ಜೀವ ವಿಮಾ ನಿಗಮದ ದೊಡ್ಡ ಉಳಿತಾಯ ಯೋಜನೆ, ಕೇವಲ ದಿನಕ್ಕೆ 8 ರೂಪಾಯಿ ಕಟ್ಟಿ 17 ಲಕ್ಷ ಪಡೆಯುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ದೇಶದ ಅತಿದೊಡ್ಡ ವಿಮಾ ಸಂಸ್ಥೆ, ಎಲ್ ಐ ಸಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ನಿಮ್ಮಲ್ಲೂ ಈಗಾಗಲೇ ಹಲವಾರು ಜನ ಇಲ್ಲಿ ಬೇರೆ ಬೇರೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿರಬಹುದು. ಆದರೆ ನೀವಿನ್ನೂ ಮಾಡದೇ ಇದ್ದಲ್ಲಿ ಅತೀ ಕಡಿಮೆ ಹೂಡಿಕೆಯಿಂದ ಆರಂಭಮಾಡಿ ಹೆಚ್ಚು ಹಣವನ್ನು ಹಿಂತಿರುಗಿ ಪಡೆಯಬಹುದಾದ ಒಂದು ಸ್ಕೀಮ್ ಬಗ್ಗೆ ಹೇಳ್ತೇವೆ. ಅದುವೇ ಜೀವನ್ ಲಾಭ್ ಪ್ಲ್ಯಾನ್!
ಜೀವನ್ ಲಾಭ್ ಯೋಜನೆಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಸಿಗುವುದಲ್ಲದೇ ಒಳ್ಳೆಯ ರಿಟರ್ನ್ ಕೂಡ ಸಿಗುತ್ತದೆ. ವಿಮೆ ಪಾಲಿಸಿಗಳನ್ನು ಮಾಡಿಸುವುದರ ಅತಿ ದೊಡ್ಡ ಪ್ರಯೋಜನ ಎಂದರೆ ಅವು ಷೇರು ಅಥವಾ ಮ್ಯುಚುವಲ್ ಫಂಡ್ ರೀತಿ ಮಾರುಕಟ್ಟೆಗೆ ತಕ್ಕಂತೆ ಅವುಗಳ ರಿಟರ್ನ್ ಬರುವಿಕೆ ಬದಲಾಗುವುದಿಲ್ಲ. ಮೊದಲೇ ನಿಶ್ಚಿತವಾದ ರೀತಿಯಲ್ಲೇ ಹೂಡಿಕೆಗೆ ತಕ್ಕ ಹಣ ವಾಪಾಸ್ ಸಿಗುತ್ತದೆ. ಹಾಗಾಗಿ, ಎಲ್ಐಸಿ ಮಾಡುವ ಹೂಡಿಕೆ ಎಲ್ಲರಿಗೂ ಬಹಳ ಸುರಕ್ಷಿತ ಎನ್ನಿಸುತ್ತೆ. ಜೀವನ್ ಲಾಭ್ ಯೋಜನೆಯ ಅಡಿಯಲ್ಲಿ ನೀವು ಸಾಲವನ್ನೂ ಕೂಡ ಅಗತ್ಯಬಿದ್ದರೆ ತೆಗೆದುಕೊಳ್ಳಬಹುದು.
ನೀವು ಮಾಸಿಕ 233 ರೂ ನಂತೆ ಯೋಜನೆ ಮುಗಿಯುವವರೆಗೆ ಹಣ ಕಟ್ಟಿದರೆ 17 ಲಕ್ಷ ರೂ ವರೆಗೆ ರಿಟರ್ನ್ ದೊರೆಯುತ್ತದೆ. ಅಂದರೆ ದಿನಕ್ಕೆ ಕೇವಲ 8 ರೂ. ಮಾತ್ರ ಪಾವತಿಸಬೇಕು. ಇನ್ನು ಪ್ರೀಮಿಯಂ ನ್ನು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹೆಚ್ಚಿಸಬಹುದು. ಆಗ ಹೆಚ್ಚಿನ ಮೊತ್ತವೂ ಸಿಗುತ್ತದೆ. ಇ ಸ್ಕೀಮ್ ನಲ್ಲಿ ಕನಿಷ್ಠ ರಿಟರ್ನ್ ಎಂದರೆ 2 ಲಕ್ಷ ರೂಪಾಯಿಗಳು! ಇನ್ನುಈ ಯೋಜನೆ ಇರುವುದು 60 ವರ್ಷದೊಳಗಿನವರಿಗಾಗಿ. 8 ವರ್ಷ ವಯಸ್ಸಿನಿಂದ 59 ವರ್ಷ ವಯಸ್ಸಿನವರು ಈ ಪಾಲಿಸಿಯನ್ನು ಆರಂಭಿಸಬಹುದು. ಈ ಪಾಲಿಸಿ ಅವಧಿ 16ರಿಂದ 25 ವರ್ಷ.

ನೀವು ಕನಿಷ್ಠ 3 ವರ್ಷ ಪ್ರೀಮಿಯಮ್ ನ್ನು ತಪ್ಪದೇ ಕಟ್ಟಿದ್ದರೆ ಈ ಪಾಲಿಸಿಯ ಮೇಲೆ ಸಾಲವನ್ನೂ ಪಡೆಯಬಹುದು. ಇಲ್ಲಿ ಪಡೆಯುವ ಸಾಲಕ್ಕೆ ಬಡ್ಡಿಯೂ ಕಡಿಮೆ. ಸಾಲ ಪಡೆಯುವ ದಿನದವರೆಗೆ ಕಟ್ಟಿರುವ ಪ್ರೀಮಿಯಮ್ ಹಣದ ನಿರ್ದಿಷ್ಟ ಭಾಗದ ಹಣ ನಿಮಗೆ ಸಾಲವಾಗಿ ನೀಡಲಾಗುತ್ತದೆ. ಆನ್ ಲೈನ್ ಮೂಲಕವೇ ಪ್ರೀಮಿಯಮ್ ನ್ನೂ ಸಾಲವನ್ನೂ ಪಾವತಿಸಬಹುದು. ಇನ್ನು ವಿಮೆ ಮಾಡಿಸಿದ ವ್ಯಕ್ತಿ ಆಕಸ್ಮಿಕವಾಗಿ ಕೊನೆಯುಸಿರೆಳೆದರೆ ಆ ಪಾಲಿಸಿಯ ನಾಮಿನಿಗೆ ವರ್ಗಾವಣೆಯಾಗುತ್ತದೆ. ಆದರೆ, ಪಾಲಿಸಿಯ ಎಲ್ಲಾ ಪ್ರೀಮಿಯಮ್ ಕಟ್ಟಿರಬೇಕು. ಪಾಲಿಸಿದಾರ ಕೊನೆಯುಸಿರೆಳೆದರೆ ರಿವರ್ಷನರಿ ಬೋನಸ್, ಅಡಿಶನ್ ಬೋನಸ್ ಇತ್ಯಾದಿ ವಿಶೇಷ ಸೌಲಭ್ಯಗಳೆಲ್ಲವೂ ನಾಮಿನಿಗೆ ಸಿಗುತ್ತದೆ.