ಮತ್ತೊಬ್ಬರು ಹೊಸ ತೀರ್ಪುದಾರರನ್ನು ಆಯ್ಕೆ ಮಾಡಿದ ಡ್ರಾಮಾ ಜೂನಿಯರ್ಸ್, ವಿಜಯ್ ರವರ ಸ್ಥಾನಕ್ಕೆ ಬಂದ ಮತ್ತೊಬ್ಬ ಖ್ಯಾತ ನಟ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಲಾಕ್ಡೌನ್ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಹಾಗೂ ಶೀಘ್ರವಾಗಿ ಬೆಳೆದಿರುವ ಕ್ಷೇತ್ರವೆಂದರೆ ಆದರೂ ಕಿರುತೆರೆಯ ಕಾರ್ಯಕ್ರಮಗಳು. ಸಿನಿಮಾಗಳು ಬಿಡುಗಡೆ ಆಗದೆ ಇದ್ದಿದಕ್ಕೆ ಕಿರುತೆರೆಯ ಕಾರ್ಯಕ್ರಮಗಳು ಹಾಗೂ ಧಾರವಾಹಿಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದವು. ಆದರೆ ಲಾಕ್ಡೌನ್ ಕಾರಣದಿಂದಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಪುಟಾಣಿ ಮಕ್ಕಳ ಪ್ರತಿಭೆಯನ್ನು ಜನರಿಗೆ ತೋರ್ಪಡಿಸುವ ಅಂತಹ ಕಾರ್ಯಕ್ರಮ ವಾಗಿರುವ ಡ್ರಾಮಾ ಜೂನಿಯರ್ ಕಾರ್ಯಕ್ರಮವನ್ನು ಒಂದು ವರ್ಷಗಳಿಂದ ಮಹಾಮಾರಿಯ ಕಾರಣದಿಂದಾಗಿ ಮಕ್ಕಳ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಲ್ಲಿಸಲಾಗಿತ್ತು.
ಆದರೆ 3 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಅತಿಶೀಘ್ರದಲ್ಲೇ ಪ್ರಸಾರವನ್ನು ಪ್ರಾರಂಭಿಸಲಿದೆ ಎಂಬುದಾಗಿ ಸುದ್ದಿಗಳು ಈಗಾಗಲೇ ಹೊರಬಂದಿದೆ. ಹೌದು ಮಾಸ್ಟರ್ ಆನಂದ್ ರವರು ನಿರೂಪಣೆ ಮಾಡಿಕೊಡುವಂತಹ ಪ್ರತಿಭಾನ್ವಿತ ಮಕ್ಕಳ ಕಾರ್ಯಕ್ರಮ ವಾಗಿರುವ ಡ್ರಾಮಾ ಜೂನಿಯರ್ ಇದೇ ಬೇಸಿಗೆಯಲ್ಲಿ ಪ್ರಾರಂಭವಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ. ಇನ್ನು ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಕೇವಲ ಲಕ್ಷ್ಮಿ ಅಮ್ಮನವರು ಮಾತ್ರ ಇದ್ದಾರೆ. ಈಗ ತೀರ್ಪುಗಾರರ ಸಾಲಿಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಒಬ್ಬರು ಸೇರ್ಪಡೆಯಾಗುತ್ತಿದ್ದಾರೆ.

ಹೌದು ಈ ಹಿಂದೆ ಲಕ್ಷ್ಮಿ ಅಮ್ಮ ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ್ ರಾಘವೇಂದ್ರ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಇದರಲ್ಲಿ ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ್ ರಾಘವೇಂದ್ರ ರವರು ಕಾರ್ಯಕ್ರಮದಿಂದ ಹೊರ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಕನ್ನಡದ ಖ್ಯಾತ ನಟಿ ಒಬ್ಬರು ಕೂಡ ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ವಿಚಾರವನ್ನು ಇನ್ನು ಮುಂದಿನ ದಿನಗಳಲ್ಲಿ ನಾವು ಕಾದುನೋಡಬೇಕಾಗಿದೆ.