ಮೇಘನಾ ರಾಜ್ ರವರನ್ನು ಡ್ಯಾನ್ಸ್ ವೇದಿಕೆ ಬಳಸಿಕೊಳ್ಳುತ್ತಿರುವ ರೀತಿ ನೋಡಿ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೇಘನಾರಾಜ್ ರವರು ಪತಿ ಆಗಿರುವ ನಟ ಚಿರು ಸರ್ಜಾ ರವರನ್ನು ಕಳೆದುಕೊಂಡ ನಂತರ ಒಂದು ವರ್ಷದವರೆಗೆ ಎಲ್ಲೂ ಕೂಡ ಹೊರಗಡೆ ಕಾಣಿಸಿಕೊಳ್ಳದೆ ದುಃಖದ ಕಡಲಲ್ಲಿ ಮುಳುಗಿದ್ದರು. ನಂತರ ಅವರ ಜೀವನಕ್ಕೆ ಬೆಳಕಾಗಿ ಬಂದಿದ್ದು ಅವರ ಪುತ್ರ ರಾಯನ್ ರಾಜ್ ಸರ್ಜಾ. ಹೌದು ಗೆಳೆಯರೇ ಅವರಿಗಾಗಿಯೇ ಮತ್ತೆ ಕಿರುತೆರೆ ಹಾಗೂ ಸಿನಿಮಾ ರಂಗಕ್ಕೆ ಮೇಘನಾ ರಾಜ್ ರವರ ಸಕ್ರಿಯರಾಗಿ ಭಾಗವಹಿಸಲು ಆರಂಭಿಸುತ್ತಾರೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮಕ್ಕೆ ಹಾಗೂ ಎರಡು ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ. ಚಿರು ಸರ್ಜಾ ರವರನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಇಡೀ ಕರ್ನಾಟಕವೇ ಮೇಘನಾ ರಾಜ್ ರವರ ಕಣ್ಣೀರನ್ನು ಒರೆಸಲು ಮುಂದೆ ಬಂದಿತ್ತು ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕಾಗುತ್ತದೆ.

ಒಂಟಿಯಾಗಿದ್ದ ಸಂದರ್ಭದಲ್ಲಿ ಎಲ್ಲರ ಪ್ರಾರ್ಥನೆಯಂತೆ ಗಂಡು ಮಗು ಜನಿಸಿತು. ಈ ಸಂದರ್ಭದಲ್ಲಿ ಚಿರುಸರ್ಜ ಹಾಗೂ ಸುಂದರ ರಾಜ್ ಕುಟುಂಬದ ನಡುವಿನ ಮನಸ್ತಾಪ ವು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ಪರಿಸ್ಥಿತಿಯಲ್ಲಿ ಮಗುವನ್ನು ಆರೈಕೆ ಮಾಡುವುದು ಮೇಘನ ರಾಜ್ ರವರ ಆದ್ಯ ಕರ್ತವ್ಯವಾಗಿತ್ತು. ಆಗ ಸಿನಿಮಾದಲ್ಲಿ ನಟನೆ ಮಾಡುವುದಾ ಬೇಡವಾ ಎನ್ನುವ ದ್ವಂದ್ವ ನಿಲುವು ಕೂಡ ಮೇಘನರಾಜ್ ರವರ ತೊಳಲಾಟವನ್ನು ಹೆಚ್ಚು ಮಾಡಿತ್ತು. ಈ ಸಂದರ್ಭದಲ್ಲಿ ಅವರ ತಾಯಿಯಾಗಿರುವ ಪ್ರಮೀಳಾ ಜೋಷಾಯಿ ರವರು ಸಿನಿಮಾಗಳ ಬೇಡಿಕೆ ಇದ್ದರೂ ಕೂಡ ಸಿನಿಮಾರಂಗದಿಂದ ದೂರವಾಗಿ ಮಗಳ ಆರೈಕೆಯಲ್ಲಿ ತೊಡಗಿದ್ದರು.
