ಶ್ರೀನಿವಾಸಪುರದ ಚೈತ್ರಾಳ ಘಟನೆ ನಡೆದ ಎರಡೇ ದಿನಕ್ಕೆ ಆಗಿರುವುದು ಏನು ಗೊತ್ತಾ. ಮತ್ತೆ ಕಣ್ಣೀರು ಹಾಕಿದ ಕನ್ನಡಿಗರು. ಯಾಕೆ ಗೊತ್ತೇ??

1,037

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೆ ನಮ್ಮ ರಾಜ್ಯದಲ್ಲಿ ನಡೆದಿರುವಂತಹ ಒಂದು ಘಟನೆ ಇಡೀ ರಾಜ್ಯದ ಜನರ ಕಣ್ಣೀರಿಗೆ ಕಾರಣವಾಗಿತ್ತು. ಹೌದು ನಾವು ಮಾತನಾಡುತ್ತಿರುವುದು ಶ್ರೀನಿವಾಸಪುರದ ಚೈತ್ರ ರವರ ಕುರಿತಂತೆ. ಅವರ ಬ್ರೈನ್ ಡೆ’ಡ್ ಆದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ಇದ್ದಂತಹ ಒಬ್ಬಳೇ ಮಗಳ ಮರಣದ ಹೊತ್ತಲ್ಲು ಕೂಡ ಅವಳ ಪೋಷಕರು ಅವಳ ಅಂಗಾಂಗವನ್ನು ದಾನ ಮಾಡುವುದರ ಮೂಲಕ ಸಾರ್ಥಕತೆಯನ್ನು ಮೆರೆದಿದ್ದರು. ಈಗ ಅದಾದ ಎರಡೇ ದಿನಕ್ಕೆ ನಡೆದಿರುವ ಘಟನೆ ಮತ್ತೊಮ್ಮೆ ಸುದ್ದಿಯಲ್ಲಿದೆ.

ಅದರಲ್ಲೂ ಕೂಡ ಮದುವೆ ದಿನವೇ ಚೈತ್ರಾ ರವರು ತಮ್ಮ ಜೀವನದ ಕೊನೆಯ ಉಸಿರನ್ನು ಚೆಲ್ಲಿದ್ದು ನಿಜಕ್ಕೂ ಕೂಡ ಎಲ್ಲರನ್ನೂ ಡಿಸ್ಟರ್ಬ್ ಮಾಡಿತ್ತು. ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲಾ ಕಡೆ ಕೂಡ ಚೈತ್ರಾ ರವರ ಮರಣಕ್ಕೆ ಕಂಬನಿಯ ಲಾಗಿತ್ತು. ಒಂದು ಕಾಲದಲ್ಲಿ ನಮ್ಮ ಪೂರ್ವಜರು ಶತಾಯುಷಿ ಗಳಾಗಿ ಗಟ್ಟಿಮುಟ್ಟಾಗಿ ಜೀವನ ನಡೆಸಿಕೊಂಡಿದ್ದರು. ಈಗ ನೋಡಿದರೆ 20ರಿಂದ 25 ವರ್ಷಕ್ಕೆ ಕುಸಿದುಬಿದ್ದು ಯುವಜನತೆ ಮರಣವನ್ನು ಹೊಂದುತ್ತಿದ್ದಾರೆ. ಇದರಿಂದಾಗಿ ನಮ್ಮ ಸಮಾಜ ಎತ್ತ ಹೋಗುತ್ತಿದೆ ಎಂಬುದರ ಕುರಿತಂತೆ ಚಿಂತೆ ಹೆಚ್ಚಾಗಿದೆ. ಇದೇ ರೀತಿಯ ಘಟನೆ ಒಂದು ಇತ್ತೀಚಿಗೆ ನಡೆದಿದ್ದು ಈಗ ಮತ್ತೊಮ್ಮೆ ಎಲ್ಲರೂ ದುಃಖವನ್ನು ಹೊಂದುವಂಥ ಪರಿಸ್ಥಿತಿ ಎದುರಾಗಿದೆ.

ಹೌದು ಗೆಳೆಯರೇ ಇದೇ ತರಹದ ಘಟನೆಯೊಂದು ಈಗ ಶಿವಮೊಗ್ಗದಲ್ಲಿ ನಡೆದಿದ್ದು ಇಲ್ಲಿ ಕೂಡ ಯುವತಿಗೆ ಬ್ರೈನ್ ಡೆ’ಡ್ ಆಗಿ ಈಗ ಅವಳ ಪೋಷಕರು ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದು ಎಲ್ಲರೂ ಕೂಡ ಕಣ್ಣೀರಿನಿಂದ ಬೇಸರಗೊಂಡಿದ್ದಾರೆ. ಕೃಷ್ಣಮೂರ್ತಿ ಹಾಗೂ ಲೀಲಾವತಿ ದಂಪತಿಗಳ ಮಗಳಾಗಿರುವ ಗಾನವಿ ಗೌಡ ಶಿವಮೊಗ್ಗದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಗಾನವಿ ಗೌಡರ್ ಅವರಿಗೆ ಇನ್ನು ವಯಸ್ಸು ಕೇವಲ 22 ಅಷ್ಟೇ.

