ಏರ್ಪೋರ್ಟ್ ನಲ್ಲಿ ಇದ್ದೇನೆ ಎಂಬುದನ್ನು ನೋಡದೆ ಮಸ್ತ್ ಸ್ಟೆಪ್ಸ್ ಹಾಕಿದ ಸಮಂತಾ, ಹೇಗಿತ್ತು ಡಾನ್ಸ್ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

1,584

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಸುದ್ದಿಗೆ ಬಂದಿರುವ ನಟಿಯೆಂದರೆ ಅದು ಖಂಡಿತವಾಗಿ ಸಮಂತ. ಅದಕ್ಕೆ ಮೊದಲ ಕಾರಣವೇನೆಂದರೆ ಅವರು ನಾಗಚೈತನ್ಯ ರವರೊಂದಿಗೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದು. ಇನ್ನೊಂದು ವಿಚಾರವೇನೆಂದರೆ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರದಲ್ಲಿ ಹೂ ಅಂತೀಯಾ ಮಾವ ಊಹೂ ಅಂತೀಯ ಸಾಂಗಿಗೆ ಸ್ಟೆಪ್ ಹಾಕಿರುವುದು.

ಈ ಹಾಡು ಈಗಾಗಲೇ ದೊಡ್ಡಮಟ್ಟದಲ್ಲಿ ವೈರಲ್ ಆಗಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಒಂದು ಲೆಕ್ಕದಲ್ಲಿ ನೀಡುವುದಾದರೆ ಪುಷ್ಪ ಚಿತ್ರದ ಗೆಲುವಿಗೆ ಸಮಂತಾ ರವರು ಸ್ಟೆಪ್ ಹಾಕಿರುವ ಈ ಹಾಡು ಕೂಡ ಕಾರಣ. ಇನ್ನು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಜಾಹೀರಾತು ಚಿತ್ರೀಕರಣದಲ್ಲಿ ಕೂಡ ಸಮಾಂತರ ರವರು ಆಗೀಗ ಭಾಗವಹಿಸುತ್ತಲೇ ಇರುತ್ತಾರೆ. ಹೀಗಾಗಿ ವಿಮಾನ ಪ್ರಯಾಣ ಎನ್ನುವುದು ಸಮಂತಾ ರವರಿಗೆ ದೈನಂದಿನ ಕಾರ್ಯಕ್ರಮವಾಗಿ ಬಿಟ್ಟಿರುತ್ತದೆ. ಇದೇ ಹಿನ್ನೆಲೆಯಲ್ಲಿ ಅವರು ಇತ್ತೀಚೆಗಷ್ಟೇ ವಿಮಾನನಿಲ್ದಾಣದಲ್ಲಿ ತಡರಾತ್ರಿ ಫ್ಲೈಟ್ ಗಾಗಿ ಕಾದು ಕುಳಿತಿದ್ದರು. ಆಗ ವಿಮಾನ ಬರುವುದು ತಡವಾಗಿತ್ತು. ಇದೇ ಸಂದರ್ಭದಲ್ಲಿ ಸಮಾಂತರ ಅವರು ಒಂದು ಹಾಡಿಗೆ ಸ್ಟೆಪ್ ಹಾಕಿರುವುದು ಈಗಾಗಲೇ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.

ಹೌದು ತಮಿಳು ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ತಲಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬೀಸ್ಟ್ ಚಿತ್ರದ ಅರೇಬಿಕ್ ಕುಥು ಹಾಡಿಗೆ ಡ್ಯಾನ್ಸ್ ಮಾಡಿ ಎನ್ನುವ ಚಾಲೆಂಜ್ ಪ್ರಾರಂಭವಾಗಿತ್ತು. ವಿಮಾನ ಬರುವುದು ಲೇಟ್ ಆಗಿದ್ದ ಕಾರಣ ಸಮಂತ ರವರು ಈ ಹಾಡಿಗೆ ಡ್ಯಾನ್ಸ್ ಮಾಡಿ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ಹಾಡು ಯೂಟ್ಯೂಬ್ ನಲ್ಲಿ ಎರಡನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದ್ದು ಸಮಂತ ರವರ ಈ ವಿಡಿಯೋ ದಿಂದಾಗಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ಸಮಂತ ರವರ ಡ್ಯಾನ್ಸ್ ಕುರಿತಂತೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.