ಕನ್ನಡ ಚಿತ್ರರಂಗದಲ್ಲಿ ನಟರು ಪಡೆಯುವ ಸಂಭಾವನೆ ಎಷ್ಟು ಗೊತ್ತೇ?? ಒಂದು ಸಿನೆಮಾಗೆ ಹೆಚ್ಚು ಪಡೆಯುವವರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆ ಚಿತ್ರರಂಗಗಳಿಗೆ ಹೋಲಿಸಿದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಪಂಚಭಾಷಾ ಚಿತ್ರಗಳ ಬಿಡುಗಡೆ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ನಮ್ಮ ಸ್ಟಾರ್ ನಟರ ಸಂಭಾವನೆ ಕೂಡ ಹೆಚ್ಚಾಗಿದೆ. ಹಾಗಿದ್ದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಯಾವೆಲ್ಲ ಸ್ಟಾರ್ ನಟರು ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಸ್ಥಾಪನೆ ಲೇಖನಿಯನ್ನು ಕೊನೆಯವರೆಗೂ ಓದಿ.

ದುನಿಯಾ ವಿಜಯ್; ಸಲಗ ಚಿತ್ರದ ಯಶಸ್ಸಿನಿಂದಾಗಿ ದುನಿಯಾ ವಿಜಯ ರವರ ಸಂಭಾವನೆ ಯನ್ನುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚಿತ್ರಗಳಿಗೆ ದುನಿಯಾ ವಿಜಯ್ ಅವರು ಎರಡರಿಂದ ಮೂರು ಕೋಟಿ ರೂಪಾಯಿ ಪಡೆದುಕೊಳ್ಳಬಹುದಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್; ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ 50ಕೋಟಿ ಚಿತ್ರವನ್ನು ನೀಡಿದಂತಹ ನಟ ಗೋಲ್ಡನ್ ಸ್ಟಾರ್ ಗಣೇಶ್. ಇವರು ಒಂದು ಚಿತ್ರಕ್ಕೆ 3ರಿಂದ 3.5 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ; ಈಗಾಗಲೇ ಸ್ಟಾರ್ ನಟರ ಪೈಕಿ ಯಲ್ಲಿ ಗುರುತಿಸಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರು ಮೂರರಿಂದ ನಾಲ್ಕು ಕೋಟಿ ರೂಪಾಯಿ ಸಂಭಾವನೆಯನ್ನು ಒಂದು ಚಿತ್ರಕ್ಕಾಗಿ ಪಡೆಯುತ್ತಾರೆ.
ಶಿವಣ್ಣ; ವಯಸ್ಸು ಐವತ್ತರ ಮೇಲೆ ದಾಟಿದ್ದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿಯಾಗಿ ಮಿಂಚುತ್ತಿರುವ ಶಿವಣ್ಣನವರು ಮೂರರಿಂದ 4.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಿಯಲ್ ಸ್ಟಾರ್ ಉಪೇಂದ್ರ; ನಟನಾಗಿ ಹಾಗೂ ನಿರ್ದೇಶಕನಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಸಂಪಾದಿಸಿರುವ ರಿಯಲ್ ಸ್ಟಾರ್ ಉಪೇಂದ್ರ ರವರು ನಾಲ್ಕರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಕ್ಷಿತ್ ಶೆಟ್ಟಿ; ನಟ ನಿರ್ಮಾಪಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಅತಿ ಚಿಕ್ಕವಯಸ್ಸಿನಲ್ಲಿಯೇ ಯಶಸ್ಸನ್ನು ಸಾಧಿಸಿರುವ ರಕ್ಷಿತ್ ಶೆಟ್ಟಿ ಅವರು ಈಗಾಗಲೇ ಕೈತುಂಬ ಸಿನಿಮಾಗಳನ್ನು ಹೊಂದಿದ್ದಾರೆ. ಇವರು ಒಂದು ಸಿನಿಮಾಗೆ 5ರಿಂದ 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ; ಧ್ರುವ ಸರ್ಜಾ ರವರು ಈಗಾಗಲೇ ಪೊಗರು ಚಿತ್ರದ ಯಶಸ್ಸಿನಲ್ಲಿ ಮುಳುಗಿರುವಾಗಲೇ ಮಾರ್ಟಿನ್ ಎನ್ನುವ ಮತ್ತೊಂದು ಪಂಚಭಾಷಾ ಚಿತ್ರಕ್ಕೆ ಕೈಹಾಕಿದ್ದಾರೆ. ಇವರು ಒಂದು ಸಿನಿಮಾಗೆ ಆರರಿಂದ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಪುನೀತ್ ರಾಜಕುಮಾರ್; ಕನ್ನಡ ಚಿತ್ರರಂಗದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮನ್ನು ಅಗಲಿ ಹೋಗಿರಬಹುದು ಆದರೆ ಅವರ ಸಿನಿಮಾಗಳು ಇಂದಿಗೂ ಕೂಡ ನಮ್ಮ ಮನದಾಳದಲ್ಲಿ ನೆಲೆಸಿವೆ. ಇನ್ನು ಇವರು ಒಂದು ಸಿನಿಮಾಗೆ ಎಂಟರಿಂದ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್; ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಯಾವುದೇ ಭಾಷೆಯಲ್ಲಿ ನಟಿಸಲು ಅವರ ಅಭಿಮಾನಿಗಳು ಆ ಚಿತ್ರವನ್ನು ಹಬ್ಬದಂತೆ ಚಿತ್ರಮಂದಿರಗಳ ಎದುರು ಆಚರಿಸುತ್ತಾರೆ. ಇನ್ನು ಇವರ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಒಂದು ಸಿನಿಮಾಗೆ ಹತ್ತರಿಂದ ಹನ್ನೆರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್; ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅಗ್ರಸ್ಥಾನದಲ್ಲಿ ಕಂಡುಬರುತ್ತಾರೆ. ಇವರು ತಮ್ಮ ಸಿನೆಮಾಗಳಿಗಾಗಿ ಹತ್ತರಿಂದ ಹದಿನೈದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಾಕಿಂಗ್ ಸ್ಟಾರ್ ಯಶ್; ಕೆಜಿಎಫ್ ಸರಣಿ ಚಿತ್ರಗಳ ಮೂಲಕ ತನ್ನ ಬೇಡಿಕೆಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹೆಚ್ಚಿಸಿಕೊಂಡ ನಟ ರಾಕಿಂಗ್ ಸ್ಟಾರ್ ಯಶ್ ರವರು ಈಗ ತಮ್ಮ ಚಿತ್ರಗಳಿಗೆ 15ರಿಂದ 20 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ಇವರೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಸ್ಟಾರ್ ನಟರು.