ಗ್ಯಾರಂಟಿ ಇಲ್ಲದೆ 5 ಲಕ್ಷ ರೂಪಾಯಿಗಳವರೆಗೆ ಲೋನ್; ಹೇಗೆ ಪಡೆಯುವುದು ಗೊತ್ತಾ?? ಅತಿ ಸುಲಭವಾಗಿ ಮೊಬೈಲ್ ನಿಂದಲೇ ಪಡೆಯಿರಿ.

33

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಒಂದು ಕೆಲಸ ಇರಬೇಕು ಇಲ್ಲ ವ್ಯಾಪಾರ ಉದ್ಯಮ ಇರಬೇಕು. ಇಲ್ಲದಿದ್ದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ ಇಲ್ಲ. ಇನ್ನು ಹಲವಾರು ಜನರಿಗೆ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಲೋನಿನ ಅವಶ್ಯಕತೆ ಇರುತ್ತದೆ. ಈ ಲೋನ್ ಪ್ರಕ್ರಿಯೆಯಲ್ಲಿ ಹಲವಾರು ದಾಖಲೆಗಳನ್ನು ಹಾಗೂ ಜಂಜಾಟಗಳನ್ನು ಅನುಭವಿಸುವ ಪರಿಸ್ಥಿತಿ ಉದ್ಭವ ವಾಗಿರುತ್ತದೆ. ಆದರೆ ಇಂದಿನ ವಿಚಾರದಲ್ಲಿ ನಾವು ಯಾವುದೇ ದಾಖಲೆಗಳಿಲ್ಲದೆ ಪೇಟಿಎಂ ಮೂಲಕ ಹೇಗೆ 5 ಲಕ್ಷ ರೂಪಾಯಿಗಳವರೆಗೆ ಲೋನ್ ಅನ್ನು ಪಡೆದುಕೊಳ್ಳಬಹುದು ಎಂಬುದರ ಕುರಿತಂತೆ ಹೇಳಲು ಹೊರಟಿದ್ದೇವೆ.

ಹೌದು ಕರೆಕ್ಟಾಗಿ ಕೇಳಿದ್ದೀರಾ ಯಾವುದೇ ಗ್ಯಾರೆಂಟಿ ಇಲ್ಲದೆ ಪೇಟಿಎಂ ಮೂಲಕ ಐದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ತೆಗೆದು ಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು. ಸಣ್ಣ ಉದ್ಯಮಿಗಳು ಈ ಲೋನ್ ಅನ್ನು ದೈನಂದಿನ ವ್ಯವಹಾರದ ಆಧಾರದ ಮೇಲೆ ಕೂಡ ಪಾವತಿಸಬಹುದಾಗಿದೆ. ಇನ್ನು ಪೇಟಿಎಂ ನಿಂದ ಈ 5ಲಕ್ಷ ರೂಪಾಯಿ ಗಳ ಲೋನ್ ಅನ್ನು ಸಣ್ಣ ಉದ್ಯಮಿಗಳು ಹೇಗೆ ಪಡೆಯಬಹುದು ಇದಕ್ಕಾಗಿ ಪಾಲಿಸ ಬೇಕಾಗಿರುವ ಹಂತಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇದಕ್ಕಾಗಿ ಮೊದಲು ಪೇಟಿಎಂ ಅಪ್ಲಿಕೇಶನ್ ಗೆ ಹೋಗಿ ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಂಗೆ ಹೋಗಬೇಕು. ಅಲ್ಲಿ ನಿಮ್ಮ ದೈನಂದಿನ ವ್ಯವಹಾರದ ಆಧಾರದ ಮೇಲೆ ನಿಮಗೆ ಎಷ್ಟು ಲೋನ್ ಸಿಗಬಹುದು ಎಂಬುದರ ಮಾಪನ ಮಾಡಲಾಗುತ್ತದೆ.

ಇದಕ್ಕಾಗಿ ಮೊದಲು ಪೇಟಿಎಂ ಅಪ್ಲಿಕೇಶನ್ ನಲ್ಲಿರುವ ಬಿಸಿನೆಸ್ ಲೋನ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಇರುವಂತಹ ಕೊಡುಗೆಗಳನ್ನು ಪರಿಶೀಲಿಸಿ ನಿಮಗೆ ಅಗತ್ಯವಿರುವಂತಹ ಸಾಲದ ಮೊತ್ತವನ್ನು ನೋಡಬಹುದಾಗಿದೆ. ನಿಮಗೆ ಬೇಕಾದಂತಹ ಮೊತ್ತವನ್ನು ಆಯ್ಕೆ ಮಾಡಿದ ನಂತರ ಅದನ್ನು ಕಟ್ಟುವುದು ಹೇಗೆ ಎಷ್ಟು ಸಿಗುತ್ತದೆ ಎಂಬುದನ್ನು ವಿವರವಾಗಿ ತಿಳಿದು ಕೊಳ್ಳಬೇಕಾಗುತ್ತದೆ. ಇದಾದನಂತರ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ನಂತರ ಲೋನ್ ಅರ್ಜಿಯನ್ನು ಪೂರೈಸಲು ಕೆವೈಸಿ ಡೇಟಾವನ್ನು ಸಲ್ಲಿಸಬೇಕು. ಪಾನ್ ಡೇಟ್ ಆಫ್ ಬರ್ತ್ ಇ-ಮೇಲ್ ಡೀಟೇಲ್ಸ್ ಗಳನ್ನು ಸಬ್ಮಿಟ್ ಮಾಡಬೇಕಾಗುತ್ತದೆ. ಇವುಗಳನ್ನು ಪರಿಶೀಲಿಸಿದ ನಂತರ ಅರ್ಹತೆಗೆ ಅನುಗುಣವಾಗಿ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುತ್ತದೆ. ಒಂದು ವೇಳೆ ನೀವು ಕೂಡ ಈ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ ತಪ್ಪದೇ ನೀವು ಕೂಡ ಪ್ರಯತ್ನಿಸಬಹುದಾಗಿದೆ.