ದಾಖಲೆಗಳನ್ನು ಸೃಷ್ಟಿಸುವತ್ತ ಲವ್ ಮಾಕ್ಟೇಲ್ 2, ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತೇ?? ಪಕ್ಕ ಶಾಕ್ ಆಗ್ತೀರಾ.

203

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಬಾರಿಯ ಲಾಕ್ಡೌನ್ ಆರಂಭವಾಗುವ ಮುನ್ನ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಲವ್ ಮಾಕ್ಟೇಲ್ ಚಿತ್ರ ಚಿತ್ರಮಂದಿರಗಳಲ್ಲಿ ಅದ್ವಿತೀಯ ಯಶಸ್ಸನ್ನು ಸಾಧಿಸಿತ್ತು. ಕೇವಲ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಡಿಜಿಟಲ್ ಪ್ಲಾಟ್ಫಾರ್ಮ್ ಅಂದರೆ ಅಮೆಜಾನ್ ಪ್ರೈಮ್ ನಲ್ಲಿ ಕೂಡ ಬಿಡುಗಡೆಯಾಗಿ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಪರಭಾಷಿಗರ ಮನಸ್ಸನ್ನು ಕೂಡ ಗೆದ್ದಿತ್ತು.

ಇನ್ನು ಈ ಬಾರಿಯ ಲವ್ ಮಾಕ್ಟೇಲ್ 2 ಚಿತ್ರದ ಕುರಿತಂತೆ ಕೂಡ ಭಾರಿ ನಿರೀಕ್ಷೆಗಳು ಪ್ರೇಕ್ಷಕರಲ್ಲಿ ಉದ್ದವಾಗಿದ್ದವು. ಈ ಬಾರಿ ಇದೇ ನಿರೀಕ್ಷೆಯಲ್ಲಿ ಬಿಡುಗಡೆಯಾದ ಅಂತಹ ಲವ್ ಮಾಕ್ಟೇಲ್ ಚಿತ್ರ ಈಗಾಗಲೇ ರಾಜ್ಯದಿಂದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಎಷ್ಟರಮಟ್ಟಿಗೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂದರೆ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ರಾಗಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿಗೆ ಕೂಡ ಟಿಕೆಟ್ ಸಿಗದಂತಾಗಿದೆ.

ಇಂತಹ ಕಂಟೆಂಟ್ ಹೊಂದಿರುವ ಚಿತ್ರಗಳು ಗೆದ್ದಾಗಲೆಲ್ಲ ಕನ್ನಡ ಚಿತ್ರರಂಗ ದಿನೇದಿನೇ ಒಂದು ಹಂತ ಮೇಲಕ್ಕೇರುತ್ತದೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಲವ್ ಮಾಕ್ಟೇಲ್ 2 ಚಿತ್ರದ ಆದಿ ನಿಧಿಮ ಪಾತ್ರಗಳು ಇಂದಿಗೂ ಕೂಡ ಹಚ್ಚಹಸುರಾಗಿ ಪ್ರೇಕ್ಷಕರಿಗೆ ತಾಜಾ ಸಿನಿಮಾ ಅನುಭವವನ್ನು ನೀಡುತ್ತದೆ. ಸುಷ್ಮಾ ವಿಜಯ್ ಜೋ ಮಾತ್ರವಲ್ಲದೆ ಹೊಸ ಪಾತ್ರವಾಗಿರುವ ರೆಚೆಲ್ ಕೂಡ ಎಂಟ್ರಿಯಾಗಿದೆ. ಪ್ರತಿಯೊಂದು ವಿಧದಲ್ಲೂ ಕೂಡ ಎಲ್ಲಾ ಬಗೆಯ ಪ್ರೇಕ್ಷಕರನ್ನು ಮನ ಮೆಚ್ಚಿಸುವ ಅಂಶಗಳು ಈ ಚಿತ್ರದಲ್ಲಿದೆ. ಇನ್ನು ಈಗಾಗಲೇ ಬಹುತೇಕ ರಾಜ್ಯದ ಎಲ್ಲ ಚಿತ್ರಮಂದಿರಗಳು ಕೂಡ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದರಿಂದಾಗಿ ಈಗಾಗಲೇ 10 ಕೋಟಿಗು ಹೆಚ್ಚು ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ನೀವು ಕೂಡ ಚಿತ್ರವನ್ನು ವೀಕ್ಷಿಸಿದರೆ ತಪ್ಪದೆ ಚಿತ್ರದ ಕುರಿತಂತೆ ಅಭಿಪ್ರಾಯವನ್ನು ಹಂಚಿಕೊಳ್ಳಿ.