ಹೌದು ಪ್ರಮೀಳಾ ಜೋಷಾಯ್ ರವರು ಪೋಷಕ ಪಾತ್ರದಲ್ಲಿ ನಟಿಸುವುದಕ್ಕೆ ತುಂಬಾನೇ ಫೇಮಸ್ ಎಂಬುದು ನಿಮಗೆಲ್ಲಾ ಗೊತ್ತಿದೆ. ಆದರೂ ಕೂಡ ಮಗಳು ಇನ್ನೂ ಚಿಕ್ಕವಳು ಚಿತ್ರರಂಗದಲ್ಲಿ ಇನ್ನೂ ಕೂಡ ಹೆಸರು ಮಾಡಬೇಕಾದ್ದು ತುಂಬಾನೇ ಇದೆ. ಇದಕ್ಕಾಗಿಯೇ ಮೊಮ್ಮಗುವಿನ ಪಾಲನೆ-ಲಾಲನೆಯಲ್ಲಿ ಪ್ರಮೀಳಾ ಜೋಷಾಯಿ ರವರು ತೊಡಗಿಕೊಂಡಿದ್ದು ಮೇಘನಾ ರಾಜ್ ರವರು ಈಗ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಬಾರಿ ಚಿತ್ರೀಕರಣ ಮುಗಿಸಿಕೊಂಡು ಬರುವುದು ರಾತ್ರಿಯಾಗುತ್ತದೆ ಹೀಗಾಗಿ ತಾಯಿ ಪ್ರಮೀಳಾ ಜೋಷಾಯ್ ರವರು ಮಗನ ಆರೈಕೆ ಮಾಡುತ್ತಾರೆ ಎನ್ನುವ ನಿರಾಳತೆಯಲ್ಲಿ ಚಿತ್ರೀಕರಣದಲ್ಲಿ ಇದೀಗ ಮೇಘನರಾಜ್ ರವರು ತೊಡಗಿಕೊಳ್ಳುತ್ತಿದ್ದಾರೆ.
ಕೆಲವು ಸಮಯಗಳ ಹಿಂದೆಯೇ ಮೇಘನರಾಜ್ ರವರು ಹೇಳಿದಂತೆ ಅವರಿಗೆ ಬಣ್ಣದ ಲೋಕವೇ ಅನ್ನವನ್ನು ನೀಡುತ್ತಿರುವುದು. ಅಲ್ಲಿಯೇ ಅವರು ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ. ಸಿನಿಮಾ ಅಥವಾ ಕಿರುತೆರೆ ಎನ್ನುವ ಭೇದಭಾವವಿಲ್ಲದೆ ಮೇಘನಾರಾಜ್ ರವರು ಎಲ್ಲವೂ ಕೂಡ ಬಣ್ಣದ ಲೋಕವೇ. ಇಲ್ಲಿಯೇ ನನ್ನ ಜೀವನ ನನ್ನ ಬದುಕು ಎಂಬುದಾಗಿ ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ನೋಡಿದಾಗ ಚಿರು ಸರ್ಜಾ ಅವರನ್ನು ಟಿಆರ್ ಪಿ ವಸ್ತುವನ್ನಾಗಿ ಮಾಡಿಕೊಂಡಿದೆ ಎಂಬುದಾಗಿ ಪ್ರೇಕ್ಷಕರಿಗೆ ಅನಿಸಲು ಪ್ರಾರಂಭವಾಗಿದೆ.
