ರವಿ ಮಾಮ ರವರ ಜೊತೆ ಡ್ರಾಮಾ ಜೂನಿಯರ್ಸ್ ಗೆ ತೀರ್ಪುದಾರರಾಗಿ ಟಾಪ್ ನಟಿ ಆಯ್ಕೆ, ಯಾರು ಗೊತ್ತೇ?? ಕುಣಿದು ಕುಪ್ಪಳಿಸಿದ ಅಭಿಮಾನಿಗಳು.

11,716

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಧಾರಾವಾಹಿ ಹಾಗೂ ಸಿನಿಮಾಗಳನ್ನು ಹೊರತುಪಡಿಸಿ ವಿಶೇಷ ಕಾರ್ಯಕ್ರಮಗಳು ಕೂಡ ಕಿರುತೆರೆಯ ಪ್ರೇಕ್ಷಕರಿಗೆ ವಿಶೇಷವಾದ ಅನುಭವವನ್ನು ನೀಡುತ್ತವೆ. ಮನರಂಜನೆ ಕೂಡ ಯಾವುದೇ ಕೊರತೆ ಇಲ್ಲದಂತೆ ಪ್ರಸಾರವಾಗುತ್ತಿವೆ. ಇನ್ನು ನಾವು ಇಂದು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯ ಕುರಿತಂತೆ. ಕನ್ನಡ ಕಿರುತೆರೆಯ ಕ್ಷೇತ್ರದಲ್ಲಿ ಜೀ ಕನ್ನಡ ವಾಹಿನಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ.

ಯಾಕೆಂದರೆ ವಾಹಿನಿಯ ಕಾರ್ಯಕ್ರಮಗಳು ಉನ್ನತ-ಗುಣಮಟ್ಟದ ಮನರಂಜನೆಯನ್ನು ಪ್ರೇಕ್ಷಕರ ಮನೆಮನೆಗೆ ತಲುಪಿಸುತ್ತಿವೆ. ಇವುಗಳಲ್ಲಿ ಡ್ರಾಮಾ ಜೂನಿಯರ್ ಕಾರ್ಯಕ್ರಮ ಕೂಡ ಹೌದು. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಚಿಕ್ಕ ಪುಟಾಣಿ ಪ್ರತಿಭೆಗಳನ್ನು ಡ್ರಾಮಾ ಜೂನಿಯರ್ಸ್ ವೇದಿಕೆ ಮೇಲೆ ಕರೆತಂದು ಅವರ ಪ್ರತಿಭೆಯನ್ನು ಕರ್ನಾಟಕದ ಮನೆಮನೆಗೂ ಕೂಡ ತಲುಪಿಸುವಂತಹ ಒಳ್ಳೆಯ ಸಂದೇಶ ಇರುವಂತಹ ಕಾರ್ಯಕ್ರಮ. ಈ ಕಾರ್ಯಕ್ರಮ ದಿಂದಲೇ ಇದುವರೆಗೂ ಹಲವಾರು ಚಿಕ್ಕ ಪುಟಾಣಿ ಪ್ರತಿಭೆಗಳು ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿದೆ. ಅತಿ ಶೀಘ್ರದಲ್ಲಿ ಡ್ರಾಮಾ ಜೂನಿಯರ್ಸ್ ನಾಲ್ಕು ಆರಂಭವಾಗಲಿದ್ದು ಈ ಕಾರ್ಯಕ್ರಮವನ್ನು ಯಾರು ತೀರ್ಪುಗಾರರಾಗಿ ನಡೆಸಿಕೊಡುತ್ತಾರೆ ಎಂಬುದರ ಕುರಿತಂತೆ ಹಲವಾರು ಕುತೂಹಲ ಎದ್ದಿದ್ದವು. ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಪ್ರೋಮೋ ಹೊರ ಬರುವುದರ ಮೂಲಕ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಅರಿತಿದ್ದೇವೆ.

ಇನ್ನು ಕಳೆದ ಬಾರಿಯ ತೀರ್ಪುಗಾರರಾಗಿ ಇರುವ ಲಕ್ಷ್ಮಿ ಅಮ್ಮ ಕೂಡ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ. ಇನ್ನು ಮೂರನೇದಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟಿಯೊಬ್ಬರು ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೇಳಿಬಂದಿತ್ತು. ಹೌದು ಅವರು ಇನ್ಯಾರು ಅಲ್ಲ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಆಗಿರುವ ರಚಿತರಾಮ್ ರವರು. ಅರಸಿ ಧಾರವಾಹಿಯ ಮೂಲಕ ಜೀ ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ರಚಿತಾರಾಮ್ ಈಗ ಹತ್ತು ವರ್ಷಗಳ ನಂತರ ಮತ್ತೊಮ್ಮೆ ಡ್ರಾಮಾ ಜೂನಿಯರ್ಸ್ ಸೀಸನ್ 4 ಕಾರ್ಯಕ್ರಮದ ಮೂಲಕ ಮರು ಪಾದಾರ್ಪಣೆ ಮಾಡಲಿದ್ದಾರೆ. ಡ್ರಾಮಾ ಜೂನಿಯರ್ಸ್ 4 ಕಾರ್ಯಕ್ರಮವನ್ನು ಈ ಮೂರು ತೀರ್ಪುಗಾರರೊಂದಿಗೆ ನೋಡಲು ನೀವು ಸಜ್ಜಾಗಿದ್ದೀರ ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.