ವಜ್ರ, ವೈಡೂರ್ಯ ಎಂದರೆ ಬಹಳ ಇಷ್ಟಪಡುತ್ತಿದ್ದ ಲತಾ ರವರ ಎಲ್ಲಾ ಆಭರಣಗಳು ಏನಾಯ್ತು ಗೊತ್ತೇ?? ಇಹಲೋಕ ತ್ಯಜಿಸಿದ ಮೇಲೆ ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದ ನೈಟಿಂಗೇಲ್ ಅಂದರೆ ಭಾರತದ ಕೋಗಿಲೆ ಎಂಬುದಾಗಿ ತಮ್ಮ ಸುಮಧುರ ಕಂಠದಿಂದ ದೇಶ-ವಿದೇಶಗಳಲ್ಲಿ ಜನಪ್ರಿಯರಾಗಿದ್ದ ಲತಾಮಂಗೇಶ್ಕರ್ ರವರು ಮೊನ್ನೆಯಷ್ಟೆ ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಲತಾ ಮಂಗೇಶ್ಕರ್ ಅವರು ತಮ್ಮ ಹಾಡಿನ ಮೂಲಕ ನನ್ನ ಧ್ವನಿಯೇ ನನ್ನ ಪರಿಚಯ ಎಂಬುದಾಗಿ ಎಲ್ಲಾ ಕಡೆ ಸಾರಿದ್ದರು. ಹಾಡಿನ ಮೂಲಕ ಹಾಗೂ ವ್ಯಕ್ತಿತ್ವದ ಮೂಲಕ ಎಲ್ಲರ ಗಮನಸೆಳೆದಿದ್ದ ಧೀಮಂತ ವ್ಯಕ್ತಿತ್ವ ಲತಾಮಂಗೇಶ್ಕರ್ ಅವರದು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಗಾಗಿ ಹಾಡನ್ನು ಹಾಡಲು ಪ್ರಾರಂಭಿಸಿದ ಪ್ರತಿಯೊಂದು ಮನೆಯಲ್ಲಿ ಪ್ರತಿ ಮಕ್ಕಳು ಕೂಡ ಅವರ ಹಾಡನ್ನು ಗುನುಗುನಿಸುವಂತಿದೆ ಮಾಡಿದ್ದಾರೆ.
ಬರೋಬ್ಬರಿ 36 ಭಾಷೆಗಳಲ್ಲಿ 50 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವುದು ಎಂದರೆ ತಮಾಷೆಯಲ್ಲ. ಆದರೆ ಲತಾ ಮಂಗೇಶ್ಕರ್ ಅವರು ಇವೆಲ್ಲವನ್ನು ಕೂಡ ತಮ್ಮ 70 ವರ್ಷಗಳ ಜರ್ನಿಯಲ್ಲಿ ಮಾಡಿದ್ದರು. ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತೀಯ ದೇಶದ ಹೆಣ್ಣುಮಕ್ಕಳು ವಿಶೇಷವಾಗಿ ಚಿನ್ನಾಭರಣಗಳ ಕುರಿತಂತೆ ವಿಶೇಷ ಒಲವನ್ನು ಹೊಂದಿರುತ್ತಾರೆ. ನಮ್ಮ ಲತಾಮಂಗೇಶ್ಕರ್ ಅವರು ಕೂಡ ವಜ್ರಾಭರಣಗಳ ಕುರಿತಂತೆ ಸಾಕಷ್ಟು ವಿಶೇಷವಾದ ಒಲವನ್ನು ಹೊಂದಿದ್ದರು. ಅದರಲ್ಲೂ ಲತಾಮಂಗೇಶ್ಕರ್ ರವರಿಗೆ ವಜ್ರದ ಹಾಗೂ ಮುತ್ತಿನ ಅವರುಗಳೆಂದರೆ ಸಾಕಷ್ಟು ಇಷ್ಟ. ಅದರಲ್ಲೂ ಲತಾಮಂಗೇಶ್ಕರ್ ರವರು ವಜ್ರದ ಕಿವಿಯೋಲೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರು.

ಲತ ಮಂಗೇಶ್ಕರ್ ಅವರ ಪ್ರತಿಯೊಂದು ವಜ್ರದ ಆಭರಣಗಳನ್ನು ಆಡೂರ ಎನ್ನುವ ಕಂಪನಿ ತಯಾರಿಸುತ್ತಿತ್ತು. ಯಾವಾಗಲೂ ತಮ್ಮ ಮುಂಬೈನ ಮನೆಯ ಲಾಕರ್ ನಲ್ಲಿ ವಜ್ರಾಭರಣ ಗಳನ್ನು ಇರಿಸುತ್ತಿದ್ದರು. ಲತಾ ಮಂಗೇಶ್ಕರ್ ಅವರು ತಮ್ಮ ವಜ್ರಾಭರಣಗಳನ್ನು ಏನು ಮಾಡಿದರು ಎಂಬುದನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹೌದು ಲತಾ ಮಂಗೇಶ್ಕರ್ ಅವರು ಈ ವಜ್ರದ ಆಭರಣಗಳನ್ನು ಕ್ರಿಸ್ಟಿಅಸ್ ಹರಾಜಿನಲ್ಲಿ ಮಾರಾಟ ಮಾಡಿ 783903 ರೂಪಾಯಿಗಳ ಸಂಗ್ರಹಣೆ ಮಾಡಿ ಅದನ್ನು 2005 ರಲ್ಲಿ ಭೂ’ಕಂಪ ಪರಿಹಾರ ನಿಧಿಗೆ ನೀಡಿದ್ದರು. ನಿಜಕ್ಕೂ ಇಂತಹ ಬಂಗಾರದ ಮನಸ್ಸಿನವರನ್ನು ನಮ್ಮ ಭಾರತೀಯರು ಎಂಬುದಾಗಿ ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಲತಾ ಮಂಗೇಶ್ಕರ್ ಅವರು ಪ್ರತಿಯೊಬ್ಬ ಭಾರತೀಯನ ಮನಸ್ಸಿನಾಳದಲ್ಲಿ ಚಿರಂಜೀವಿ ಆಗಿರುತ್ತಾರೆ.