ಗಾನಕೋಗಿಲೆ ಲತಾ ಮಂಗೇಶ್ಕರ್ ರವರ ಜೀವನದಲ್ಲಿ ನಡೆದ ಯಾರಿಗೂ ತಿಳಿಯ ಘಟನೆಗಳು, ಅಚ್ಚರಿಯಾಗಿ ನಡೆದಿರುವ ಘಟನೆಗಳು ಯಾವ್ಯಾವು ಗೊತ್ತೇ??

248

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಗಾನಕೋಗಿಲೆ ಎಂದು ಖ್ಯಾತರಾಗಿದ್ದ ಎಲ್ಲರ ನೆಚ್ಚಿನ ಗಾಯಕಿ ಲತಾ ಮಂಗೇಶ್ಕರ್ ಅವರು ತಮ್ಮ 92ನೇ ವಯಸ್ಸಿಗೆ ಮಹಾಮಾರಿಯ ಕಾರಣದಿಂದಾಗಿ ನಮ್ಮನ್ನೆಲ್ಲ ಅಗಲಿದ್ದಾರೆ. ಇದ್ದಷ್ಟು ದಿನ ತಮ್ಮ ಗಾನಸುಧೆಯಿಂದ ಅದೆಷ್ಟೋ ಕೋಟ್ಯಾಂತರ ಪ್ರೇಕ್ಷಕರ ಮನವನ್ನು ರಂಜಿಸಿದವರು. ಇಂದಿನ ಲೇಖನಿಯಲ್ಲಿ ನಾವು ಲತಾ ಮಂಗೇಶ್ಕರ್ ಅವರ ಕುರಿತಂತೆ ನಿಮಗೆ ಗೊತ್ತಿರದಂತಹ ಕೆಲವು ವಿಚಾರಗಳನ್ನು ಹೇಳಲು ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಲತಾ ಮಂಗೇಶ್ಕರ್ ತಮ್ಮ ತಂದೆಯೊಂದಿಗೆ ನಾಟಕ ಕಂಪನಿ ನಡೆಸುತ್ತಿದ್ದರು. ಲತಾ ಮಂಗೇಶ್ಕರ್ ರವರ ಸಂಗೀತದ ಮೊದಲ ಗುರು ಕೂಡ ಅವರ ತಂದೆಯಾಗಿದ್ದರು. ಲತಾ ಮಂಗೇಶ್ಕರ್ ಅವರು ತಮ್ಮ ಗಾಯನ ವೃತ್ತಿಯನ್ನು ಕೂಡ ಪ್ರಾರಂಭಿಸಿದ್ದು ಮರಾಠಿ ಚಿತ್ರವಾಗಿರುವ ಕಿತಿ ಹಸಾಲ್ ಮೂಲಕ. 1942 ರಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ನಾಚು ಯ ಗಡೆ ಖೇಲು ಸಾರಿ ಮಣಿ ಹೌಸ್ ಎನ್ನುವ ಹಾಡನ್ನು ಹಾಡುವ ಮೂಲಕ ವೃತ್ತಿಪರರಾಗಿ ತಮ್ಮ ಹಾಡುಗಾರಿಕೆಯನ್ನು ಪ್ರಾರಂಭಿಸುತ್ತಾರೆ. ಆದರೆ ದುರದೃಷ್ಟವಶಾತ್ ಈ ಹಾಡನ್ನು ಸಿನಿಮಾದಿಂದಲೇ ತೆಗೆದುಹಾಕಲಾಗಿತ್ತು.

ಇನ್ನೊಂದು ವಿಚಾರವನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಮ್ಯೂಸಿಕ್ ಡೈರೆಕ್ಟರ್ ನೌಶಾದ್ ರವರೊಂದಿಗೆ ಹಾಡನ್ನು ರೆಕಾರ್ಡ್ ಮಾಡುತ್ತಿರಬೇಕಾದರೆ ಲತಾ ಮಂಗೇಶ್ಕರ್ ಅವರ ಮೂರ್ತಿ ತಪ್ಪಿ ಬಿದ್ದಿದ್ದರು. ಅತಿ ಮುಖ್ಯ ಕಾರಣವಾಗಿದ್ದು ಆ ಕೊಠಡಿಯಲ್ಲಿ ಯಾವುದೇ ಫ್ಯಾನ್ ವ್ಯವಸ್ಥೆ ಇರಲಿಲ್ಲ ಇದರಿಂದಾಗಿ ಸೆಕೆಯನ್ನು ತಾಳಲಾಗದೆ ಲತಾಮಂಗೇಶ್ಕರ್ ರವರು ಮೂರ್ಛೆ ತಪ್ಪಿ ಬಿದ್ದಿದ್ದರು. ಇನ್ನೊಂದು ವಿಶೇಷ ಎಂದರೆ ಯಾವತ್ತೂ ಕೂಡ ಲತಾ ಮಂಗೇಶ್ಕರ್ ಅವರು ತಾವು ಹಾಡಿದ ಹಾಡನ್ನು ಕೇಳುತ್ತಿರಲಿಲ್ಲ ವಂತೆ. ಯಾಕೆಂದರೆ ಅವರು ಹಾಡಿದ ಹಾಡನ್ನು ಅವರು ಕೇಳುವಾಗ ಅವರಿಗೆ ಸಾಕಷ್ಟು ತಪ್ಪುಗಳು ಇರುವಂತೆ ಭಾಸವಾಗುತ್ತದಂತೆ.

