ಬಿಗ್ ನ್ಯೂಸ್: ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ, ಟ್ರಾಯ್ ಹೊಸ ಆದೇಶ, ಜಿಯೋ ಹಾಗೂ ಏರ್ಟೆಲ್ ಗೆ ಬಿಗ್ ಶಾಕ್. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ದೇಶದ ಪ್ರಧಾನ ಟೆಲಿಕಾಂ ಕಂಪನಿಗಳು ಗ್ರಾಹಕಸ್ನೇಹಿ ರಿಚಾರ್ಜ್ ಪ್ಲಾನ್ ಗಳನ್ನು ಕೊಡುತ್ತಿದ್ದಾರೆ, ಆದರೆ ಎಲ್ಲಕಡೆ ಇರುವ ಹಾಗೆ ಇಲ್ಲಿಯೋ ಸಾಕಷ್ಟು ಲೋಪದೋಷಗಳಿವೆ. ಮುಖ್ಯವಾಗಿ ಯಾವುದೇ ಪ್ಲ್ಯಾನ್ ಗಳ ವ್ಯಾಲಿಡಿಟಿ ಹೆಚ್ಚು ದಿನಗಳ ವರೆಗೆ ಇರುವುದೇ ಇಲ್ಲ, ಆದರೆ ಅದಕ್ಕೆ ಕೊಡಬೇಕಾದ ಹಣ ಮಾತ್ರ ಅಧಿಕ. ಹಾಗಾಗಿ ಟೆಲಿಕಾಂ ಕಂಪನಿಗಳ ಈ ಹೇರಿಕೆಗೆ ಕಡಿವಾಣ ಹಾಕಲು ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಮುಂದಾಗಿದೆ.
ಹೌದು ದೇಶದ ಟೆಲಿಕಾಂನಲ್ಲಿ ಹೊಸ ಬೆಳವಣಿಗೆಯೊಂದಕ್ಕೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಮುಂದಾಗಿದ್ದು, ಭಾರತದಲ್ಲಿನ ಎಲ್ಲಾ ಟೆಲಿಕಾಂ ಕಂಪೆನಿಗಳು 30 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒದಗಿಸುವ ಕನಿಷ್ಠ ಒಂದು ಸುಂಕ ಯೋಜನೆಯನ್ನು ಒಳಗೊಂಡಿರುವುದನ್ನು ಕಡ್ಡಾಯಗೊಳಿಸಿದ್ದು ಟೆಲಿಕಾಂ ಕಂಪನಿಗೆ ನುಗಲಾರದ ತುತ್ತಾಗಿದೆ. ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು ವಿಶೇಷ ಸುಂಕದ ವೋಚರ್ ಮತ್ತು ಒಂದು ಕಾಂಬೊ ವೋಚರ್ ಅನ್ನು ಪ್ರತಿ ತಿಂಗಳ ಅದೇ ದಿನಾಂಕದಂದು ನವೀಕರಿಸುವಂತೆ ಯೋಜನೆಯನ್ನು ನೀಡಬೇಕು ಎಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಆದೇಶ ನೀಡಿದೆ. ಸರ್ಕಾರಿ ಮಾಲಿಕತ್ವದ ಬಿ ಎನ್ ಎನ್ ಎಲ್ ಸೇರಿದಂತೆ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳೂ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ.

1999ರ ದೂರಸಂಪರ್ಕ ಆದೇಶಕ್ಕೆ ಟ್ರಾಯ್ ಬದಲಾವಣೆಯನ್ನು ತಂದಿದೆ ಅದರ ಟೆಲಿಕಾಂ ಆಪರೇಟರ್ ಕನಿಷ್ಠ ಒಂದು ಪ್ಲಾನ್ ವೋಚರ್, ಒಂದು ವಿಶೇಷ ಸುಂಕದ ಚೀಟಿ ಮತ್ತು ಒಂದು ಕಾಂಬೊ ವೋಚರ್ ಅನ್ನು 30 ದಿನಗಳ ವ್ಯಾಲಿಡಿಟಿ ನೀಡಬೇಕು ಎಂದು ಷರತ್ತು ವಿಧಿಸಿದ್ದು ಇದು ಗ್ರಾಹಕಸ್ನೇಹಿ ಆದೇಶವಾಗಿದೆ. ಇದೀಗ ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು 28 ದಿನಗಳ ವ್ಯಾಲಿಡಿಟಿಯನ್ನು ತಿಂಗಳಿಗೆ ನೀಡುತ್ತವೆ. ಅಂದರೆ ವರ್ಷದಲ್ಲಿ 13 ರೀಚಾರ್ಜ್‌ಗಳನ್ನು ಮಾಡುಡುತ್ತಿರುವ ಗ್ರಾಹಕರು ತಾವು ಮೋಸ ಹೋಗುತ್ತಿರುವುದಾಗಿ ಟ್ರಾಯ್ ಗೆ ದೂರುಸಲ್ಲಿಸಿದ್ದರು. ದೂರುಗಳನ್ನು ಸ್ವೀಕರಿಸಿದೆ.
ತಮ್ಮ 28 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ಗೆ ತನ್ನಡೇ ಆದ ಕಾರಣಗಳನ್ನು ಕೊಟ್ಟಿರುವ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಂಪೆನಿಗಳು ಪ್ರಚಲಿತದಲ್ಲಿರುವ 28 ದಿನಗಳು, 56 ದಿನಗಳು ಅಥವಾ 84 ದಿನಗಳ ಯೋಜನೆಗಳಿಗೆ ಯಾವುದೇ ಬದಲಾವಣೆಗಳನ್ನು ತಂದರೆ ಅದು ಗ್ರಾಹಕರಲ್ಲಿ ಗೊಂದಲವನ್ನು ಉಂಟು ಮಾಡುತ್ತದೆ ಎಂದು ಟ್ರಾಯ್ ನ ಈ ಆದೇಶವನ್ನು ವಿರೋಧಿಸುತ್ತಿದ್ದಾರೆ. ಆದರೆ ಗ್ರಾಹಕರು ಹಾಗೂ ದೇಶದ ಈ ಟೆಲಿಕಾಂ ಬಳಕೆದಾರರು ಟ್ರಾಯ್ ಆದೇಶವನ್ನು ಸ್ವಾಗತಿಸಿದ್ದಾರೆ.