ಖರೀದಿ ಮಾಡಿರುವ ಆಟಗಾರನ್ನು ಬಳಸಿ ಆರ್ಸಿಬಿ ತಂಡ ಹೇಗೆ ಕಟ್ಟಬಹುದು ಗೊತ್ತೇ?? ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಸಂಭಾವ್ಯ ತಂಡ ಹೇಗಿರಲಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಂತು-ಇಂತು ಈ ಬಾರಿಯ ಟಾಟಾ ಐಪಿಎಲ್ 2022 ರ ಮೆಗಾ ಹರಾಜು ಯಶಸ್ವಿಯಾಗಿ ಮುಗಿದಿದೆ. ಬರೋಬ್ಬರಿ 204 ಆಟಗಾರರು ಈ ಬಾರಿ ಹರಾಜಿನಲ್ಲಿ ಸೇಲ್ ಆಗಿದ್ದಾರೆ. ಎಲ್ಲಾ ತಂಡಗಳು ತಮ್ಮ ನಿರೀಕ್ಷಿತ ಆಟಗಾರರನ್ನು ಉತ್ತಮ ಬೆಲೆಗೆ ಖರೀದಿಸಿದ್ದಾರೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ. ಹೌದು ಈಗಾಗಲೇ ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್ ಹಾಗೂ ಆಸ್ಟ್ರೇಲಿಯಾದ ಆಲ್-ರೌಂಡರ್ ಆಗಿರುವಾಗ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

ಇದಾದ ನಂತರ ಈಗ ಮಗ ಹರಾಜಿನಲ್ಲಿ ಒಟ್ಟು 18 ಆಟಗಾರರನ್ನು ಖರೀದಿಸಿದೆ. ಒಟ್ಟಿಗೆ 21 ಆಟಗಾರರನ್ನು ತನ್ನಲ್ಲಿ ಉಳಿಸಿಕೊಂಡಿದೆ. ಹಾಗಿದ್ದರೆ ಯಾರನ್ನು ಎಷ್ಟು ಮೊತ್ತಕ್ಕೆ ಖರೀದಿಸಿದ್ದಾರೆ ಎಂಬುದನ್ನು ನೋಡೋಣ ಬನ್ನಿ. ಫಾಫ್ ಡು ಪ್ಲೆಸಿಸ್ 7ಕೋಟಿ ಹರ್ಷಲ್ ಪಟೇಲ್ 10.75 ಕೋಟಿ ಶ್ರೀಲಂಕಾದ ವನಿಂದು ಹಸಿ ರಂಗ ಕೂಡ ಅಷ್ಟೇ ಬೆಲೆಗೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ರವರನ್ನು 5.50 ಕೋಟಿಗೆ ಜೋಶ್ ಹೆಝಲ್ವುಡ್ 7.75 ಕೋಟಿಗೆ ಶಹಬಾಜ್ ಅಹ್ಮದ್ 2.40 ಕೋಟಿಗೆ ಅನುಜ್ ರಾವತ್ 3.40 ಕೋಟಿಗೆ ಆಕಾಶದೀಪ್ ಸಿಂಗ್ 20 ಲಕ್ಷ ರೂಪಾಯಿ ಮಹಿಪಾಲ್ ಲೊಮ್ರೋರ್ 95 ಲಕ್ಷ ರೂಪಾಯಿ,
ಫಿನ್ ಆಲೆನ್ 80 ಲಕ್ಷ ರೂಪಾಯಿ ಶರ್ಪೆನ್ ರುದರ್ಫೋರ್ಡ್ ಒಂದು ಕೋಟಿ ರೂಪಾಯಿ ಜೆಸೆನ್ 75 ಲಕ್ಷ ರೂಪಾಯಿ ಸುರೇಶ್ ಪ್ರಭುದೇಸಾಯಿ 30 ಲಕ್ಷ ರೂಪಾಯಿ ಚಾಮ ಮಿಲಿಂದ್ 25 ಲಕ್ಷ ರೂಪಾಯಿ ಅನಿಶ್ವರ್ ಗೌತಮ್ 20 ಲಕ್ಷ ರೂಪಾಯಿ ಕರ್ಣ್ ಶರ್ಮಾ 50 ಲಕ್ಷ ರೂಪಾಯಿ ಸಿಸೋಡಿಯ 20 ಲಕ್ಷ ರೂಪಾಯಿ ಸಿದ್ದಾರ್ಥ್ ಕೌಲ್ 70 ಲಕ್ಷ ರೂಪಾಯಿ ಡೇವಿಡ್ ವಿಲ್ಲೆ 2 ಕೋಟಿ ರೂಪಾಯಿ. ಇನ್ನು ಪ್ಲೇಯಿಂಗ್ ಇಲೆವೆನ್ ಸಂಭಾವ್ಯರ ಪಟ್ಟಿಯಲ್ಲಿ ಯಾರೆಲ್ಲ ಇರಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಆರಂಭಿಕ ಆಟಗಾರನಾಗಿ ಫಾಫ್ ಡು ಪ್ಲೆಸಿಸ್ ಇರಲಿದ್ದಾರೆ. ಅವರ ಜೊತೆ ಜೊತೆಗಾರನಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಹಿಪಾಲ್ ಲೊಮ್ರೋರ್ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಛಾಪನ್ನು ಮೂಡಿಸಲಿದ್ದಾರೆ. ಐದನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ರವರು ಕಾಣಿಸಿಕೊಳ್ಳಲಿದ್ದಾರೆ.
ಅನುಜ್ ರಾವತ್ ಅವರು 6ನೇ ಕ್ರಮಾಂಕದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಇನ್ನು ಆಲ್-ರೌಂಡರ್ ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ಅವರು ಕೂಡ ಇರಲಿದ್ದಾರೆ. ಶಹಬಾಜ್ ಅಹಮದ್ ಮೊಹಮ್ಮದ್ ಸಿರಾಜ್ ಹಾಗೂ ಜೋಶ್ ಹೆಜ್ಜಲ್ ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬೌಲಿಂಗ್ ಬಾಳೆಯನ್ನು ಸಂಭಾಳಿಸಿದ್ದಾರೆ. ಈ ಬಾರಿ ಖಂಡಿತವಾಗಿಯೂ ಕಪ್ ನಮ್ಮದೇ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ತಂಡವನ್ನು ನೋಡಿದವರು ಹೇಳುತ್ತಿದ್ದಾರೆ.