಧಾರವಾಹಿ ತಂಡವನ್ನು ಸಂತೋಷಕ್ಕೆ ತಳ್ಳಿತ್ತು. ಒಳ್ಳೆಯ ಪ್ರಚಾರ ಹಾಗೂ ಜನಪ್ರಿಯತೆಯಿಂದ ಎರಡನೇ ವಾರವೂ ಕೂಡ ಉತ್ತಮ ರೇಟಿಂಗ್ ಪಡೆಯುವ ನಿರೀಕ್ಷೆ ಇತ್ತು. ಯಾಕೆಂದರೆ ಎರಡನೇ ವಾರದ ರೇಟಿಂಗ್ ಚಿತ್ರದ ಯಶಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಅಂದುಕೊಂಡಂತೆ ರಾಮಾಚಾರಿ ಎರಡನೇ ವಾರದಲ್ಲಿ 6.5 ರೇಟಿಂಗ್ ಅನ್ನು ಪಡೆದುಕೊಂಡು ಭರ್ಜರಿಯಾಗಿ ಯಶಸ್ವಿಯಾಗಿ ಪ್ರಸಾರ ಕಂಡಿದೆ. ಹಾಗೂ ಟಾಪ್ 5 ಧಾರವಾಹಿಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಿದೆ.

ಹೌದು 6.5 ರೇಟಿಂಗ್ ಪಡೆಯುವ ಮೂಲಕ ಟಾಪ್ 5ರ ಸ್ಥಾನದಲ್ಲಿ ರಾಮಾಚಾರಿ ಧಾರವಾಹಿ ಮಾನವನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನ ಬರುವಂತಹ ಎಲ್ಲಾ ಸಾಧ್ಯತೆಗಳು ಕೂಡ ಕಂಡುಬಂದಿದೆ. ಇನ್ನು ಈ ವಾರ ಯಾವೆಲ್ಲ ಧಾರವಾಹಿಗಳು ಯಾವ ಸ್ಥಾನವನ್ನು ಪಡೆದುಕೊಂಡಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಮೊದಲನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ನಂತರ ಗಟ್ಟಿಮೇಳ ಹಿಟ್ಲರ್ ಕಲ್ಯಾಣ ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ನಂತರ 5ನೇ ಸ್ಥಾನದಲ್ಲಿ ರಾಮಾಚಾರಿ ಆರನೇ ಸ್ಥಾನದಲ್ಲಿ ಸತ್ಯ ನಂತರ ನಾಗಿಣಿ ಪಾರು ಗಿಣಿರಾಮ ಹತ್ತನೇ ಸ್ಥಾನದಲ್ಲಿ ಮಂಗಳ ಗೌರಿ ಮದುವೆ ನಂತರ ಗೀತ ಹಾಗೂ ಲಕ್ಷಣ ನಂತರ ಕಮಲಿ ನಂತರದ ಸ್ಥಾನದಲ್ಲಿ ಕನ್ನಡತಿ ಅಣ್ಣ-ತಂಗಿ ನೇತ್ರಾವತಿ ಮರಳಿ ಮನಸಾಗಿದೆ ನನ್ನರಸಿ ರಾಧೆ ಪುನರ್ವಿವಾಹ ಯಡಿಯೂರು ಸಿದ್ದಲಿಂಗೇಶ್ವರ ಹೀಗೆ ಧಾರವಾಹಿಗಳು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ರಾಮಾಚಾರಿ ಧಾರವಾಹಿ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ನಿಮ್ಮ ನೆಚ್ಚಿನ ಧಾರವಾಹಿ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.