ಅಮೂಲ್ಯ ರವರ ಸೀಮಂತದಲ್ಲಿ ರಾಧಿಕಾ ಪಂಡಿತ್ ಅವರು ಧರಿಸಿರುವ ಡ್ರೆಸ್ ಬೆಲೆ ಎಷ್ಟು ಗೊತ್ತೇ?? ಒಂದು ಡ್ರೆಸ್ ಗೆ ಎಷ್ಟು ಗೊತ್ತೇ??

30,268

ನಮಸ್ಕಾರ ಸ್ನೇಹಿತರೇ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಟಿಸದೆ ಇದ್ದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ರಾಕಿ ಭಾಯ್ ಮಡದಿ ಆಗಿರುವ ರಾಧಿಕಾ ಪಂಡಿತ್ ಅವರು ಈಗಾಗಲೆ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿಯಾಗಿ ಮೆರೆದಿದ್ದವರು. ಇಂದಿಗೂ ಕೂಡ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲಕ್ಷಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಬಹುಬೇಡಿಕೆಯ ನಾಯಕ ನಟಿಯಾಗಿ ನಟಿಸುವಂತಹ ಅವಕಾಶ ಇದ್ದರೂ ಕೂಡ ಕುಟುಂಬ ಮೊದಲು ಎಂದು ಭಾವಿಸಿ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳಾಗಿರುವ ಐರಾ ಹಾಗೂ ಯಥರ್ವ್ ರವರನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಕೂಡ ನಟಿಸಿದ್ದರು. ಅತಿಶೀಘ್ರದಲ್ಲೇ ರಾಧಿಕಾ ಪಂಡಿತ್ ಅವರು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಇವೆಲ್ಲದರ ನಡುವೆ ಇತ್ತೀಚೆಗಷ್ಟೆ ಅಮೂಲ್ಯ ರವರ ಸೀಮಂತ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಅವರು ಉಟ್ಟಿರುವ ಬಟ್ಟೆಯ ಬೆಲೆ ಈಗ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡಿದೆ. ಹೌದು ಅಮೂಲ್ಯ ರವರ ಸೀಮಂತ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಅವರು ಉಟ್ಟಿರುವ ಮ್ಯಾಕ್ಸಿಯ ಬೆಲೆ ಬರೋಬ್ಬರಿ 9999 ರೂಪಾಯಿ. ಇದು ಇಷ್ಟೊಂದು ದುಬಾರಿ ಆಗಿರುವುದಕ್ಕೆ ಕಾರಣ ಕೂಡ ಇದೆ. ಇದನ್ನು ಡಿಸೈನ್ ಮಾಡಿರುವುದು ಬಾಲಿವುಡ್ ನ ಖ್ಯಾತ ಫ್ಯಾಶನ್ ಡಿಸೈನರ್ ಆಗಿರುವ ಮಸಬ ಗುಪ್ತ. ಈ ಡ್ರೆಸ್ ನಲ್ಲಿ ರಾಧಿಕಾ ಪಂಡಿತ್ ಅವರನ್ನು ನೋಡಿ ನಿಮ್ಮ ಅನಿಸಿಕೆಯನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.