ಮೇಘನಾ ರಾಜ್ ರವರು ನಡೆದಿರುವ ಕಹಿ ಘಟನೆಯನ್ನು ಮರೆತು ಮುಂದೆ ಸಾಗಲು ಪ್ರಯತ್ನ ಪಡುತ್ತಿದ್ದರೆ, ಮತ್ತೆ ಚಿರುಸರ್ಜ ರವರ ನೆನಪುಗಳನ್ನು ತೋರಿಸಿ ಅವರ ಕಣ್ಣಿನಲ್ಲಿ ನೀರು ಬರುವಂತೆ ಮಾಡುತ್ತಿದ್ದಾರೆ ವಾಹಿನಿಯವರು. ಇದು ಪ್ರೇಕ್ಷಕರ ಬೇಸರಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಹೌದು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಕೂಡ ಚಿರುಸರ್ಜ ರವರನ್ನು ಉಲ್ಲೇಖಿಸಿ ಮೇಘನಾರಾಜ್ ರವರ ಕಣ್ಣೀರಿಗೆ ಕಾರಣರಾಗಿದ್ದರು. ಇನ್ನು ಈ ಕಡೆ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಕೂಡ ಚಿರುಸರ್ಜ ರವರು ನೀಡಿರುವ ಉಡುಗೊರೆಗಳನ್ನು ಮತ್ತೆ ಪುನಹ ತಂದು ಮೇಘನಾ ರಾಜ್ ರವರ ಕಣ್ಣೀರಿಗೆ ಕಾರಣವಾಗಿದ್ದರು.

ಇಷ್ಟು ಮಾತ್ರವಲ್ಲದೆ ಕಾರ್ಯಕ್ರಮದಲ್ಲಿ ಚಿರು ಹಾಗೂ ಮೇಘನಾರಾಜ್ ರವರು ಮಾತನಾಡಿರುವ ಆಡಿಯೋವನ್ನು ಕೂಡ ಹಾಕಿ ಮತ್ತೊಮ್ಮೆ ಇದೇ ವಿಚಾರವನ್ನು ಮರುಕಳಿಸುವಂತೆ ಮಾಡಿದ್ದಾರೆ. ಈ ಕಾರ್ಯಕ್ರಮಗಳಿಂದ ಮತ್ತೆ ಮೇಘನಾ ರಾಜ್ ರವರ ಜೀವನ ಸಾಮಾನ್ಯ ಸ್ಥಿತಿಗೆ ಮರಳಿ ಬಂದು ಅವರ ಜೀವನದಲ್ಲಿ ಸುಖ ಸಂತೋಷ ನೆಲೆಸಲಿ ಎಂಬುದಾಗಿ ಪ್ರೇಕ್ಷಕರು ಹಾರೈಸುತ್ತಿದ್ದಾರೆ. ಆದರೆ ಚಿರು ಸರ್ಜಾ ರವರನ್ನು ಅದಕ್ಕೆ ಬಳಸಿಕೊಂಡು ಟಿಆರ್ ಪಿ ಯನ್ನು ಹೆಚ್ಚಿಸುವ ವಸ್ತುವನ್ನಾಗಿ ಬಳಸಿಕೊಳ್ಳದಿರಲಿ ಎಂಬುದಾಗಿ ಕೂಡಾ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವನ್ನು ಸಂಬಂಧಪಟ್ಟವರು ಅರಿತುಕೊಂಡರೆ ಪ್ರೇಕ್ಷಕರ ಅಭಿಪ್ರಾಯ ಕೂಡ ಬದಲಾಗುತ್ತದೆ. ಯಾಕೆಂದರೆ ಮೇಘನಾ ರಾಜ್ ರವರ ನಗು ಮುಖವನ್ನು ನೋಡಲು ಬಯಸುವ ಅಭಿಮಾನಿಗಳು ಪುನಃ ಪುನಹ ಚಿರು ಸರ್ಜಾ ರವರ ವಿಚಾರವನ್ನು ವಾಹಿನಿ ನೆನಪಿಸುವಂತೆ ಮಾಡಿ ಅವರ ಕಣ್ಣಿನಲ್ಲಿ ನೀರು ಬರುವುದನ್ನು ನೋಡಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಇದನ್ನು ಡ್ಯಾನ್ಸ್ ಕಾರ್ಯಕ್ರಮದ ಆಯೋಜಕರು ನೆನಪಿನಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು.