ಬಿಗ್ ನ್ಯೂಸ್: ತನ್ನ ಆಟೋ ಪಯಣ ನಿಲ್ಲಿಸಿದ ರಾಶಿ, ಮಿಥುನ್ ಇನ್ಮೇಲೆ ಸಿಗಲ್ಲ. ಕಾರಣವೇನು ಗೊತ್ತೇ?? ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ.
ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಕನ್ನಡ ಕಿರುತೆರೆ ಧಾರಾವಾಹಿಗಳು ಜನರನ್ನು ತುಂಬಾ ಸೆಳೆಯುತ್ತಿವೆ. ಮೊದಲಿಗಿಂತಲೂ ಜನರಿಗೆ ಇತ್ತೀಚಿಗೆ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಮೇಲೆ ಒಲವು ಹೆಚ್ಚಾಗಿದೆ. ಇದಕ್ಕೆ ಆಯ ಧಾರಾವಾಹಿಗಳಲ್ಲಿ ಆಯಾ ಪಾತ್ರಕ್ಕೆ ತಕ್ಕ ನಟರುಗಳ ಅಭಿನಯ ಹಾಗೂ ವಿಭಿನ್ನವಾದ ಕಥಾ ಹಂದರ. ಆದರೂ ಕೆಲವೊಮ್ಮೆ ಚೆನ್ನಾಗಿ ಮೂಡಿಬರುತಿರುವ ಧಾರಾವಾಹಿಗಳನ್ನು ಬೇಗ ಮುಗಿಸಿಬಿಡುತ್ತಾರೆ. ಇದೀಗ ಮಿಥುನ ರಾಶಿ ತನ್ನ ಪ್ರಯಾಣವನ್ನು ಮುಗಿಸುವ ಹಂತದಲ್ಲಿದೆ.
ಹೌದು ಕಲರ್ಸ್ ಕನ್ನಡದಲ್ಲಿ ವಿಭಿನ್ನವಾದ ವಿಶೇಷವಾದ ಕಥಾಹಂದರವನ್ನು ಇಟ್ಟುಕೊಂಡು ಪ್ರಸಾರವಾಗುತ್ತಿದ್ದ ಧಾರಾವಾಹಿ ಮಿಥುನ ರಾಶಿ. ಈ ಧಾರಾವಾಹಿ ಆರಂಭದಲ್ಲಿಯೇ ಜನರಿಗೆ ತುಂಬಾನೇ ಹತ್ತಿರವಾಗಿತ್ತು. ಕಾರಣ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ರಾಶಿ, ಆಟೋ ಚಾಲಕಿಯಾಗಿ ಧಾರಾವಾಹಿಯುದ್ದಕ್ಕೂ ಕಾಣಿಸಿಕೊಂಡಿದ್ದು. ಒಂದು ಮಧ್ಯಮವರ್ಗದ ಹೆಣ್ಣುಮಗಳು ಮರ್ಯಾದೆಯಿಂದ ಆಟೋ ಓಡಿಸಿಯಾದರೂ ಬದುಕುತ್ತಾಳೆ ಅನ್ನೊದನ್ನ ಇದರಲ್ಲಿ ಬಹಳ ಸೂಕ್ಷ್ಮವಾಗಿ ತೋರಿಸಲಾಗುತ್ತು. ಹಾಗಾಗಿ ಮಧ್ಯಮ ವರ್ಗದ ಜನ ಈ ಧಾರಾವಾಹಿಯನ್ನು ಹೆಚ್ಚು ಇಷ್ತಪಟ್ಟಿದ್ದರು.

ಮೂರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಇದೀಗ ಕೊನೆಯ ಹಂತ ತಲುಪಿದೆ. ಜನರನ್ನು ಸೆಳೆದಿದ್ದ ಮಿಥುನರಾಶಿ ಧಾರಾವಾಹಿಯನ್ನು ಮುಗಿಸುತ್ತಿರುವುದು ವೀಕ್ಷಕರಿಗೆ ಕಹಿ ಸುದ್ದಿಯಾಗಿದೆ. ಇದರಲ್ಲಿನ ಪ್ರತಿಪಾತ್ರವೂ ಬಹಳ ಉತ್ತಮವಾಗಿದ್ದು, ಕಲಾವಿದರೂ ಕೂಡ ಅಷ್ಟೇ ಉತ್ತಮವಾಗಿ ನಟಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ತನ್ನ ಕೊನೆಯ ಎಪಿಸೋಡ್ ಗಳನ್ನು ಮುಗಿಸಿ ಮಿಥುನರಾಶಿ ಪ್ರಸಾರಕ್ಕೆ ತೆರೆ ಎಳೆಯಲಿದೆ ಕಲರ್ಸ್ ಕನ್ನಡ. ಇದರ ಬೆನ್ನಲ್ಲಾ ದಾಸ ಪುರಂದರ ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ಧಾರಾವಾಹಿಗೂ ಜನರ ಪ್ರೇತಿ ಹಾಗೂ ಹಾರೈಕೆ ಇರಲಿ ಎನ್ನುವುದು ದಾಸ ಪುರಂದರ ಧಾರಾವಾಹಿ ತಂಡದ ಆಶಯ.
ಇನ್ನು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಕೂಡ ತನ್ನ ಪ್ರಸಾರವನು ನಿಲ್ಲಿಸುತ್ತಿದೆ. ಜನರ ಒತ್ತಾಯದ ಮೇರೆಗೆ ಇನ್ನಷ್ಟು ಎಪಿಸೋಡ್ ಗಳನ್ನು ಪ್ರಸಾರ ಮಾಡಿದ್ದ ಧಾರಾವಾಹಿ ತಂಡ ಇದೀಗ ಧಾರಾವಾಗಿಯನ್ನು ಮುಗಿಸುವ ನಿರ್ಧಾರ ಮಾಡಿದೆ. ಒಂದು ಧಾರಾವಾಹಿ ಮುಗಿದರೆ, ಜನರ ಅಭಿರುಚಿಗೆ ತಕ್ಕ ಹಾಗೆ ಇನ್ನೊಂದು ಧಾರಾವಾಹಿಯನು ನಿರ್ಮಾಣ ಮಾಡಿ ಜನರಿಗೆ ಉತ್ತಮ ಮನೋರಂಜನೆ ಒದಗಿಸುವುದೇ ವಾಹಿನಿಗಳ ಉದ್ದೇಶ!