ಕೊನೆಗೂ ಅಧಿಕೃತವಾಯಿತು ಅಸಲಿ ದಾಖಲೆ, ಕಿಚ್ಚನ ಮತ್ತೊಂದು ದಾಖಲೆಯನ್ನು ಬ್ರೇಕ್ ಮಾಡಿದ ಡಿ ಬಾಸ್. ಏನು ಗೊತ್ತೇ??

118

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಹಲವಾರು ವರ್ಷಗಳ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನೀಡಿರುವ ಸ್ಟೇಟ್ಮೆಂಟ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪ್ರತಿಕ್ರಿಯೆ ನೀಡಿದ್ದರು. ಹೌದು ಗೆಳೆಯರೇ ಕಿಚ್ಚ ಸುದೀಪ್ ರವರು ಒಂದು ಕಾಲದಲ್ಲಿ ಮೆಜೆಸ್ಟಿಕ್ ಚಿತ್ರದ ಆಫರ್ ನನಗೆ ಬಂದಿತ್ತು ನಾನು ನಿರಾಕರಿಸಿದೆ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಳ್ಳಿ ಎನ್ನುವುದಾಗಿ ಚಿತ್ರ ತಂಡದವರಿಗೆ ಸಜೆಸ್ಟ್ ಮಾಡಿದ್ದೆ ಎಂಬುದಾಗಿ ಹೇಳಿಕೊಂಡಿದ್ದರು.

ಇದೇ ಕಾರಣಕ್ಕಾಗಿ ಕುಚಿಕು ಗೆಳೆಯರಂತಿದ್ದ ಇವರಿಬ್ಬರು ದೂರವಾಗಿದ್ದು ಕೂಡ ಹಳೆ ವಿಚಾರ. ನಂತರ ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನನ್ನನ್ನು ಯಾರೂ ಕೂಡ ಸಜೆಸ್ಟ್ ಮಾಡಿಲ್ಲ ನಾನೇ ನಿರ್ಮಾಪಕರ ಬಳಿ ಹೋದಾಗ ಅವರು ನನ್ನನ್ನು ನೀನೇ ನನ್ನ ಚಿತ್ರದ ಹೀರೋ ಎಂಬುದಾಗಿ ಆಯ್ಕೆ ಮಾಡಿದ್ದರು ಎಂಬುದಾಗಿ ಹೇಳಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳು ಕಿಚ್ಚ ಸುದೀಪ್ ರವರ ಅಭಿಮಾನಿಗಳು ಮಾಡಿದಂತಹ ರೆಕಾರ್ಡನ್ನು ಅಳಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಷ್ಟಕ್ಕೂ ಆ ದಾಖಲೆ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಇದೇ ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನ್ಮದಿನ ಇರೋದು ನಿಮಗೆಲ್ಲಾ ಗೊತ್ತಿದೆ. ಇದೇ ಹಿನ್ನೆಲೆಯಲ್ಲಿ ಕಾಮನ್ ಡಿಪಿಯನ್ನು ದಾಸನ ಅಭಿಮಾನಿಗಳು ಬಿಡುಗಡೆ ಮಾಡಿದ್ದರು. ಇದನ್ನು ಟ್ವಿಟರ್ನಲ್ಲಿ ಟ್ರೆಂಡ್ ಕೂಡ ಮಾಡಿದ್ದರು. ಹಿಂದೆ ಕಿಚ್ಚನ ಅಭಿಮಾನಿಗಳು ಕೂಡ ಇದೇ ರೀತಿ ಮಾಡಿದಾಗ 30 ಲಕ್ಷ ಟ್ವೀಟ್ ಗಳನ್ನು 24ಗಂಟೆಯಲ್ಲಿ ಮಾಡಿದ್ದರು. ಆದರೆ ಈಗ ಡಿ ಬಾಸ್ ಅಭಿಮಾನಿಗಳು 24ಗಂಟೆಯಲ್ಲಿ ಬರೋಬ್ಬರಿ 42 ಲಕ್ಷ ಟ್ವೀಟ್ ಗಳನ್ನು ಮಾಡಿ ದಾಖಲೆಯನ್ನು ಮುರಿದಿದ್ದಾರೆ. ತಮ್ಮ ಆರಾಧ್ಯ ದೈವವಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಈ ಮೂಲಕ ಜನ್ಮದಿನದ ಶುಭಾಶಯಗಳನ್ನು ಮುಂಚಿತವಾಗಿ ಕೋರಿದ್ದಾರೆ.