ಬೆಸ್ಟ್ ಬಿಸಿನೆಸ್ ಐಡಿಯಾ: 8 ನೇ ತರಗತಿ ಓದ್ದಿದ್ದರೇ ಸಾಕು, ಕಡಿಮೆ ಬಂಡವಾಳದಿಂದ ಲಕ್ಷ ಲಕ್ಷ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಇತ್ತೀಚಿಗೆ ಸ್ವಲ್ಪ ಬಳಕೆ ಕಡಿಮೆ ಆಗಿದ್ದರೂ ಭಾರತೀಯ ಅಂಚೆ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಇಂದಿಗೂ ಅಂಚೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳು ಹಲವರ ಉಳಿತಾಯದ ಕನಸನ್ನು ನನಸಾಗಿಸಿದೆ. ಅತ್ಯಂತ ನಂಬಿಕಾರ್ಹ ಎನಿಸಿದೆ ಅಂಚೆ ಕಚೇರಿ. ದೇಶದಲ್ಲಿ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಿವೆ. ಆದರೆ ಇನ್ನೂ ಕೆಲವೆಡೆ ಅಂಚೆ ಕಚೇರಿ ಇಲ್ಲದಿರುವುದು ಜನರಿಗೆ ಸಮಸ್ಯೆಯೂ ಆಗುತ್ತಿದೆ. ಹಾಗಾಗಿ, ಅಂಚೆ ಇಲಾಖೆ ತನ್ನದೇ ಆದ ಫ್ರ್ಯಾಂಚೈಸಿ ತೆರೆಯಲು ಶುರುಮಡಿದೆ. ಕೇವಲ 8ನೇ ತರಗತಿ ಪಾಸ್ ಆಗಿದ್ದರೂ ಸಾಕು ನೀವು ಈ ಫ್ರ್ಯಾಂಚೈಸಿ ತೆಗೆದುಕೊಂಡು ನಿಮ್ಮ ಉದ್ಯೋಗವನ್ನು ಶುರು ಮಾಡಬಹುದು.
ನಿಮಗೆ ಯಾವುದು ಸೂಕ್ತವೋ ಆ ಫ್ರ್ಯಾಂಚೈಸಿಯನ್ನು ನೀವು ತೆಗೆದುಕೊಳ್ಳಬಹುದು. ಅವುಗಳಲ್ಲಿ ಮೊದಲನೆಯದು ಔಟ್ಲೆಟ್ ಫ್ರಾಂಚೈಸಿ. ಅಂಚೆ ಕಚೇರಿಗಳಿಲ್ಲದ ಸ್ಥಳದಲ್ಲಿಯೂ ಜನರಿಗೆ ಅಂಚೆ ಸೌಲಭ್ಯ ಸಿಗುವಂತೆ ಮಾಡಲು ಫ್ರಾಂಚೈಸಿ ಔಟ್ ಲೆಟ್ ತೆರೆಯಬಹುದು. ಇನ್ನು ಎರಡನೆಯದಾಗಿ ಪೋಸ್ಟಲ್ ಏಜೆಂಟ್ ಫ್ರಾಂಚೈಸಿ. ಇದರಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಚೀಟಿಗಳು ಮತ್ತು ಸ್ಟೇಷನರಿಗಳನ್ನು ಮನೆ-ಮನೆಗೆ ತಲುಪಿಸುವ ಏಜೆಂಟ್ ಆಗಿ ಕಾರ್ಯ ನಿರ್ವಹಿಸಬಹುದು.

