ಸಮಯ ಬದಲಾವಣೆ ಬೆನ್ನಲ್ಲೇ ಪ್ರೇಕ್ಷಕರಿಗೆ ಮತ್ತೊಂದು ಷಾಕಿಂಗ್ ಸುದ್ದಿ ನೀಡಿದ ಕನ್ಯಾಕುಮಾರಿ ಧಾರವಾಹಿ. ಏನು ಗೊತ್ತೇ??

15,690

ನಮಸ್ಕಾರ ಸ್ನೇಹಿತರೇ ಈಗಾಗಲೇ ಕನ್ನಡ ಕಿರುತೆರೆಯ ಧಾರವಾಹಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆ ಧಾರವಾಹಿಗಳನ್ನು ನೋಡಲು ಕನ್ನಡ ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ದೈನಂದಿನ ಮನರಂಜನೆ ಹಾಗೂ ಬೇಸರಗಳನ್ನು ದೂರ ಮಾಡುವಂತಹ ಕಂಟೆಂಟ್ ಗಳನ್ನು ಧಾರವಾಹಿ ಪ್ರೇಕ್ಷಕರಿಗೆ ನೀಡುತ್ತಿದ್ದು ಇದಕ್ಕಾಗಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಹೊಸ ಹೊಸ ಧಾರವಾಹಿಗಳು ದೊಡ್ಡ ಮಟ್ಟದಲ್ಲಿ ಹಾಗೂ ಅತಿಶೀಘ್ರದಲ್ಲೇ ಪ್ರಾರಂಭದಲ್ಲಿ ಅಭಿಮಾನಿಗಳನ್ನು ಹೊಂದಲು ಆರಂಭಿಸುತ್ತವೆ. ಇದಕ್ಕೆ ಕಾರಣವಾಗಿರುವುದು ಅವುಗಳ ಅತ್ಯುತ್ತಮ ಕಥಾಹಂದರ ಹಾಗೂ ಮೇಕಿಂಗ್ ಶೈಲಿಯೆಂದರೆ ಖಂಡಿತವಾಗಿ ತಪ್ಪಾಗಲಾರದು. ಸಿನಿಮಾಗಳಿಗೆ ಸಮನಾಗಿ ಮೇಕಿಂಗ್ ನಡೆಯುತ್ತಿರುವುದು ಧಾರವಾಹಿಗಳ ಅಭಿವೃದ್ಧಿಗೆ ಕಾರಣವಾಗಿದೆ. ಇಂದು ನಾವು ಮಾತನಾಡಲು ಹೊರಟಿರುವುದು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಗೆ ಬರುತ್ತಿರುವ ಕನ್ಯಾಕುಮಾರಿ ದಾರವಾಹಿ ಕುರಿತಂತೆ. ಕನ್ಯಾಕುಮಾರಿ ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಕಿರುತೆರೆ ಪ್ರೇಕ್ಷಕರು ಅತ್ಯಂತ ಹೆಚ್ಚು ಇಷ್ಟಪಡುವಂತಹ ಧಾರವಾಹಿಗಳ ಲಿಸ್ಟಿನಲ್ಲಿ ಕನ್ಯಾಕುಮಾರಿ ಕೂಡ ಕಾಣಿಸಿಕೊಂಡಿದೆ.

ದುಷ್ಟಶಕ್ತಿ ಹಾಗೂ ದೈವಶಕ್ತಿಯ ನಡುವಿನ ಕದನ ಪಕ್ಕದಲ್ಲೇ ನಡೆಯುವ ಒಂದು ನವಿರಾದ ಪ್ರೇಮ ಕಥೆಯ ಸಾರವನ್ನು ಹೊಂದಿರುವ ಧಾರವಾಹಿ ಆಗಿದೆ ಕನ್ಯಾಕುಮಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ಧಾರವಾಹಿಯಿಂದ ಪ್ರೇಕ್ಷಕರಿಗೆ ಆಶ್ಚರ್ಯಕರ ವಿಚಾರಗಳು ಹೊರಬರುತ್ತಿವೆ. ಹಾಗಿದ್ದರೆ ಅವುಗಳು ಏನೆಂಬುದನ್ನು ತಿಳಿಯೋಣ ಬನ್ನಿ. ಅದೇನೆಂದರೆ ಈ ಧಾರವಾಹಿಗೆ ಕಿಶೋರ್ ಎನ್ನುವ ಹೊಸ ಪಾತ್ರವೊಂದು ಸೃಷ್ಟಿಯಾಗಿದ್ದು ಈ ಪಾತ್ರವನ್ನು ಶಾಂತಂಪಾಪಂ ಸರಣಿಗಳಲ್ಲಿ ನಟಿಸಿರುವ ನಟ ಹರ್ಷ ರವರು ನಿರ್ವಹಿಸುತ್ತಿದ್ದಾರೆ. ಮತ್ತೊಂದು ಆಶ್ಚರ್ಯಕರ ಸುದ್ದಿ ಏನೆಂದರೆ ಸೈಕಿಯಾಟ್ರಿಸ್ಟ್ ಸುನಿತಾ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ವಿನಯ ಪ್ರಸಾದ್ ರವರ ಮಗಳಾಗಿರುವ ಪ್ರಥಮ ಪ್ರಸಾದ್ ರವರು ಧಾರವಾಹಿಯಿಂದ ಹೊರಬಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.