ಶುರುವಾಯಿತು ದ್ರಾವಿಡ್ ಹವಾ, ಶ್ರೀಲಂಕಾ ಸರಣಿಗೆ ಮೇಜರ್ ಸರ್ಜರಿಗೆ ಪ್ಲಾನ್ ಫಿಕ್ಸ್, ಹಿರಿಯ ಆಟಗಾರರಿಗೂ ಕ್ಯಾರೇ ಎನ್ನದೆ ಮಾಡುತ್ತಿರುವುದಾದರೂ ಏನು ಗೊತ್ತೇ??

6,010

ನಮಸ್ಕಾರ ಸ್ನೇಹಿತರೇ ಭಾರತ ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಸರಣಿ ಜಯಿಸಿದ ಬೆನ್ನಲ್ಲೇ, ಈಗ ಫೆಬ್ರವರಿ 25 ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಎದುರು ನೋಡುತ್ತಿದೆ. ಅದಕ್ಕೂ ಮುನ್ನ ಫೆಬ್ರವರಿ 16 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಮೂರು ಟಿ 20 ಪಂದ್ಯಗಳ ಸರಣಿಯನ್ನು ಆಡಲಿದೆ. ಇದಾದ ನಂತರ ಪ್ರವಾಸಿ ಶ್ರೀಲಂಕಾ ವಿರುದ್ದ ಎರಡು ಟೆಸ್ಟ್ ಪಂದ್ಯ ಆಡಲಿದೆ. ಅದರಲ್ಲಿ ಒಂದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ 100 ನೇ ಟೆಸ್ಟ್ ಪಂದ್ಯವಾಗಲಿದೆ.

ಈ ನಡುವೆ ಶ್ರೀಲಂಕಾ ವಿರುದ್ದ ನಡೆಯಲಿರುವ ಸರಣಿಗೆ ಭಾರತ ತಂಡದ ಆಯ್ಕೆಯ ಸಂದರ್ಭದಲ್ಲಿ ಕೆಲವು ಆಟಗಾರರಿಗೆ ಕೋಕ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ. ಈಗಾಗಲೇ 37ರ ಹರೆಯದ ವಿಕೇಟ್ ಕೀಪರ್ ವೃದ್ದಿಮಾನ್ ಸಹ ಬದಲು, ಯುವ ವಿಕೇಟ್ ಕೀಪರ್ ಕೆ.ಎಸ್.ಭರತ್ ರಿಗೆ ಅವಕಾಶ ನೀಡಲು ಚಿಂತಿಸಿದ ಕಾರಣ, ವೃದ್ಧಿಮಾನ್ ಸಹಾ ನಿವೃತ್ತಿ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನು ಸೌತ್ ಆಫ್ರಿಕಾ ಪ್ರವಾಸದಲ್ಲಿ ತಂಡದಲ್ಲಿದ್ದರೂ, ಆಡಲು ಅವಕಾಶ ಪಡೆಯದ ವೇಗಿ ಇಶಾಂತ್ ಶರ್ಮಾಗೂ ಸಹ ಸ್ಥಾನ ಸಿಗುವುದು ಅನುಮಾನ.

ಪದೇ ಪದೇ ಫಿಟ್ನೆಸ್ ಸಮಸ್ಯೆ ಎದುರುಸುತ್ತಿರುವ ಕಾರಣ ಅವರಿಗೆ ಇನ್ನು ಅವಕಾಶಗಳು ಸಿಗುವ ಸಾಧ್ಯತೆ ಕಡಿಮೆ.ಇದರ ಜೊತೆ ಹಲವಾರು ಟೆಸ್ಟ್ ಗಳಿಂದ ಕಳಪೆ ಫಾರ್ಮ್ ನಲ್ಲಿರುವ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆಗೆ ಕೋಕ್ ನೀಡಿ ಅವರ ಬದಲು ಬೇರೆ ಆಟಗಾರರಿಗೆ ಅವಕಾಶ ನೀಡುಧ ಪ್ರಯೋಗಕ್ಕೆ ತಂಡ ಮುಂದಾಗಲಿದೆ ಎಂಬ ಮಾಹಿತಿ. ಸರಣಿ ತವರಿನಲ್ಲಿ ನಡೆಯುವ ಕಾರಣ, ಇಂತಹ ಪ್ರಯೋಗಕ್ಕೆ ಧೈರ್ಯವಾಗಿ ಕೈ ಹಾಕಲು ಮುಂದಾಗಿದೆ. ಒಟ್ಟಿನಲ್ಲಿ ವೃದ್ಧಿಮಾನ್ ಸಾಹಾ, ಇಶಾಂತ್ ಶರ್ಮಾ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ಟೆಸ್ಟ್ ತಂಡದಿಂದ ಹೊರಬೀಳುವುದು ಖಚಿತವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.