ಮೆದುಳು ನಿಷ್ಕ್ರಿಯಗೊಂಡು ಇಹಲೋಕ ತ್ಯಜಿಸಿದ ಚೈತ್ರ ನಿಜಕ್ಕೂ ಯಾರು ಗೊತ್ತೇ?? ಅಪ್ಪ ಅಮ್ಮ ಕಷ್ಟ ಪಡುತ್ತಿದ್ದಾರೆ ಎಂದು ಚೈತ್ರ ಅಂದು ಏನು ಮಾಡಿದ್ದರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೇಳಿ ಬರುವಂತಹ ಕೆಲವು ಸುದ್ದಿಗಳು ನಿಜಕ್ಕೂ ಕೂಡ ಮನವನ್ನು ಕಲಕಿಸುತ್ತವೆ. ಇನ್ನು ಇಂದು ನಾವು ಹೇಳಲು ಹೊರಟಿರುವ ವಿಚಾರವೂ ಕೂಡ ಇದೇ ರೀತಿಯ ಅನುಭವವನ್ನು ನೀಡುವಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಇದು ನಡೆದಿರುವುದು ಕೋಲಾರದ ಶ್ರೀನಿವಾಸಪುರದಲ್ಲಿ. ಹಸೆಮಣೆಗೆ ಏರಬೇಕಿದ್ದ ಚೈತ್ರ ಮಸಣಕ್ಕೆ ಹೋಗುವಂತಾಗಿದೆ. ಆದರೂ ಕೂಡ ಮರಣದಲ್ಲಿ ಆಕೆಯಿಂದ ನಡೆದಂತಹ ಕಾರ್ಯ ನಿಜಕ್ಕೂ ಕೂಡ ಒಂದು ಸಾರ್ಥಕ ಜೀವನದ ಉದಾಹರಣೆಯಾಗಿದೆ. ಹಾಗಿದ್ದರೆ ನಿನ್ನೆ ನಿಜಕ್ಕೂ ನಡೆದಿದ್ದೇನು ಎಂಬುದನ್ನು ತಿಳಿಯೋಣ ಬನ್ನಿ.

ಈಕೆಯ ತಂದೆ ರಾಮಪ್ಪ ಹಾಗೂ ತಾಯಿ ಅಕ್ಕೆಮ್ಮ. ಇಬ್ಬರು ಕೂಡ ಬಡ ಕೃಷಿಕ ವರ್ಗದ ಕುಟುಂಬಸ್ಥರು. 25 ವರ್ಷಗಳ ಹಿಂದೆ ಚೈತ್ರ ಒಬ್ಬಳೇ ಹೆಣ್ಣು ಮಗಳಾಗಿ ಜನಿಸಿದಳು. ಚೈತ್ರ ಜನಿಸಿದ ಮೇಲೆ ಇಬ್ಬರು ದಂಪತಿಗಳು ಕೂಡ ಬೇರೆಯಾವ ಮಕ್ಕಳು ಬೇಡ ಎಲ್ಲವೂ ಅವಳೇ ಎಂಬುದಾಗಿ ಪ್ರೀತಿಯಿಂದ ಮುದ್ದಾಗಿ ಸಾಕಿದ್ದರು. ಚೈತ್ರ ಬೆಳೆದು ನಿಂತ ಮೇಲೆ ಹೊಸಕೋಟೆಯ ಹುಡುಗನೊಬ್ಬನ ಜೊತೆ ಮದುವೆಯನ್ನು ಕೂಡ ನಿಶ್ಚಯಿಸಲಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿ 6 ಹಾಗೂ 7ರಂದು ಚೈತ್ರಾಳ ಮದುವೆ ನೆರವೇರಬೇಕಾಗಿತ್ತು. ಆದರೆ ವಿಧಿಯಾಟ ನಡೆದಿದ್ದೇ ಬೇರೆ.
ಫೆಬ್ರವರಿ 6 ರಂದು ಚೈತ್ರ ಆರತಕ್ಷತೆ ಕಾರ್ಯಕ್ರಮಕ್ಕೆ ಸಿದ್ದರಾಗಿ ಮದುವೆಯಾಗುವ ಹುಡುಗನ ಪಕ್ಕಕ್ಕೆ ಬಂದು ನಿಂತರು. ರಾತ್ರಿ 9 ರ ತನಕ ನಗುನಗುತ್ತಲೇ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಒಮ್ಮೆಲೆ ತಲೆ ತಿರುಗಿ ಸುತ್ತಿ ಬಂದು ಬಿದ್ದು ಬಿಡುತ್ತಾರೆ. ಆ ಕಾರ್ಯಕ್ರಮಕ್ಕೆ ಬಂದಿದ್ದ ವೈದ್ಯರೊಬ್ಬರು ಚೈತ್ರ ರವರನ್ನು ಪರೀಕ್ಷಿಸುತ್ತಾರೆ. ಆದ ಸ್ಟ್ರೋಕ್ ಆಗಿರುವುದು ತಿಳಿದುಬರುತ್ತದೆ. ನಂತರ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಚೈತ್ರಾ ರವರನ್ನು ಸೇರಿಸಲಾಗುತ್ತದೆ. ಆಗ ಚೈತ್ರ ರವರಿಗೆ ಸತತ 5 ದಿನಗಳ ಕಾಲ ಚಿಕಿತ್ಸೆ ನಡೆಸಲಾಗುತ್ತದೆ. ನಂತರ ಫೆಬ್ರವರಿ 12ರಂದು ಚೈತ್ರ ರವರಿಗೆ ಬ್ರೈನ್ ಡೆಡ್ ಆಗಿರುವುದು ತಿಳಿದುಬರುತ್ತದೆ.
