ಕೊನೆಗೂ ಸರಿ ಹೋದ ಯೌಟ್ಯೂಬ್ ಅಂಕಿ ಅಂಶ, ಅಸಲಿಗೆ ನಿಜವಾಗಲೂ ಜೇಮ್ಸ್ ಪಡೆದದ್ದು ಎಷ್ಟು ವೀಕ್ಷಣೆ ಗೊತ್ತೇ?? ಗೊತ್ತಿಲ್ಲದೇ ಸುಮ್ಮನೆ ಮಾತಾಡಬೇಡಿ.

733

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ತಿಂಗಳುಗಳು ಕಳೆದು ಹೋಗಿವೆ. ಇಂದಿಗೂ ಕೂಡ ಅವರ ನೆನಪು ನವನವೀನ ವಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ಟೀಸರ್ ಈಗಾಗಲೆ ಬಿಡುಗಡೆಯಾಗಿದ್ದು ಕೋಟ್ಯಾಂತರ ವೀಕ್ಷಣೆಗಳನ್ನು ಪಡೆಯುವ ಮೂಲಕ ಹಳೆಯ ರೆಕಾರ್ಡ್ ಗಳನ್ನು ಮೂಲೆಗೆ ಬಿಸಾಕಿದೆ.

ಇದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಇದೊಂದು ಎಮೋಷನಲ್ ಚಿತ್ರ ಎಂದು ಹೇಳಬಹುದಾಗಿದೆ. ಯಾಕೆಂದರೆ ಈ ಚಿತ್ರದ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ನೋಡಲಾಗುತ್ತದೆ. ಅಪ್ಪು ಅವರನ್ನು ಇನ್ನು ದೊಡ್ಡ ಪರದೆ ಮೇಲೆ ಮೇಲೆ ನೋಡಲು ಸಾಧ್ಯವಾಗುವುದಿಲ್ಲ ಎಂಬ ಕಲ್ಪನೆಯೇ ನಮಗೆ ಹೃದಯ ಹಿಂಡಿದಂತಾಗುತ್ತದೆ. ಇನ್ನು ಜೇಮ್ಸ್ ಚಿತ್ರದ ಟೀಸರ್ ಅನ್ನು ಪರಭಾಷೆ ಹಲವಾರು ಸೆಲೆಬ್ರಿಟಿಗಳು ಕೂಡ ಶೇರ್ ಮಾಡಿಕೊಂಡು ಪುನೀತ್ ರಾಜಕುಮಾರ್ ರವರನ್ನು ನೆನಪಿಸಿಕೊಂಡಿದ್ದಾರೆ. ಅವರಲ್ಲಿ ಬಾಹುಬಲಿ ಖ್ಯಾತಿಯ ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಆಗಿರುವ ಪ್ರಭಾಸ್ ಕೂಡ ಒಬ್ಬರು.

ಇವರಿಬ್ಬರು ಹಿಂದಿನಿಂದಲೂ ಕೂಡ ಸ್ನೇಹ ಸಂಬಂಧವನ್ನು ಹಂಚಿಕೊಂಡು ಬಂದವರು. ಇನ್ನು ಜೇಮ್ಸ್ ಚಿತ್ರ ಕ್ರಿಯೇಟ್ ಮಾಡಿರುವ ರೆಕಾರ್ಡ್ ಕೂಡ ವಿಶೇಷವಾದದ್ದು. ಹಾಗಿದ್ದರೆ ಆ ರೆಕಾರ್ಡ್ ಏನೆಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯ ಪವರ್ ಸ್ಟಾರ್ ಅಪ್ಪು ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಚಿತ್ರದ ಟೀಸರ್ 24 ಗಂಟೆ ಒಳಗಡೆ ಬರೋಬ್ಬರಿ 10 ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಪಡೆದು ಕನ್ನಡ ಚಿತ್ರರಂಗದ ಮಟ್ಟಿಗೆ ಇತಿಹಾಸವನ್ನು ನಿರ್ಮಿಸಿತ್ತು. ಇದು ಕನ್ನಡಿಗರು ಹಾಗೂ ಅಪ್ಪು ಅಭಿಮಾನಿಗಳು ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಮೇಲೆ ಇಟ್ಟಂತಹ ಪ್ರೀತಿಯ ತೀವ್ರತೆಯ ಉದಾಹರಣೆಯಾಗಿದೆ. ಚಿತ್ರ ಇದೇ ಮಾರ್ಚ್ 17 ರಂದು ತೆರೆಗೆ ಅಪ್ಪಳಿಸುವ ನಿರೀಕ್ಷೆ ಇದ್ದು ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.