ನಾಯಕನಾಗಿ ಮೊದಲ ಖಡಕ್ ಆದೇಶ, ಟೀಮ್ ಇಂಡಿಯಾ ಆಟಗಾರರಿಗೆ ಮೊದಲ ಎಚ್ಚರಿಕೆ ರವಾನಿಸಿದ ರೋಹಿತ್, ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2022 ರ ಹರಾಜಿನಲ್ಲಿ ನಮ್ಮ ಭಾರತೀಯ ಯುವ ಆಟಗಾರರು ಕೋಟ್ಯಾನುಕೋಟಿ ಬೆಲೆಗೆ ಮಾರಾಟವಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಇನ್ನು ಕೇವಲ ಐಪಿಎಲ್ ಮಾತ್ರವಲ್ಲದೆ ಇದೇ ಫೆಬ್ರವರಿ 16ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಪಂದ್ಯಾಟಗಳು ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ನಲ್ಲಿ ದೊಡ್ಡ ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವ ಯುವ ಆಟಗಾರರು ಕೂಡ ತಂಡದಲ್ಲಿದ್ದಾರೆ. ಇನ್ನು ಈ ಬಾರಿಯ ಸರಣಿಯನ್ನು ರೋಹಿತ್ ಶರ್ಮಾ ರವರು ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಟಿ20 ಸರಣಿಯನ್ನು ಕೂಡ ಭಾರತ ತಂಡ ಗೆಲ್ಲುವ ವಿಶ್ವಾಸದಲ್ಲಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ನಾಯಕತ್ವದ ಬದಲಾವಣೆಗಳು ನಡೆದಿದ್ದು ಸೌತ್ ಆಫ್ರಿಕಾ ಪ್ರವಾಸದಲ್ಲಿ ಸೋತಿತ್ತು. ನಂತರ ಈಗ ಪರಿಪೂರ್ಣವಾಗಿ ರೋಹಿತ್ ಶರ್ಮಾ ರವರು ಇಡೀ ತಂಡದ ಮೂರು ಫಾರ್ಮ್ಯಾಟ್ ನಾಯಕತ್ವವನ್ನು ಪಡೆದುಕೊಂಡ ಮೇಲೆ ಮೊನ್ನೆಮೊನ್ನೆಯಷ್ಟೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಪಂದ್ಯಾಟವನ್ನು ಗೆದ್ದಿತ್ತು.

ಈಗ ಟಿ20 ಪಂದ್ಯಾಟಗಳನ್ನು ಕೂಡ ಅದೇ ಜೋಶ್ ನಲ್ಲಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದೆ. ಇದೇ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ರವರು ಟೀಂ ಇಂಡಿಯಾಗೆ ನಾಯಕನಾಗಿ ಖಡಕ್ ಸೂಚನೆ ಯೊಂದನ್ನು ನೀಡಿದ್ದಾರೆ. ಹೌದು ಅದೇನೆಂದರೆ ಈಗಾಗಲೇ ಐಪಿಎಲ್ ಹರಾಜು ಮುಗಿದಿದ್ದು ಆಟಗಾರರು ಐಪಿಎಲ್ ಪಂದ್ಯ ಆಟಗಳನ್ನು ಆಡಲು ಕಾತರರಾಗಿರುತ್ತಾರೆ. ಆದರೆ ರೋಹಿತ್ ಶರ್ಮಾ ರವರು ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಐಪಿಎಲ್ ಗಾಗಿ ಅಲ್ಲ ಬದಲಾಗಿ ದೇಶಕ್ಕಾಗಿ ಮೊದಲು ಚೆನ್ನಾಗಿ ಎಂಬುದಾಗಿ ಖಡಕ್ ಸೂಚನೆ ನೀಡಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.