ವೆರೈಟಿ ಸೌಂಡ್ ಮಾಡಿದ ನಿವೇದಿತಾ, ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತೇ?? ಮತ್ತೊಮ್ಮೆ ವೈರಲ್ ಆಯಿತು ಚಂದನ್ ಹಾಗೂ ನಿವೇದಿತಾ ವಿಡಿಯೋ. ಹೇಗಿದೆ ಗೊತ್ತೇ??

491

ನಮಸ್ಕಾರ ಸ್ನೇಹಿತರೇ ಕನ್ನಡದ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡಮಟ್ಟದ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇದನ್ನು ಕನ್ನಡದ ಅಭಿನಯ ಚಕ್ರವರ್ತಿ ಆಗಿರುವ ಕಿಚ್ಚ ಸುದೀಪ್ ರವರು ಹೋಸ್ಟ್ ಆಗಿ ನಡೆಸಿಕೊಡುತ್ತಾರೆ. ಇನ್ನು ಇದೇ ಕಾರ್ಯಕ್ರಮದ 5ನೇ ಸೀಸನ್ ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರವರು ಅಭ್ಯರ್ಥಿಗಳಾಗಿ ಭಾಗವಹಿಸಿದ್ದರು. ಇದಾದ ನಂತರ ಅವರು ಪ್ರೀತಿಸಿ ಮದುವೆಯಾಗಿರುವುದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇನ್ನು ನಿವೇದಿತಾ ಗೌಡ ರವರು ಹಾಗೂ ಚಂದನ್ ಶೆಟ್ಟಿ ಇಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹಿಂಬಾಲಕರನ್ನು ಹೊಂದಿದ್ದು ಸಾಕಷ್ಟು ಆಕ್ಟಿವ್ ಕೂಡ ಆಗಿದ್ದಾರೆ. ಅದರಲ್ಲೂ ನಿವೇದಿತ ಗೌಡರವರು ಆಗಾಗ ವಿಧವಿಧವಾದಂತಹ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಯುಟ್ಯೂಬ್ ಚಾನೆಲ್ ಕೂಡ ಓಪನ್ ಮಾಡಿ ಹೊಸ ಹೊಸ ಕಂಟೆಂಟ್ ಗಳನ್ನು ನಿವೇದಿತ ಗೌಡರವರು ಪೋಸ್ಟ್ ಮಾಡುತ್ತಿರುತ್ತಾರೆ.

ಇತ್ತೀಚಿಗೆ ಕನ್ನಡ ಮಾತನಾಡಿ ತುಂಡು ಬಟ್ಟೆಗಳನ್ನು ಹಾಕಿಕೊಳ್ಳಬೇಡಿ ಎಂಬುದಾಗಿ ಪ್ರೇಕ್ಷಕರು ಟೀಕಿಸಿದ್ದಕ್ಕೆ ನಿವೇದಿತಾ ಗೌಡ ಅವರು ಕೂಡ ಪ್ರತ್ಯುತ್ತರ ನೀಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಕೂಡ ಮತ್ತೊಂದು ವಿಡಿಯೋ ಮೂಲಕ ವೈರಲ್ ಆಗಿದ್ದಾರೆ. ಹೌದು ಅದೇನೆಂದರೆ ನೀವು ಬಿಗ್ ಬಾಸ್ ನಲ್ಲಿ ಕೂಡ ನೋಡಿರುವ ಹಾಗೆ ಚಂದನ್ ಶೆಟ್ಟಿ ಅವರು ಹಲವಾರು ವಸ್ತುಗಳ ಮೂಲಕ ಸಂಗೀತದ ಸುಧೆಯನ್ನು ಹರಿಸುತ್ತಿದ್ದರು. ಈಗ ವೈರಲ್ ಆಗಿರುವ ವಿಡಿಯೋ ಮೂಲಕ ತಮ್ಮ ಹೆಂಡತಿಯ ಮೂಗಿನಿಂದಲೇ ಹೊಸ ಟ್ಯೂನನ್ನು ಮಾಡಿ ಅದನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುವ ಮೂಲಕ ಯಾವ ಟ್ಯೂನ್ ಎಂಬುದಾಗಿ ಗೆಸ್ ಮಾಡಿ ಎಂದು ಹೇಳಿದ್ದಾರೆ. ಟ್ಯೂನ್ ಯಾವುದು ಎಂದು ಕಂಡುಹಿಡಿದಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೆ ವಿಡಿಯೋ ಮಾತ್ರ ವೈರಲ್ ಆಗಿದೆ.