ಹಲವಾರು ವರ್ಷಗಳ ಮೇಲೆ ಮಹತವಾದ ನಿರ್ಧಾರ ತೆಗೆದುಕೊಂಡ ನಟಿ ಶ್ರುತಿ, ದೊಡ್ಡ ಸಂಚಲನ ಸೃಷ್ಟಿಸಿದ ಶ್ರುತಿ ನಿರ್ಧಾರ, ಅಭಿಮಾನಿಗಳಂತೂ ಫುಲ್ ಕುಶ್. ಏನು ಗೊತ್ತೇ?

71,314

ನಮಸ್ಕಾರ ಸ್ನೇಹಿತರೇ ತೊಂಬತ್ತರ ದಶಕದಲ್ಲಿ ನಟಿಸಿರುವಂತಹ ಹಲವಾರು ನಟಿಯರು ಇಂದಿಗೂ ಕೂಡ ನಮ್ಮ ಕನ್ನಡ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ನಟಿಯ ರಾಗಿದ್ದಾರೆ. ಆದರೆ ನಟಿಯರ ವೈಯಕ್ತಿಕ ಜೀವನದಲ್ಲಿ ಮಾತ್ರ ಹಲವಾರು ಏಳುಬೀಳುಗಳನ್ನು ಕೂಡ ಕಂಡಿದ್ದಾರೆ. ಅವುಗಳಲ್ಲಿ ನಾವು ಹೇಳುವುದಾದರೆ ಶ್ರುತಿ ಸುಧಾರಾಣಿ ಪ್ರೇಮಾರವರ ಅಂತ ಹಲವಾರು ನಟಿಯರು ದಾಂಪತ್ಯ ಜೀವನದಿಂದ ಹೊರಬಂದು ಬೇರೆ ಬದುಕನ್ನು ಕೂಡ ಕಂಡಿದ್ದಾರೆ. ಇನ್ನು ಇವರಲ್ಲಿ ನಾವು ನಟಿ ಶ್ರುತಿ ಅವರ ಬಗ್ಗೆ ಹೇಳುವುದಾದರೆ, ಇವರು ನಿರ್ದೇಶಕ ಎಸ್ ಮಹೇಂದರ್ ಅವರನ್ನು ಮದುವೆಯಾಗಿದ್ದರು. ಇವರಿಗೆ ಗೌರಿಯನ್ನು ಪುಟ್ಟ ಹೆಣ್ಣು ಮಗಳು ಕೂಡ ಇದ್ದಳು.

ಇಷ್ಟೊಂದು ಪ್ರೀತಿ ಮಾಡಿ ಮದುವೆಯಾಗಿದ್ದ ದಂಪತಿಗಳು ಕೆಲವು ವರ್ಷಗಳ ಹಿಂದೆ ವಿವಾಹ ವಿಚ್ಛೇದನವನ್ನು ಪಡೆದು ದಾಂಪತ್ಯ ಜೀವನದಿಂದ ಹೊರಬಂದಿದ್ದನ್ನು ಕೂಡ ನಾವು ನೋಡಿದ್ದೇವೆ. ಕೆಲವು ವರ್ಷಗಳ ನಂತರ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಕೂಡ ಬಂದಾಗಲೂ ಅವರು ನಾನು ಬದುಕಿರುವುದು ನನ್ನ ಮಗಳಿಗಾಗಿ ನಾನು ಏನೇ ಮಾಡಿದರೂ ನನ್ನ ಮಗಳಿಗಾಗಿಯೇ ಎನ್ನುವುದಾಗಿ ಹೇಳಿದ್ದರು. ಇನ್ನು ಅದೇ ಸೀಸನ್ನಲ್ಲಿ ಶೃತಿಯವರು ಬಿಗ್ ಬಾಸ್ ಅನ್ನು ಕೂಡ ಗೆಲ್ಲುತ್ತಾರೆ.

ಇನ್ನು ಅಂದಿನ ಕಾಲದಲ್ಲಿ ಹಿಂದಿನ ನಟಿಯರಿಗೆ ನೀಡುವ ಹಾಗೆ ಲಕ್ಷಲಕ್ಷ ಸಂಭಾವನೆಯನ್ನು ನಿರ್ಮಾಪಕರು ನೀಡುತ್ತಿರಲಿಲ್ಲ. ಇದಕ್ಕಾಗಿ ನೀವು ಹಲವಾರು ಹಿರಿಯ ನಟ-ನಟಿಯರು ಇಂದಿಗೂ ಕೂಡ ತಮ್ಮ ಬದುಕನ್ನು ಸಾಗಿಸಲು ಕಷ್ಟ ಪಡುತ್ತಿರುವುದನ್ನು ನೋಡಬಹುದು ಹಾಗೂ ಕೇಳಬಹುದು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಕಲಾವಿದರು ನಿಜಕ್ಕೂ ಅಂದಿನ ಕಾಲದ ಕಲಾವಿದರಿಗೆ ಹೋಲಿಸಿದರೆ ಅದೃಷ್ಟವಂತರು ಎಂದು ಹೇಳಬಹುದಾಗಿದೆ. ಅಂದಿನ ಕಾಲದ ನಟರು ಇಂದು ನಟನೆ ಮಾಡುವುದರ ಜೊತೆಗೆ ಬೇರೆ ಕೆಲಸಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವುದನ್ನು ನೋಡಿರಬಹುದು.