ಇದುವರೆಗೂ ಲತಾ ಮಂಗೇಶ್ಕರ್ ಅವರು ಭಾರತದ 36 ಕ್ಕೂ ಅಧಿಕ ಭಾಷೆಗಳಲ್ಲಿ ಹಾಡುಗಾರಿಕೆಯ ಕಂಪನ್ನು ಸೂಸಿದ್ದಾರೆ. ಇನ್ನು ಅವರ ನೆಚ್ಚಿನ ಸಂಗೀತ ನಿರ್ದೇಶಕ ಎಂದರೆ ಅದು ಮದನ್ ಮೋಹನ್. ಮದನ್ ಮೋಹನ್ ನನ್ನ ಸಹೋದರರ ಸಮಾನ ಎಂಬುದಾಗಿ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಲತಾಮಂಗೇಶ್ಕರ್ ಅವರು ಮಾಡಿರುವಂತಹ ಅಪ್ರತಿಮ ಸಾಧನೆಗಾಗಿ 1999 ರಿಂದ 2005 ರವರೆಗೆ ಅವರನ್ನು ಎಂಪಿ ಸ್ಥಾನಕ್ಕಾಗಿ ನಾಮಿನೇಟ್ ಮಾಡಲಾಗಿತ್ತು.

ಕೇವಲ ಭಾರತದಲ್ಲಿ ಮಾತ್ರ ಲತಾ ಮಂಗೇಶ್ಕರ್ ಅವರ ಕಂಠಸಿರಿ ಎನ್ನುವುದು ಜನಪ್ರಿಯವಾಗಿರಲಿಲ್ಲ ಬದಲಾಗಿ ವಿದೇಶದಲ್ಲಿಯೂ ಕೂಡ ಈಗಾಗಲೇ ಅವರಿಗೆ ಹಾಗೂ ಅವರ ಗಾಯನ ವೈಶಿಷ್ಟತೆಗೆ ಸರಿಯಾದ ಸನ್ಮಾನ ಸಿಕ್ಕಿದೆ. ಲಂಡನ್ ನ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಸಂಗೀತ ಪ್ರದರ್ಶನ ನೀಡಿದ ಮೊದಲ ಭಾರತೀಯರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಷ್ಟು ಮಾತ್ರವಲ್ಲದೆ ಫ್ರಾನ್ಸ್ ಸರ್ಕಾರವು ಕೂಡ 2007 ರಲ್ಲಿ ದ ಲೀಜನ್ ಆಫ್ ಆನರ್ ಗೌರವವನ್ನು ಕೂಡ ನೀಡಿದೆ. ಬರೋಬ್ಬರಿ 70 ವರ್ಷಗಳ ಕಾಲ ಸಂಗೀತದ ಮೂಲಕ ಎಲ್ಲರ ಮನರಂಜಿಸಿದ ಲತಾಮಂಗೇಶ್ಕರ್ ರವರು ಕೊನೆಯ ಬಾರಿಗೆ 2019 ರಲ್ಲಿ ಭಾರತೀಯ ಸೇನೆ ಮತ್ತು ದೇಶಕ್ಕೆ ಗೌರವ ಸೂಚಿಸುವಂತಹ ಸೌಗಂಧ್ ಮುಜೆ ಇಸ್ ಮಿಟ್ಟಿ ಕಿ ಹಾಡನ್ನು ಹಾಡಿದ್ದರು. ಆದರೆ ಯಾರೂ ಕೂಡ ಇದೇ ಅವರ ಕೊನೆ ಹಾಡಾಗುತ್ತದೆ ಎಂಬುದಾಗಿ ಭಾವಿಸಿರಲಿಲ್ಲ.