ಮದುವೆಯಾದ ಮೇಲೂ ನಟಿ ಪ್ರಿಯಾಮಣಿ ರವರಿಗೆ ಬೇಡಿಕೆ ಕಡಿಮೆಯಾಗಿಲ್ಲ, ಒಂದು ದಿನದ ಚಿತ್ರೀಕರಣಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೆಲವೊಂದು ನಟಿಯರು ಒಂದೆರಡು ಸಿನಿಮಾಗಳು ಯಶಸ್ವಿಯಾದ ನಂತರ ಕೆಲವೊಮ್ಮೆ ಮೂಲೆಗುಂಪಾಗುವುದು ಕೂಡ ಉಂಟು. ಆದರೆ ನಾವು ಇಂದು ಹೇಳುವ ನಟಿ ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ವರ್ಷಗಳು ಕಳೆದರೂ ಕೂಡ ಇನ್ನೂ ಬೇಡಿಕೆ ಯಲ್ಲಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ನಟಿ ಪ್ರಿಯಾಮಣಿ ರವರ ಕುರಿತಂತೆ. ಮೂಲತಹ ಮಲಯಾಳಂ ಚಿತ್ರರಂಗದವರಾಗಿದ್ದರು ಕೂಡ ಅವರ ಜನಪ್ರಿಯತೆಯನ್ನುವುದು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಹಾಗೂ ಬಾಲಿವುಡ್ ನಲ್ಲಿ ಕೂಡ ಪಸರಿಸಿದೆ.
ಇವರು ರಾಷ್ಟ್ರಪ್ರಶಸ್ತಿ ವಿಜೇತ ನಟಿಯಾಗಿದ್ದು ಅಂತಹದೇ ಪಾತ್ರವಿರಲಿ ಅದಕ್ಕೆ ನ್ಯಾಯ ಸಲ್ಲಿಸ ಬಲ್ಲಂತಹ ನಟನೆಯನ್ನು ತೋರಿಸುತ್ತಾರೆ. ಇನ್ನು ಇತ್ತೀಚಿಗಷ್ಟೇ ಪ್ರಿಯಾಮಣಿ ನಟನೆಯ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಕೂಡ ಹಿಂದಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿತ್ತು. ಈ ವೆಬ್ ಸೀರಿಸ್ ಗೆ ಹಲವಾರು ಪ್ರಶಸ್ತಿಗಳು ಕೂಡ ದೊರಕಿದ್ದವು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ವೆಬ್ ಸರಣಿಗಳಲ್ಲಿ ಕೂಡ ಪ್ರಿಯಾಮಣಿ ಅವರ ಜನಪ್ರಿಯತೆಯನ್ನು ವುದು ದೊಡ್ಡ ಮಟ್ಟದಲ್ಲಿದೆ. ಭಾಮಾ ಕಲಾಪಂ ಎನ್ನುವ ಚಿತ್ರದ ಯಶಸ್ಸು ಕೂಡ ಇತ್ತೀಚಿನ ದಿನಗಳಲ್ಲಿ ಪ್ರಿಯಾಮಣಿ ಅವರ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಇತ್ತೀಚಿನ ದಿನಗಳಲ್ಲಿ ಒಂದು ದಿನಕ್ಕೆ ಪ್ರಿಯಾಮಣಿ ಅವರು ಪಡೆಯುವಂತಹ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಗೆಳೆಯರೇ ಮೊದಲು ಒಂದು ದಿನದ ಸಂಭಾವನೆಯಾಗಿ ಪ್ರಿಯಾಮಣಿ ಅವರು ಬರೋಬ್ಬರಿ 1.5 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದರು. ಈಗ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಹಾಗೂ ಭಾಮಾ ಕಲಾಪಂ ಚಿತ್ರದ ಯಶಸ್ಸಿನ ನಂತರ ಪ್ರಿಯಾಮಣಿ ಅವರು ಪ್ರತಿದಿನ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ ಈ ಎರಡು ದೊಡ್ಡ ಮಟ್ಟದ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ದ್ವಿಗುಣ ಗೊಳಿಸಿದ್ದಾರೆ. ಆದರೂ ಕೂಡ ಪ್ರಿಯಾಮಣಿ ಅವರು ಭಾರತೀಯ ಚಿತ್ರರಂಗದ ಕೆಲವು ಅಮೂಲ್ಯ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.