ಇನ್ನು ಕನಿಷ್ಟ 18 ವರ್ಷ ವಯಸ್ಸು ದಾಟಿದ ಯಾರು ಬೇಕಾದರೂ ಅಂಚೇ ಫ್ರ್ಯಾಂಚೈಸಿಯನ್ನು ತೆರೆಯಬಹುದು. ಮಾನ್ಯತೆ ಪಡೆದ ಶಾಲೆಯಿಂದ ಕನಿಷ್ಠ 8ನೇ ತರಗತಿ ಪಾಸಾದ ವ್ಯಕ್ತಿಯೂ ಫ್ರ್ಯಾಂಚೈಸಿ ತೆಗೆದುಕೊಳ್ಳಬಹುದು. ಅಂಚೆ ಕಚೇರಿಯಿಂದ ಗ್ರಾಹಕರಿಗೆ ಸ್ಟ್ಯಾಂಪ್‌ಗಳು, ಸ್ಟೇಷನರಿಗಳು, ಸ್ಪೀಡ್ ಪೋಸ್ಟ್, ಪತ್ರ, ಮನಿ ಆರ್ಡರ್‌ಗಳ ಬುಕಿಂಗ್ ಸೌಲಭ್ಯವನ್ನು ಫ್ರ್ಯಾಂಚೈಸಿ ಮೂಲಕ ಒದಗಿಸಬೇಕಾಗುತ್ತದೆ. ಈ ಫ್ರಾಂಚೈಸಿಯನ್ನು ತೆಗೆದುಕೊಳ್ಳಲು ನೀವು 5000 ರೂಪಾಯಿ ಭದ್ರತಾ ಠೇವಣಿ ಇಡಬೇಕು. ನಿಮ್ಮ ಕೆಲಸಕ್ಕೆ ಅನುಗುಣವಾಗಿ ನಿಮಗೆ ನಿಗದಿತ ಕಮಿಷನ್ ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ ತೆಗೆದುಕೊಳ್ಳಲು ನೀವು ಮೊದಲು ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರು ಅಂಚೆ ಇಲಾಖೆಯೊಂದಿಗೆ ಎಂಒಯುಗೆ ಸಹಿ ಹಾಕಬೇಕು.
ಇನ್ನು ನೀವು ಪಡೆಯಬಹುದಾದ ಕಮೀಷನ್ ಬಗ್ಗೆ ಹೇಳುವುದಾದರೆ, ನೋಂದಾಯಿತ ಲೇಖನಗಳ ಬುಕಿಂಗ್ ಮೇಲೆ 3 ರೂಪಾಯಿ, ಸ್ಪೀಡ್ ಪೋಸ್ಟ್ ಲೇಖನಗಳ ಬುಕಿಂಗ್ ಮೇಲೆ 5 ರೂಪಾಯಿ ಪಡೆಯಬಹುದು. ಹಾಗೆಯೇ 100 – 200 ರೂಪಾಯಿ ಮನಿ ಆರ್ಡರ್ ಬುಕ್ಕಿಂಗ್ ಮೇಲೆ 3.50 ರೂ., 200 ರೂ.ಗಿಂತ ಹೆಚ್ಚಿನ ಮನಿ ಆರ್ಡರ್‌ಗಳಲ್ಲಿ 5 ರೂ. ಕಮಿಷನ್ ಸಿಗುತ್ತದೆ. ಪ್ರತಿ ತಿಂಗಳು ರಿಜಿಸ್ಟ್ರಿ ಮತ್ತು ಸ್ಪೀಡ್ ಪೋಸ್ಟ್ ನ 1000 ಕ್ಕೂ ಹೆಚ್ಚು ಬುಕಿಂಗ್ ಮಾಡಿಸಿದ್ರೆ ಶೇಕಡಾ 20ರಷ್ಟು ಕಮಿಷನ್, ಅಂಚೆ ಚೀಟಿಗಳು, ಪೋಸ್ಟಲ್ ಸ್ಟೇಷನರಿ ಮತ್ತು ಮನಿ ಆರ್ಡರ್ ಫಾರ್ಮ್‌ಗಳ ಮಾರಾಟದ ಮೇಲೆ ಶೇ. 5ರಷ್ಟು ಕಮಿಷನ್ ಪಡೆಯಬಹುದು. ಫ್ರ್ಯಾಂಚೈಸಿ ಕೊಳ್ಳಲು https://www.indiapost.gov.in/VAS/DOP_PDFFiles/ ಈ ಸೈಟ್ ಗೆ ಭೇಟಿ ನೀಡಿ.