ಇನ್ನು ಈ ಕಡೆ ನಟಿ ಶ್ರುತಿ ಅವರ ವಿಚಾರವನ್ನು ಹೇಳುವುದಾದರೆ ಅವರು ಮಹೇಂದರ್ ಅವರನ್ನು ವಿವಾಹ ವಿಚ್ಛೇದನದ ಮೂಲಕ ದೂರ ಮಾಡಿದ ನಂತರ ಸಿಂಗಲ್ ಪೇರೆಂಟ್ ಆಗಿದ್ದರು. ಹೀಗಾಗಿ ಅವರು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ರವರನ್ನು ಎರಡನೇ ವಿವಾಹ ಆಗುತ್ತಾರೆ. ಆದರೆ ಅವರನ್ನು ಮದುವೆಯಾದ ನಂತರ ಶ್ರುತಿ ರವರಿಗೆ ಹಲವಾರು ಭಿನ್ನಾಭಿಪ್ರಾಯಗಳು ಮತ್ತು ಸಮಸ್ಯೆಗಳು ತಲೆದೋರಿದ ಕಾರಣ ಅವರಿಗೂ ಕೂಡ ವಿವಾಹ ವಿಚ್ಛೇದನವನ್ನು ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ರಾಜಕೀಯಕ್ಕೂ ಕೂಡ ಕಾಲಿಟ್ಟು ಅಲ್ಲಿ ಕೂಡ ಸಕ್ರಿಯರಾಗುತ್ತಾರೆ. ಇತ್ತೀಚಿಗಷ್ಟೇ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಭಜರಂಗಿ-2 ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇವೆಲ್ಲದರ ನಂತರ ಈಗ ಹೊಸ ನಿರ್ಧಾರ ಒಂದಕ್ಕೆ ಶೃತಿಯವರು ಬದ್ಧರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಆ ನಿರ್ಧಾರ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ನಟಿಸುತ್ತಿರುವ ರು ವೃತ್ತಿಜೀವನದ ಕುರಿತಂತೆ ಹೊಸ ನಿರ್ಧಾರವೊಂದನ್ನು ಕೈಗೊಳ್ಳಲಿದ್ದಾರೆ. ಅದೇನೆಂದರೆ ಅವರು ಕಿರುತೆರೆಯಲ್ಲಿ ಪ್ರಸಾರವಾಗುವ ಅಂತಹ ಧಾರವಾಹಿಗಳಲ್ಲಿ ನಟಿಸುವ ನಿರ್ಧಾರವನ್ನು ಮಾಡಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ಕನ್ನಡ ಚಿತ್ರರಂಗದಿಂದ ಹಲವಾರು ನಟ ಹಾಗೂ ನಟಿಯರು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವಂತಹ ಧಾರಾವಾಹಿಗಳಲ್ಲಿ ನಟಿಸಿ ತಮ್ಮ ವೃತ್ತಿಜೀವನದ ಉತ್ತುಂಗಕ್ಕೆ ತಲುಪಿದ್ದಾರೆ. ಅವುಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುವ ಅನಿರುದ್ಧ್ ಹಾಗೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವ ಉಮಾಶ್ರೀ ಕೂಡ ಪ್ರಮುಖರು ಎಂದು ಹೇಳಬಹುದಾಗಿದೆ. ಇವರ ಸಾಲಿಗೆ ನಟಿಸುತ್ತಿದ್ದರು ಕೂಡ ಧಾರವಾಹಿಯಲ್ಲಿ ನಟಿಸುವ ಮೂಲಕ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ನಟಿ ಶ್ರುತಿ ಹಾಗೂ ರಾಮ್ ಕುಮಾರ್ ರವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಂತಹ ರಿಮೇಕ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. 20 ವರ್ಷಗಳ ನಂತರ ಈ ಸೂಪರ್ ಹಿಟ್ ಜೋಡಿ ಮತ್ತೊಮ್ಮೆ ಧಾರವಾಹಿ ಮೂಲಕ ಒಂದಾಗುತ್ತಿರುವುದು ನಿರೀಕ್ಷೆಯ ದ್ವಿಗುಣಕ್ಕೆ ಕಾರಣವಾಗಿದೆ. ಸಂಭಾವನೆ ಕೂಡ ಬೇರೆಯಲ್ಲಾ ಕಲಾವಿದರಿಗೆ ಹೋಲಿಸಿದರೆ ಹೆಚ್ಚು ಎಂದು ಹೇಳಲಾಗುತ್ತಿದೆ. ಧಾರವಾಹಿ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಹಂಚಿಕೊಳ್ಳಿ.