ಕೊನೆಗೂ ಕೂಡ ಚೈತ್ರ ಉಳಿಯುವುದಿಲ್ಲ ಎಂಬುದು ಖಚಿತವಾಗಿತ್ತು. ಬಹುತೇಕ 70% ದಷ್ಟು ಚೈತ್ರ ರವರ ಜೀವ ಹೋಗಿತ್ತು. ಹೀಗಾಗಿ ಮರಣದಲ್ಲೂ ಕೂಡ ಚೈತ್ರ ರವರ ಜೀವನವನ್ನು ಸಾರ್ಥಕತೆಯಿಂದ ತುಂಬಿಸಬೇಕು ಎಂಬುದಾಗಿ ಅವರ ತಂದೆ-ತಾಯಿ ನಿರ್ಧರಿಸುತ್ತಾರೆ. ಇದಕ್ಕಾಗಿ ತಮ್ಮ ಪ್ರೀತಿಪಾತ್ರ ಮಗಳ ದೇಹದ ಅಂಗಾಂಗವನ್ನು ದಾನಮಾಡಲು ನಿರ್ಧರಿಸುತ್ತಾರೆ. ಚೈತ್ರಾ ರವರ ಕಣ್ಣು ಹೃದಯ ಕಿಡ್ನಿ ಹಾಗೂ ಲಿವರ್ ಗಳನ್ನು ಈಗಾಗಲೇ ದಾನ ಮಾಡಲಾಗಿದ್ದರೂ ಜೋಡಣೆ ಕೂಡ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.
ಚೈತ್ರ ತಮ್ಮ ತಂದೆ ತಾಯಿಗೆ ಒಬ್ಬಳೇ ಮಗಳಾಗಿ ಹುಟ್ಟಿದ್ದಳು. ಚೈತ್ರ ಹುಟ್ಟಿದಮೇಲೆ ಅವರ ತಂದೆ-ತಾಯಿ ಇನ್ನೊಬ್ಬ ಮಗು ಬೇಕು ಎಂದು ಅಂದುಕೊಂಡಿರಲಿಲ್ಲ. ಹೀಗಾಗಿ ತಮ್ಮ ಮಗಳನ್ನೇ ತಮ್ಮ ದೇವತೆಯಂತೆ ಬೆಳೆಸಿದ್ದರು. ಮಗಳಾದ ಚೈತ್ರ ಕೂಡ ತಮ್ಮ ತಂದೆ ರೈತನಾಗಿ ಪಟ್ಟಂತಹ ಕಷ್ಟವನ್ನು ಕೂಡ ನೋಡಿಕೊಂಡು ಬೆಳೆದಿದ್ದಳು. ಹೀಗಾಗಿ ತನ್ನ ತಂದೆ ಹಾಗೂ ತಾಯಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುವ ಕನಸನ್ನು ಕಂಡಿದ್ದಳು. ಹೀಗಾಗಿ ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿಯನ್ನು ಕೂಡ ಪಡೆದುಕೊಂಡಿದ್ದಳು. ಹತ್ತಿರದಲ್ಲೇ ಇರುವ ಬೈರವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೂಡ ಕಾರ್ಯವನ್ನು ನಿರ್ವಹಿಸಲು ಆರಂಭಿಸಿದಳು.

ತಮ್ಮ ಮಗಳು ಉಪನ್ಯಾಸಕಿಯಾದಳು ಎಂಬ ಖುಷಿಯಿಂದ ತಂದೆ-ತಾಯಿಯರು ತಮ್ಮ ಮಗಳ ಬಗ್ಗೆ ಎಲ್ಲರ ಬಳಿ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಿದ್ದರು. ಇದೇ ರೀತಿ ತಮ್ಮ ಮಗಳ ಮದುವೆಯನ್ನು ಮುಗಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬುದಾಗಿ ಅಂದುಕೊಂಡಿದ್ದರು ಹೀಗಾಗಿ ಮಗಳ ಮದುವೆಯನ್ನು ಮಾಡಲು ಕಾತರರಾಗಿದ್ದರು. ಆದರೆ ಮಗಳ ಮದುವೆಯನ್ನು ನೋಡುವ ಮೊದಲು ಮರಣವನ್ನು ನೋಡುವ ದೌರ್ಭಾಗ್ಯ ಒದಗಿಬರುತ್ತದೆ ಎಂಬುದಾಗಿ ಅವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ತಂದೆ ತಾಯಿ ಕೂಡ ತಮ್ಮ ಮಕ್ಕಳ ಮರಣವನ್ನು ನೋಡುವ ಸನ್ನಿವೇಶ ಬಾರದೇ ಇರಲಿ ಎಂಬುದಾಗಿ ಎಂದುಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಇಳಿ ವಯಸ್ಸಿನ ಕಾಲದಲ್ಲಿ ತಮ್ಮ ಮಗಳನ್ನು ಕಳೆದುಕೊಳ್ಳುತ್ತೇವೆ ಎಂಬುದನ್ನು ಕನಸಿನಲ್ಲಿ ಕೂಡ ಅಂದುಕೊಂಡಿರುವ ಸಾಧ್ಯವಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.