ತಣ್ಣಗಾಗಿದ್ದ ಮೆಜೆಸ್ಟಿಕ್ ವಿಚಾರದಲ್ಲಿ ಮತ್ತೆ ಸುದೀಪ್ ರವರ ಹೇಳಿಕೆಗೆ ಖಡಕ್ ಆಗಿಯೇ ಉತ್ತರ ನೀಡಿದ ದರ್ಶನ್ ಹೇಳಿದ್ದೇನು ಗೊತ್ತೇ??

378

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ರವರನ್ನು ಸ್ನೇಹದ ಪ್ರತೀಕವಾಗಿ ದಿಗ್ಗಜರು ಹಾಗೂ ಕುಚಿಕು ಗಳು ಎಂಬುದಾಗಿ ಕರೆಯಲಾಗುತ್ತದೆ. ಅವರ ನಂತರ ಈಗ ಕನ್ನಡ ಚಿತ್ರರಂಗದಲ್ಲಿ ಯಾರನ್ನು ಕುಚಿಕು ಗಳು ಎಂದು ಕರೆಯುತ್ತಾರೆ ಎಂಬುದು ನಮಗೆಲ್ಲ ಗೊತ್ತಿದೆ. ಹೌದು ನಾವು ಮಾತನಾಡುತ್ತಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕುರಿತಂತೆ. ಇಬ್ಬರು ಕೂಡ ಹಲವಾರು ವರ್ಷಗಳಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸ್ನೇಹವನ್ನು ಬೆಳೆಸಿಕೊಂಡಿದ್ದರು.

ಆದರೆ ಕೆಲವೊಂದು ವಿಚಾರಗಳ ಮಧ್ಯದಲ್ಲಿ ಇವರಿಬ್ಬರ ಸ್ನೇಹ ಹಾಳಾಗಿ ಇವರಿಬ್ಬರು ಬದ್ಧ ವೈರಿಗಳಾಗಿದ್ದರು ಎಂಬುದು ಹೊಸದಾಗಿರುವ ಮಾತಲ್ಲ. ಆದರೆ ಇವರಿಬ್ಬರ ಮುನಿಸಿನ ಕುರಿತಂತೆ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದವು ಅದಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೇ ಖುದ್ದಾಗಿ ಸ್ಪಷ್ಟೀಕರಣ ವನ್ನು ನೀಡಿದ್ದಾರೆ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೇಳಿರುವ ಮಾತಾದರು ಏನೆಂಬುದನ್ನು ತಿಳಿಯೋಣ ಬನ್ನಿ. ನಿಮಗೆಲ್ಲ ಗೊತ್ತಿರೋ ಹಾಗೆ ಕೆಲವಾರು ವರ್ಷಗಳ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮೆಜೆಸ್ಟಿಕ್ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಾನು ಸಜೆಸ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದರು. ಈಗ ಈ ವಿಚಾರದ ಕುರಿತಂತೆ ಸ್ವತಃ ದರ್ಶನ್ ರವರ ಮಾತನಾಡಿದ್ದಾರೆ. ವಿಡಿಯೋ ಕೂಡ ಕೊನೆಯಲ್ಲಿ ಇದೆ.

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಈ ಕುರಿತಂತೆ ಮಾತನಾಡುತ್ತಾ ಪರೋಕ್ಷವಾಗಿ ಈ ಚಿತ್ರಕ್ಕೆ ಕಿಚ್ಚ ಸುದೀಪ್ ರವರ ಸಜೆಶನ್ ಮೇರೆಗೆ ನಾನು ಆಯ್ಕೆಯಾಗಿಲ್ಲ. ಬದಲಾಗಿ ಅಣಜಿ ನಾಗರಾಜ್ ರವರ ಕರೆಯ ಮೇರೆಗೆ ನಾನು ನಿರ್ಮಾಪಕರು ಹಾಗೂ ನಿರ್ದೇಶಕರ ಸತ್ಯ ಇರುವಂತಹ ಹೋಟೆಲ್ ರೂಮ್ ಕೊಠಡಿಗೆ ಹೋಗಿದ್ದೆ, ಅಲ್ಲಿ ನನ್ನನ್ನು ನೋಡಿದಂತಹ ನಿರ್ಮಾಪಕರು ನೀನೆ ನನ್ನ ಚಿತ್ರಕ್ಕೆ ಹೀರೋ ಎಂಬುದಾಗಿ ಹೇಳಿ ಅಲ್ಲಿ ನನ್ನನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ತನ್ನ ಸ್ವಂತ ಪರಿಶ್ರಮದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಹಂತಕ್ಕೆ ಬರಲು ಸಾಧ್ಯವಾಯಿತು ಎಂಬುದು ಈ ಹೇಳಿಕೆಯ ತಾತ್ಪರ್ಯವಾಗಿದೆ. ಈ ಮಾತು ಪ್ರತಿಮಾತುಗಳು ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.