ಗಂಗೂಬಾಯಿ ಕಾಥಿಯವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ಉಟ್ಟ ಆ ಸೀರೆ ಬೆಲೆ ಎಷ್ಟು ಗೊತ್ತೇ?? ಒಂದು ಸೀರೆಗೆ ಇಷ್ಟೊಂದಾ??

366

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹಲವಾರು ಸಿನಿಮಾಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅವುಗಳಲ್ಲಿ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಥಿಯವಾಡಿ ಸಿನಿಮಾ ಕೂಡ ಹೌದು. ಇದಕ್ಕೆ ಹಲವಾರು ಕಾರಣಗಳು ಕೂಡ ಇವೆ. ಮೊದಲಿನಿಂದಲೂ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಒಂದು ವಿರೋಧದ ಕೂಗು ಕೇಳಿ ಬರುತ್ತಲೇ ಇತ್ತು. ಅದೇನೆಂದರೆ ನೇಪೋಟಿಸಂ. ಸ್ಟಾರ್ ನಟರ ನಿರ್ಮಾಪಕ ಹಾಗೂ ನಿರ್ದೇಶಕರ ಮಕ್ಕಳು ಮಾತ್ರ ಚಿತ್ರರಂಗದಲ್ಲಿ ಅವಕಾಶ ಪಡೆಯುತ್ತಿದ್ದಾರೆ ಎಂಬುದಾಗಿ.

ಆಲಿಯಾ ಭಟ್ ಕುರಿತಂತೆ ಕೂಡ ಇದೇ ರೀತಿಯ ಧ್ಯೇಯವಾಕ್ಯವನ್ನು ಎಲ್ಲರೂ ಹೇಳುತ್ತಿದ್ದರು. ಆಲಿಯಾ ಭಟ್ ಗೆ ನಟನೆ ಬರುವುದಿಲ್ಲ ಎಂಬುದಾಗಿ ಎಲ್ಲರೂ ಕೂಡ ಟೀಕಿಸುತ್ತಿದ್ದರು. ಆದರೆ ಸಂಜಯಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಗಂಗೂಬಾಯಿ ಕಾಥಿಯವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ರವರ ನಟನೆ ಖಂಡಿತವಾಗಿಯೂ ಎಲ್ಲರೂ ಮೆಚ್ಚುವಂತದ್ದು ಎಂಬುದಾಗಿ ಹೇಳಲಾಗುತ್ತದೆ. ಈಗಾಗಲೇ ಟ್ರೈಲರ್ ನಲ್ಲಿಯೂ ಕೂಡ ಆಲಿಯಾ ಭಟ್ ರವರ ನಟನೆಯನ್ನು ಎಲ್ಲರೂ ಮೆಚ್ಚಿದ್ದಾರೆ.

ಟ್ರೇಲರ್ ನಲ್ಲಿ ಆಲಿಯಾ ಭಟ್ ಹುಟ್ಟಿರುವ ಶ್ವೇತವರ್ಣದ ಸೀರೆ ಈಗ ಎಲ್ಲರ ಮನವನು ಗೆದ್ದಿದ್ದು ಈ ಸೀರೆಯ ಬೆಲೆ ಎಷ್ಟು ಎಂಬುದಾಗಿ ಎಲ್ಲರೂ ಕುತೂಹಲದಿಂದ ಹುಡುಕುತ್ತಿದ್ದಾರೆ. ಇಂದಿನ ಲೇಖನದಲ್ಲಿ ನಾವು ಆ ಸೀರೆ ಬೆಲೆ ಎಷ್ಟು ಎಂಬುದಾಗಿ ಹೇಳುತ್ತೇವೆ. ಹೌದು ಗೆಳೆಯರೇ ಗಂಗೂಬಾಯಿ ಕಾಥಿಯವಾಡಿ ಸಿನಿಮಾದ ಟ್ರೈಲರ್ ನಲ್ಲಿ ಆಲಿಯಾ ಭಟ್ ರವರು ಉಟ್ಟುಕೊಂಡಿರುವ ಸೀರೆಯ ಬೆಲೆ ಬರೋಬ್ಬರಿ 37 ಸಾವಿರ ರೂಪಾಯಿ. ಸಿನಿಮಾ ಇದೇ ಫೆಬ್ರವರಿ 25ರಂದು ದೇಶಾದ್ಯಂತ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಆಲಿಯಾ ಭಟ್ ರವರೊಂದಿಗೆ ಅಜಯ್ ದೇವಗನ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.