ಫೆಬ್ರವರಿ ಎಂಟರ ದಿನದಂದು ಗಾನವಿ ಗೌಡರವರು ತಾವು ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿಯೇ ಮೂರ್ಛೆ ತಪ್ಪಿ ಕುಸಿದು ಬಿದ್ದಿದ್ದಾರೆ. ಮೊದಲಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಗಳನ್ನು ನೀಡಿದ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಹಲವಾರು ಚಿಕಿತ್ಸೆಗಳ ನಂತರ ವೈದ್ಯರು ಬ್ರೈನ್ ಡೆ’ಡ್ ಆಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚೆನ್ನಾಗಿ ಓಡಾಡಿಕೊಂಡು ಮಾತನಾಡಿಕೊಂಡು ಇದ್ದ ಮಗಳಿಗೆ ಅನಿರೀಕ್ಷಿತವಾಗಿ ಹೀಗೆ ಆಗಿರುವುದನ್ನು ನೋಡಿರುವ ಅವಳ ಪೋಷಕರು ಈಗಾಗಲೇ ಕಂಗಾಲಾಗಿದ್ದಾರೆ. ಅದ್ಭುತ ಭವಿಷ್ಯದ ಕನಸು ಕಾಣುತ್ತಿದ್ದ ಮಗಳು ಈಗ ಬಾರದ ಲೋಕಕ್ಕೆ ಹೋಗಿರುವುದು ಹೆತ್ತವರಿಗೆ ನಿಜಕ್ಕೂ ಕೂಡ ಹೇಳಲಾರದ ಸಂಕಟವನ್ನು ತಂದಿದೆ.

ಇದಕ್ಕೂ ಮಿಗಿಲಾಗಿ ಸಂಕಟಪಡುವ ವಿಚಾರ ಇನ್ನೊಂದೇನೆಂದರೆ ಗಾನವಿ ಗೌಡರವರ ಅಕ್ಕನ ಮದುವೆ ಇದೇ ಫೆಬ್ರವರಿ 20ಕ್ಕೆ ನಿಶ್ಚಯವಾಗಿತ್ತು. ಅಕ್ಕನ ಮದುವೆಗೆ ಇನ್ನೇನು ಕೆಲವೇ ದಿನಗಳಲ್ಲಿ ರಜೆ ಹಾಕಿ ಮದುವೆ ಕಾರ್ಯಗಳಲ್ಲಿ ಭಾಗಿಯಾಗುವ ಯೋಜನೆಯನ್ನು ಗಾನವಿ ಗೌಡರವರು ಹಾಕಿಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ವಿಧಿ ಅವರನ್ನು ಇವರೆಲ್ಲರಿಂದ ದೂರ ಮಾಡಿತ್ತು. ಹೌದು ಈಗಾಗಲೇ ಪೋಷಕರು ಮಗಳ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದು ಈಗಾಗಲೇ ಕಣ್ಣು ಕಿಡ್ನಿ ಹೃದಯ ಲಿವರ್ ಇತ್ಯಾದಿಗಳನ್ನು ಬೇಕಾಗಿರುವ ರೋಗಿಗಳಿಗೆ ನೀಡಲಾಗಿದ್ದು ಇದರಿಂದಾಗಿ ಈಗ 7 ಜೀವಗಳ ಬದುಕಿಗೆ ಬೆಳಕು ಬಂದಿದೆ.

ಗಾನವಿ ಗೌಡರವರ ಮನೆಯವರು ಕೂಡ ಅತ್ಯಂತ ಬಡ ಕುಟುಂಬದವರು ಆಗಿದ್ದು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾನವಿ ಗೌಡರವರು ಓದಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಕುಟುಂಬದ ನಿರ್ವಹಣೆಯನ್ನು ಕೂಡ ಮಾಡುತ್ತಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಿಂದಾಗಿ ಸಂಭ್ರಮದಲ್ಲಿ ಇರಬೇಕಾದ ಕುಟುಂಬ ಈಗ ಸೂತಕದ ಛಾಯೆಯಲ್ಲಿ ಅಳುತ್ತಿದೆ. ಈ ತರಹದ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದ್ದು ಇವುಗಳ ಪರಿಹಾರ ಏನೆಂಬುದು ತಿಳಿಯುತ್ತಿಲ್ಲ ಹಾಗೂ ಇಂತಹ ಘಟನೆಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಚಿಕ್ಕವಯಸ್ಸಿನಲ್ಲಿಯೇ ಗಾನವಿ ಗೌಡ ನಮ್ಮನ್ನೆಲ್ಲ ಬಿಟ್ಟು ಅಗಲಿದರು ಕೂಡ ಏಳು ಜೀವಗಳ ಪಾಲಿಗೆ ದೇವತೆಯಾಗಿ ಬಂದಿರುವುದು ನಿಜಕ್ಕೂ ಕೂಡ ಪ್ರಶಂಸಾರ್ಹ. ಆ ದೇವರು ಮಾನವೀಯ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಕೋರೋಣ.