ದೂರದಲ್ಲಿ ಇದ್ದರೂ ಅಮೂಲ್ಯ ರವರನ್ನು ಮರೆಯದ ರಮ್ಯಾ, ಅಮೂಲ್ಯ ರವರಿಗೆ ರಮ್ಯಾ ಕೊಟ್ಟ ಉಡುಗೊರೆ ಏನು ಗೊತ್ತೇ?? ಹಾಗೂ ಅದರ ವಿಶೇಷತೆಗಳೇನು ಗೊತ್ತೇ??

361

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಸ್ಯಾಂಡಲ್ ವುಡ್ ನ ಶೈಲೂ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಿತ್ತು. ಈ ಸಮಾರಂಭಕ್ಕೆ ಇನ್ನಷ್ಟು ಮೆರಗು ಬಂದಿದ್ದು ಚಂದನವನದ ಹೆಚ್ಚಿನ ಕಲಾವಿದರು ಭಾಗಿಯಾಗಿದ್ದು. ಬೇಬಿ ಪಿಂಕ್ ಗೌನ್ ತೊಟ್ಟಿದ್ದ ಅಮೂಲ್ಯ, ಅತ್ಯಂತ ಮುದ್ದಾಗಿ ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸೀಮಂತದ ಫೋಟೋ ನೋಡಿ ಅಭಿಮಾನಿಗಳು ಖುಷಿಯಿಂದ ಹಾರೈಸಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಅಮೂಲ್ಯ ಹಾಗು ಅವರ ಪತಿ ಜಗದೀಶ್ ಇಬ್ಬರಿಗೂ ಇದು ಸಂಭ್ರಮದ ದಿನವೂ ಹೌದು. ಹಾಗಾಗಿ ಬೇಬಿ ಶವರ್ ದಿನವನ್ನು ಅತ್ಯಂತ ಮೆಮೊರೇಬಲ್ ಆಗಿ ಮಾಡುವ ಪಯತ್ನ ಮಾಡಿದ್ದಾರೆ. ನಟ ಗಣೇಶ್ ದಂಪತಿ, ಸುಧಾರಾಣಿ, ಶೃತಿ, ಮಾಳವಿಕಾ, ರಮ್ಯ ಹೀಗೆ ಹಲವಾರು ನಟ ನಟಿಯರು ಅಮೂಲ್ಯ ಅವರಿಗೆ ಆರ್ಶಿರ್ವಾದ ಮಾಡಿದ್ದಾರೆ. ಅಮೂಲ್ಯ ಅವರು ಎಲ್ಲಾ ಕಲಾವಿದರೊಂದಿಗೆ ತೆಗೆಸಿಕೊಂಡ ಫೋಟೋ ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ಎವರ್ ಗ್ರೀನ್, ಹಾರ್ಟ್ ಫೇವರೇಟ್, ನಟಿ ರಮ್ಯಾ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಸದ್ಯ ವಿದೇಶದಲ್ಲಿ ವಾಸಿಸುತ್ತಿರುವ ನಟಿ ರಮ್ಯ ಸೀಮಂತಕ್ಕೆ ತಡವಾಗಿ ಬಂದಿದ್ದರೂ ಅವರು ಬಂದಿದ್ದು ತನ್ನ ವಿಶೇಷ ದಿನವನ್ನು ಇನ್ನಷ್ಟು ವಿಶೇಷವಾಗಿಸಿತ್ತು ಎಂದು ಅಮೂಲ್ಯ ಅವರು ಸಾಮಾಜಿಕ ಜಾಲತಾಣದಲಿ ಬರೆದುಕೊಂಡಿದ್ದಾರೆ. ಇದರ ಜೊತೆರೆ ರಮ್ಯ ಕೊಟ್ಟ ಉಡುಗೊರೆಯ ಬಗ್ಗೆಯೂ ಅಮೂಲ್ಯ ಪೋಸ್ಟ್ ಮಾಡಿದ್ದಾರೆ.

ನಟಿ ರಮ್ಯ ಚಿತ್ರರಂಗದಿಂದ ದೂರವುಳಿದಿದ್ದಾರೆ. ಚಂದನಚನದಲಿ ಇಲ್ಲದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ರಮ್ಯ. ರಮ್ಯ ಸಾಮಾನ್ಯವಾಗಿ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಸಮಾರಂಭ ನಡೆದರೂ ಸಾಧ್ಯವಾದರೆ ಭಾಗವಹಿಸುವ ರಮ್ಯಾ, ಈ ಹಿಂದೆ ರಚಿತಾ ರಾಮ್ ಅವರಿಗೆ ಸೀರೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಹಾಗೆಯೇ ಈ ಬಾರಿ ಅಮೂಲ್ಯ ಅವರಿಗೆ ಕೊಟ್ಟ ಉಡುಗೊರೆ ಅಂತಿದ್ದದ್ದಲ್ಲ, ಎಲ್ಲಾ ಸಿಮಿಮಾ ತಾರೆಯರೂ ಕೊಳ್ಳಲು ಇಷ್ಟಪಡುವ ಕನಕವಲ್ಲಿ ಸೀರೆ. ಈ ಸೀರೆ ಅತ್ಯಂತ ದುಬಾರಿಬೆಲೆಯದು. ಕನಿಷ್ಠ ಹತ್ತುಸಾವಿರ ಇದರ ಆರಂಭಿಕ ಬೆಲೆ. ಇಷ್ಟು ದುಬಾರಿಯ ಸೀರೆಯನ್ನು ರಮ್ಯ ಕೊಟ್ಟಿದ್ದು ಅಮೂಲ್ಯ ಕೂಡ ಸೀರೆ ಇಷ್ಟವಾಗಿದೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಯಾವುದೇ ಚಿತ್ರದಲ್ಲಿಯೂ ನಟಿ ರಮ್ಯ ಕಾಣಿಸಿಕೊಳ್ಳುತ್ತಿಲ್ಲ, ಆದರೆ ಅವರಿಗಿರುವ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ, ಅಭಿಮಾನಿಗಳಿಗೆ ಈಗಲೂ ಅವರು ಮತ್ತೆ ನಟನೆಗೆ ಬರಲಿ ಎನ್ನುವುದೇ ಆಶಯ.