ಮೆಗಾ ಹರಾಜು ಮುಗಿದಿದೆ, ಎಲ್ಲರೂ ತಂಡ ಕಟ್ಟಿದ್ದಾರೆ, ಆದರೆ ಎಲ್ಲರಿಗಿಂತ ಬಲಿಷ್ಠ ತಂಡ ಯಾವುದು ಗೊತ್ತೇ?? ಇದಪ್ಪ ಟೀಮ್ ಅಂದ್ರೆ.
ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಈ ಬಾರಿಯ ಐಪಿಎಲ್ 2022 ರ ಮೆಗಾ ಹರಾಜು ಮುಕ್ತಾಯಗೊಂಡಿದ್ದು ಕೆಲವೊಂದು ಆಟಗಾರರು ನಿರೀಕ್ಷಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವುದು ಎಲ್ಲರಿಗೂ ಆಶ್ಚರ್ಯವನ್ನು ತಂದಿದೆ. ಅದರಲ್ಲೂ ಈ ಬಾರಿ ಕೆಲವು ತಂಡಗಳು ಕೆಲವು ಆಟಗಾರರನ್ನು ಖರೀದಿಸಬಹುದು ಎಂಬುದಾಗಿ ಅಂದಾಜು ಹಾಕಲಾಗಿತ್ತು. ಅವರನ್ನು ಬೇರೆ ತಂಡಗಳು ಖರೀದಿಸಿದವು.
ಇನ್ನೂ ಕೆಲವು ಆಟಗಾರರನ್ನು ಈ ಬಾರಿಯ ಐಪಿಎಲ್ ನಲ್ಲಿ ಖರೀದಿಸಲಿಲ್ಲ. ಅವರಲ್ಲಿ ಸುರೇಶ್ ರೈನಾ ಸ್ಟೀವ್ ಸ್ಮಿತ್ ಹೀಗೆ ಹಲವಾರು ಆಟಗಾರರು ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಬಾರಿಯ ಮೆಗಾ ಹರಾಜಿನ ನಂತರ ಯಾವ ತಂಡ ಸ್ಟ್ರಾಂಗ್ ತಂಡವಾಗಿ ಕಾಣಿಸಿಕೊಳ್ಳುತ್ತಿದೆ ಎಂಬುದಾಗಿ ಹಲವಾರು ಚರ್ಚೆಗಳು ನಡೆಯುತ್ತಿವೆ. ನಾವು ಕಂಡ ಪ್ರಕಾರ ಈ ಬಾರಿಯ ಐಪಿಎಲ್ ನಲ್ಲಿ ಯಾವ ತಂಡ ಸ್ಟ್ರಾಂಗ್ ಆಗಿದೆ ಎಂಬುದನ್ನು ಹೇಳಲು ಹೊರಟಿದ್ದೇವೆ. ಲೇಖನಿಯನ್ನು ಕೊನೆಯವರೆಗೂ ತಪ್ಪದೇ ಓದಿ.

ಮೆಗಾ ಹರಾಜಿನ ಪ್ರಕಾರ ನಮ್ಮ ಅಂದಾಜಿನ ಲೆಕ್ಕಾಚಾರದಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳುತ್ತಿದೆ. ಅಕ್ಷರ್ ಪಟೇಲ್ ಪೃಥ್ವಿ ಶಾ ಅನ್ರಿಕ್ ನಾರ್ಕಿಯಾ ರವರನ್ನು ಈಗಾಗಲೆ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಇನ್ನು ಹರಾಜಿನಲ್ಲಿ ಡೇವಿಡ್ ವಾರ್ನರ್ ಮಿಚೆಲ್ ಮಾರ್ಷ್ ಶಾರ್ದುಲ್ ಥಾಕೂರ್ ಮುಸ್ತಾಫಿಜುರ್ ರೆಹಮಾನ್ ಕುಲದೀಪ್ ಯಾದವ್ ಅಶ್ವಿನ್ ಹೆಬ್ಬಾರ್ ಸರ್ಫರಾಜ್ ಖಾನ್ ಕಮಲೇಶ್ ನಾಗರಕೋಟಿ ಕೆಎಸ್ ಭರತ್ ಮಂದೀಪ್ ಸಿಂಗ್ ಖಲೀಲ್ ಅಹ್ಮದ್. ಈ ಬಾರಿಯ ಅಂಡರ್-19 ತಂಡದ ಕಪ್ತಾನ ಯಶ್ ಧುಲ್ ಚೇತನ್ ಸಕರಿಯ ಪೋವೆಲ್ ಪ್ರವೀಣ್ ದುಬೆ ಲಲಿತ್ ಯಾದವ್ ರಿಪಾಲ್ ಪಟೇಲ್. ಹೀಗೆ ಬಹುತೇಕ ಎಲ್ಲಾ ಪ್ರತಿಭಾನ್ವಿತ ಆಟಗಾರ ರಿಂದಲೇ ತುಂಬಿರುವ ಡೆಲ್ಲಿ ತಂಡ ಈ ಬಾರಿಯ ಶಕ್ತಿಶಾಲಿ ತಂಡಗಳಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಿದೆ.