ಇದ್ದಕಿದ್ದ ಹಾಗೆ ಪ್ರೇಯಸಿ ಜೊತೆ ಕಾಣಿಸಿಕೊಂಡ ಮಂಗಳಗೌರಿಮದುವೆ ಖ್ಯಾತಿಯ ಗಗನ್, ಅಷ್ಟಕ್ಕೂ ಇವರು ಯಾರು ಗೊತ್ತೇ?? ಇವರು ಸಿನಿಮಾದವರೇ.

2,333

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಾರವಾಹಿಗಳು ಎಷ್ಟರಮಟ್ಟಿಗೆ ಪ್ರಭಾವವನ್ನು ಬೀರಿದೆ ಎಂದರೆ ಪ್ರೇಕ್ಷಕರು ಸಿನಿಮಾ ನಟರಷ್ಟೇ ಧಾರವಾಹಿಯ ನಟನಟಿಯರಿಗೂ ಕೂಡ ಗೌರವ ಹಾಗೂ ಪ್ರೀತಿಯನ್ನು ನೀಡುತ್ತಿದ್ದಾರೆ. ಧಾರವಾಹಿಯ ನಟನಟಿಯರಿಗೂ ಕೂಡ ಸಂಭಾವನೆ ಹಾಗೂ ಜನಪ್ರಿಯತೆ ಲೆಕ್ಕದಲ್ಲಿ ಸಿನಿಮಾ ಕಲಾವಿದರಷ್ಟೇ ಸಮಾನತೆ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಈ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ಕೂಡ ಇದೇ ಧಾರವಾಹಿ ಕ್ಷೇತ್ರದ ಸೂಪರ್ ಹಿಟ್ ಧಾರವಾಹಿಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಕುರಿತಂತೆ ಹೇಳಲು ಹೊರಟಿದ್ದೇವೆ.

ನಿಜವಾಗಿ ಹೇಳಬೇಕೆಂದರೆ ಮಂಗಳಗೌರಿ ಮದುವೆ ಧಾರವಾಹಿ ಕುರಿತಂತೆ ಮಾತನಾಡಲು ಹೊರಟಿಲ್ಲ ಬದಲಾಗಿ ಆ ಧಾರವಾಹಿಯಲ್ಲಿ ಪೊಲೀಸಪ್ಪ ಅಥವಾ ರಾಜೀವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಗನ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಗಗನ್ ರವರು ಮೊದಲಿಗೆ ಈ ಪಾತ್ರವನ್ನು ಧಾರವಾಹಿಯಲ್ಲಿ ನಿರ್ವಹಿಸುತ್ತಿದ್ದರು. ಈಗ ಅವರ ಧಾರವಾಹಿಯಿಂದ ಹೊರಬಂದಿರಬಹುದು ಆದರೆ ಪ್ರೇಕ್ಷಕರಿಗೆ ಇನ್ನೂ ಕೂಡ ಅವರ ಅಚ್ಚುಮೆಚ್ಚಿನ ನಟನಾಗಿದ್ದಾರೆ. ಮಂಗಳಗೌರಿ ಮದುವೆ ಧಾರವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಗನ ಈಗಾಗಲೇ ಹಲವಾರು ಸಿನಿಮಾ ಹಾಗೂ ಬೇರೆ ಭಾಷೆ ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಈಗ ಸದ್ಯಕ್ಕೆ ಅವರ ಪ್ರೇಯಸಿಯ ಕುರಿತಂತೆ ಕೂಡ ಎಲ್ಲರಿಗೂ ತಿಳಿದುಬಂದಿದೆ ಎಂದು ಹೇಳಬಹುದಾಗಿದೆ. ಹೌದು ತಮ್ಮ ಪ್ರೇಯಸಿಯ ಜನ್ಮದಿನದ ಕುರಿತಂತೆ ಪೋಸ್ಟನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಗಗನ್ ರವರು ತಮ್ಮ ಪ್ರೇಯಸಿಯ ಕುರಿತಂತೆ ಅಭಿಮಾನಿಗಳಿಗೆ ತೆರೆದಿಟ್ಟಿದ್ದಾರೆ. ಹೌದು ಗಗನ್ ರವರ ಪ್ರೇಯಸಿ ಹೆಸರು ಪ್ರಾರ್ಥನಾ ನಾಣಯ್ಯ ಎನ್ನುವುದಕ್ಕೆ. ಇವರು ಮೇಕಪ್ ಆರ್ಟಿಸ್ಟ್ ಆಗಿದ್ದು ಶುಭ್ರಾ ಅಯ್ಯಪ್ಪ ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಹಲವಾರು ನಟಿಯರಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಗಗನ್ ಚಿನ್ನಪ್ಪ ತಮ್ಮ ಪ್ರೇಯಸಿಯ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆದಷ್ಟು ಶೀಘ್ರದಲ್ಲಿ ಇವರಿಬ್ಬರು ಮದುವೆಯಾಗಲಿ ಎಂಬುದಾಗಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.