ಪತ್ನಿಗೆ ಅಮೂಲ್ಯ ಪತಿ ಜಗದೀಶ್ ಕೊಟ್ಟ ಅಪರೂಪದ ವಿಶೇಷ ಉಡುಗೊರೆ ಏನು ಗೊತ್ತೇ?? ಇದಪ್ಪ ಪ್ರೀತಿ ಅಂದ್ರೆ, ಬೆಲೆ ಕಟ್ಟಲು ಕೂಡ ಸಾಧ್ಯವಿಲ್ಲ.

154

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲ್ಯದಿಂದಲೂ ಕೂಡ ನಟಿ ಅಮೂಲ್ಯ ರವರು ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತರಾಗಿದ್ದರು. ಇದಾದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕ ನಟಿಯಾಗಿ ಅತಿಕಡಿಮೆ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದವರು. ಒಂದಾದಮೇಲೊಂದರಂತೆ ನಾಯಕಿ ನಟಿಯಾಗಿ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದವರು. ಇನ್ನು ಬಹುತೇಕ ಎಲ್ಲಾ ಕನ್ನಡ ಚಿತ್ರರಂಗದ ಸ್ಟಾರ್ ನಟರೊಂದಿಗೆ ನಾಯಕ ನಟಿಯಾಗಿ ಹಾಗೂ ಬಾಲನಟಿಯಾಗಿ ಕಾಣಿಸಿಕೊಂಡವರು.

2017 ರಲ್ಲಿ ತಮ್ಮ ಕರಿಯರ್ ನ ಉತ್ತುಂಗದಲ್ಲಿದ್ದಾಗಲೇ ರಾಜಕೀಯ ಹಿನ್ನೆಲೆಯುಳ್ಳ ಜಗದೀಶ್ ಅವರನ್ನು ಮದುವೆಯಾಗುತ್ತಾರೆ. ಇವರಿಬ್ಬರು ಸಿನಿಮಾರಂಗದ ಸ್ಟಾರ್ ಜೋಡಿ ಆಗದಿದ್ದರೂ ಕೂಡ ಎಲ್ಲರ ನೆಚ್ಚಿನ ಜೋಡಿ ಆಗಿ ಮದುವೆಯಾದ ದಿನದಿಂದಲೂ ಕೂಡ ಸುದ್ದಿಯಲ್ಲಿದ್ದಾರೆ. ಇನ್ನು ಇತ್ತೀಚಿಗಷ್ಟೇ ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಾಗ ಸಾಕಷ್ಟು ದೊಡ್ಡಮಟ್ಟದಲ್ಲಿ ಟ್ರೋಲ್ ಆಗಿದ್ದು ನಿಮಗೆಲ್ಲ ಗೊತ್ತಿದೆ. ಆದರೆ ಟ್ರೋಲ್ ಆಗಿದ್ದು ಇವರಲ್ಲ ಬದಲಾಗಿ ಒಂದು ಸುದ್ದಿವಾಹಿನಿ. ಅದಕ್ಕೆ ಇಬ್ಬರು ದಂಪತಿಗಳು ಕೂಡ ನಕ್ಕು ಸುಮ್ಮನಾಗಿದ್ದರು. ಇನ್ನು ಇದೇ ಸಂದರ್ಭದಲ್ಲಿ ಅಮೂಲ್ಯ ರವರ ಪತಿಯಾಗಿರುವ ಜಗದೀಶ್ ರವರು ಕೂಡ ತಮ್ಮ ಹೆಂಡತಿಗೆ ಎಂದು ಮರೆಯಲಾಗದಂತಹ ಉಡುಗೊರೆಯೊಂದನ್ನು ನೀಡಿದ್ದಾರೆ.

ಅಮೂಲ್ಯ ರವರಿಗೆ ಕನ್ನಡ ಚಿತ್ರರಂಗದಲ್ಲಿ ಪ್ರತಿಯೊಬ್ಬ ಸ್ಟಾರ್ ನಟರು ಕೂಡ ಚಿಕ್ಕ ವಯಸ್ಸಿನಿಂದಲೂ ಪರಿಚಿತರು. ಇದೇ ಕಾರಣಕ್ಕಾಗಿ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಜಗದೀಶ್ ಅವರು ತಮ್ಮ ಪತ್ನಿಗೆ ಬೇಬಿ ಶೋವರ್ ಅವರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಈ ಕಾರ್ಯಕ್ರಮಕ್ಕೆ ಅಮೂಲ್ಯ ಅವರ ನೆಚ್ಚಿನ ಸಿನಿಮಾ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದು ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕುಟುಂಬ ಉಪೇಂದ್ರ ಕುಟುಂಬ ಪ್ರೇಮ್ ರವರ ಕುಟುಂಬ ಗುರುಕಿರಣ್ ಅವರ ಕುಟುಂಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬ ಹೀಗೆ ಹಲವಾರು ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞಾನದ ಕುಟುಂಬ ಆಗಮಿಸಿದ್ದಾರೆ. ನಟಿ ಅಮೂಲ್ಯ ರವರ ತಮ್ಮ ಗಂಡನ ಅದ್ಭುತ ಉಡುಗೊರೆಯಿಂದಾಗಿ ಖುಷಿಯಾಗಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಇಬ್ಬರು ದಂಪತಿಗಳು ತಮ್ಮ ಮೊದಲನೆ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ.